ಹೆಣ್ತನ ಎನ್ನುವುದು ಸ್ವಾಭಾವಿಕ ಏನೂ ಅಲ್ಲ ಅದು ಒಂದು ಪ್ರದರ್ಶನ ಮಾತ್ರ. ಈ ಎಲ್ಲವೂ ಒಂದು ಸೆಟ್ ಆಫ್ ಹ್ಯಾಬಿಟ್ಸ್ ಮಾತ್ರ ಅನ್ನುತ್ತಾಳೆ ಸಿಮೋನ್ ದ ಬೋವಾ । ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ವಿಷಯ ವೈಜ್ಞಾನಿಕವಾಗಿ ಎಷ್ಟು ನಿಜವೋ ಗೊತ್ತಿಲ್ಲ ಆದರೆ ಫಿಲಾಸೊಫಿಕಲೀ ಅಂತೂ ಬಹಳ ಸತ್ಯ. ಹುಟ್ಟುವ ಸಮಯದಲ್ಲಿ ಗಂಡು, ಹೆಣ್ಣು ಎನ್ನುವ ಯಾವುದೂ ಇರುವುದಿಲ್ಲ. ಫ್ರೆಂಚ್ ತತ್ವಜ್ಞಾನಿ ಸಿಮೊನ್ ದ ಬೋವಾ ಯಾರನ್ನ ಆಧುನಿಕ ಫೆಮಿನಿಸಂ ನ ಮಹಾಮಾತೆ ಎಂದು ಗುರುತಿಸಲಾಗುತ್ತದೆಯೋ ಅವರು ಲಿಂಗ ಇತಿಹಾಸದ ಅತ್ಯಂತ ಪ್ರಸಿದ್ಧ ಮಾತೊಂದನ್ನು ಹೇಳುತ್ತಾರೆ, One is not born but rather becomes woman. ಜೀವಶಾಸ್ತ್ರ ಆಕೆಗೆ ಹೆಣ್ಣಿನ ದೇಹ ನೀಡಿರುವುದು ವಾಸ್ತವವಾದರೂ ಅವಳಿಗೆ ಹೆಣ್ಣಿನ ಪಾತ್ರ ನೀಡಿರುವುದು ಮಾತ್ರ ಸಮಾಜ ಮತ್ತು ಇದು ಕಾಲ್ಪನಿಕ ಕೂಡ.
ಮತ್ತು ಇತಿಹಾಸದ ದೊಡ್ಡ ದುರಂತ ಏನೆಂದರೆ ನಾವು ಜೈವಶಾಸ್ತ್ರೀಯ ವಾಸ್ತವವನ್ನು ಸಾಮಾಜಿಕ ಕಾಲ್ಪನಿಕತೆಯೊಂದಿಗೆ ಸೇರಿಸಿ ಗೊಂದಲ ಮಾಡಿಕೊಂಡು ಬಿಟ್ಟಿದ್ದೇವೆ. ನಾವು ಸಮಾಜದಲ್ಲಿ ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದನ್ನ ಗಮನಿಸಿ, ನಾವು ಹುಡುಗರಿಗೆ LEGO set ಕೊಡುತ್ತೇವೆ ಅದನ್ನು ಜೋಡಿಸುವುದನ್ನು ಕಲಿಸಿಕೊಡುತ್ತೇವೆ. ಅವರಿಗೆ ಅದನ್ನು explore ಮಾಡುವುದು ಹೇಗೆ ಎನ್ನುವುದನ್ನ ಕಲಿಸುತ್ತೇವೆ. ಅವರಿಗೆ ನಾವು ಗಟ್ಟಿಯಾಗಿ, ಕಠಿಣವಾಗಿ ಇರುವುದು ಹೇಗೆ ತಮ್ಮ ಜೀವನದ ಮುಖ್ಯ ಪಾತ್ರ ಆಗುವುದು ಹೇಗೆ ಎನ್ನುವುದನ್ನ ಕಲಿಸುತ್ತೇವೆ. ಆದರೆ ನಾವು ಹುಡುಗಿಯರಿಗೆ ಆಡಲು ಬೊಂಬೆ ಕೊಡುತ್ತೇವೆ, ಅವರಿಗೆ ನಾವು ಕಾಳಜಿ ಮಾಡುವುದನ್ನ, ಸಮಾಧಾನದಿಂದ ಇರುವುದನ್ನ ಹೇಳಿಕೊಡುತ್ತೇವೆ. ಅವರಿಗೆ ಸುಂದರವಾಗಿ ಕಾಣಿಸಿಕೊಳ್ಳುವುದನ್ನ ಮತ್ತು ಇನ್ನೊಬ್ಬರ ಬದುಕಿನಲ್ಲಿ ಸಹ ಪಾತ್ರಧಾರಿಯಾಗುವುದನ್ನ ಕಲಿಸುತ್ತೇವೆ.
ಆದ್ದರಿಂದ ಬೋವಾ ಹೇಳುವುದೇನೆಂದರೆ, ಹೆಣ್ತನ ಎನ್ನುವುದು ಸ್ವಾಭಾವಿಕ ಏನೂ ಅಲ್ಲ ಅದು ಒಂದು ಪ್ರದರ್ಶನ ಮಾತ್ರ. ಈ ಎಲ್ಲವೂ ಒಂದು ಸೆಟ್ ಆಫ್ ಹ್ಯಾಬಿಟ್ಸ್ ಮಾತ್ರ. ಉದಾಹರಣೆಗೆ ಅಲಂಕಾರ ಮಾಡಿಕೊಳ್ಳುವುದು, ಕಾಳಜಿ ಮಾಡುವುದು ಮುಂತಾಗಿ ಮತ್ತು ಈ ಎಲ್ಲವನ್ನೂ ಹುಡುಗಿಯರಿಗೆ ಮೂರು ವರ್ಷ ಇರುವಾಗಿನಿಂದಲೇ ಅವರ ತಲೆಯಲ್ಲಿ ತುಂಬಲಾಗಿರುತ್ತದೆ. ನೀವು ಸ್ವಾಭಾವಿಕವಾಗಿ ವಿಧೇಯರಲ್ಲ, ವಿಧೇಯತೆಯಲ್ಲಿ ನಿಮ್ಮನ್ನು ತರಬೇತುಗೊಳಿಸಲಾಗಿದೆ. ಸಹಜವಾಗಿ ನೀವು ಸೌಂದರ್ಯದ ಬಗ್ಗೆ obsessive ಅಲ್ಲ ಆದರೆ ನಿಮ್ಮ ಮೌಲ್ಯ ನಿಮ್ಮ ಚೆಲುವಿನ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ನಿಮಗೆ ಹೇಳಿಕೊಡಲಾಗಿದೆ.
ಆದ್ದರಿಂದ ಸಿಮೊನ್ ಹೇಳುವುದೇನೆಂದರೆ you are acting a gender & not living the biology, ನೀವು ಲಿಂಗ ಪಾತ್ರವನ್ನು ವನ್ನು ಅಭಿನಯಿಸುತ್ತಿದ್ದೀರಿಯೇ ಹೊರತು ಜೀವಶಾಸ್ತ್ರವನ್ನು ಬದುಕುತ್ತಿಲ್ಲ. ಇಲ್ಲಿಂದಲೇ ಹೊಸ ವಿಚಾರವೊಂದು ಹುಟ್ಟಿಕೊಳ್ಳುತ್ತದೆ, the other. ಹ್ಯುಮ್ಯಾನಿಟಿಯ ಪ್ರಕಾರ ಯಾರು ಗಂಡಸರಿದ್ದಾರೋ ಅವರೇ ಡಿಫಾಲ್ಟ್ ಮನುಷ್ಯರು. Man is the hero, Man is the leader ಇತ್ಯಾದಿಯಾಗಿ. ಆದರೆ ಹ್ಯುಮ್ಯಾನಿಟಿ ಹೆಣ್ಣನ್ನು ಹೇಗೆ ವ್ಯಾಖ್ಯಾನಿಸಿದೆಯೆಂದರೆ, someone in relation to man. ಆಕೆ ಅವನ ತಾಯಿ, ಹೆಂಡತಿ, ಸಹೋದರಿ, ಪ್ರೇಯಸಿ. ಆಕೆಯದು ಈ ಇತಿಹಾಸದ ಕತೆಯಲ್ಲಿ ಯಾವತ್ತೂ ಎರಡನೇಯ ಪಾತ್ರ, the second sex. ಬೋವಾ ಹೇಳುವದೇನೆಂದರೆ He ಎನ್ನುವುದು absolute, He ಎನ್ನುವುದು subject. ಆದರೆ She ಎನ್ನುವುದು ಮಾತ್ರ other. ಸಿಮೋನ್ ಪ್ರಕಾರ ಇದೊಂದು ಮಾನಸಿಕ ಜೈಲು, ಮತ್ತು ಹೆಣ್ಣನ್ನು ಇಲ್ಲಿ ತರಬೇತುಗೊಳಿಸಲಾಗುತ್ತದೆ. ಮತ್ತು ಹೆಣ್ಣು ಪರಿಪೂರ್ಣ other ಆಗಲು ಪೂರ್ತಿ ಬದುಕನ್ನೇ ಪಣವಾಗಿಡುತ್ತಾಳೆ.
ಆದ್ದರಿಂದ ಸ್ವಾತಂತ್ರ್ಯದ ಉದ್ದೇಶ ಈ ಪಾತ್ರವನ್ನು ಇನ್ನೂ ಉತ್ತಮವಾಗಿ ಅಭಿನಯಿಸಲು ಅವಳನ್ನು empower ಗೊಳಿಸುವುದು ಆಗಿರಬಾರದು. ಬದಲಾಗಿ, ಸ್ವಾತಂತ್ರ್ಯದ ಉದ್ದೇಶ ಈ ಪಾತ್ರವನ್ನೇ ನಾಶಗೊಳಿಸುವುದಾಗಿರಬೇಕು. ಹೀಗೆ ಆಗಲು ಆಕೆ ಗಂಡಸಿನಂತೆ ಅಭಿನಯಿಸಲು ಶುರು ಮಾಡಬಾರದು, ಬದಲಾಗಿ ಯಾವ ಪಾತ್ರಗಳನ್ನು ಅವಳ ಮೇಲೆ ಹೇರಲಾಗುತ್ತಿದೆಯೋ, to be polite, to look beautiful, to adjust ಇವೆಲ್ಲವೂ ಅವಳ ಕೊನೆಯ ನಿಯತಿ ಅಲ್ಲ ಎನ್ನುವುದನ್ನ ಆಕೆಗೆ ಅರ್ಥ ಮಾಡಿಸಬೇಕು. ಈ ಎಲ್ಲವೂ ಅವಳ ಮೇಲೆ ಸಮಾಜ ಹೊದಿಸಿರುವ costume. ಮತ್ತು ಈ ಎಲ್ಲವನ್ನು ಯಾವಾಗ ಬೇಕೋ ಆಗ ಕಳಚಿಬಿಡಲು ಅವಳು ಸ್ವತಂತ್ರಳು ಎನ್ನುವುದನ್ನ ಆಕೆ ಗೊತ್ತು ಮಾಡಿಕೊಳ್ಳಬೇಕು

