ಅರಿಸ್ಟಾಟಲ್‌ನ ಮನವೊಲಿಕೆಯ ಮೂರು ಮಾರ್ಗಗಳು

ರಿಸ್ಟಾಟಲ್ ತನ್ನ ‘ರೈಟರಿಕ್’ (Rhetoric) ಎಂಬ ಕೃತಿಯಲ್ಲಿ ವಿವರಿಸಿದ ‘ತ್ರೀ ಎಥೋಸ್’ ಅಥವಾ ‘ತ್ರೀ ಮೋಡ್ಸ್ ಆಫ್ ಪರ್ಸುಯೇಷನ್’ (Three Modes of Persuasion) ಬಗ್ಗೆ ಹೇಳುತ್ತಾನೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಮಾತಿನಿಂದ ಅಥವಾ ಬರಹದಿಂದ ಇನ್ನೊಬ್ಬರನ್ನು ಒಪ್ಪಿಸಬೇಕಾದರೆ (ಮನ ಒಲಿಸಬೇಕಾದರೆ) ಈ ಮೂರು ಅಂಶಗಳು ಅತ್ಯಗತ್ಯ ಎಂದು ಅರಿಸ್ಟಾಟಲ್ ಹೇಳುತ್ತಾನೆ । ಸಂಗ್ರಹ – ಅನುವಾದ : ಚೇತನಾ ತೀರ್ಥಹಳ್ಳಿ

ಎಥೋಸ್ (Ethos) – ವಿಶ್ವಾಸಾರ್ಹತೆ

ಇದು ಮಾತನಾಡುವ ವ್ಯಕ್ತಿಯ ಚಾರಿತ್ರ್ಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು. ಒಬ್ಬ ವ್ಯಕ್ತಿ ಎಷ್ಟೇ ಜ್ಞಾನಿಯಾಗಿದ್ದರೂ, ಕೇಳುವವರಿಗೆ ಆತನ ಮೇಲೆ ನಂಬಿಕೆ ಇಲ್ಲದಿದ್ದರೆ ಆತನ ಮಾತು ಫಲಪ್ರದವಾಗುವುದಿಲ್ಲ. ಉದಾಹರಣೆಗೆ, ಒಬ್ಬ ಅನುಭವಿ ವೈದ್ಯರು ಆರೋಗ್ಯದ ಬಗ್ಗೆ ಸಲಹೆ ನೀಡಿದರೆ ನಾವು ನಂಬುತ್ತೇವೆ (ಅವರ ಪದವಿ ಮತ್ತು ಅನುಭವ ಅವರ ‘Ethos’). ಅದೇ ಕೆಲಸವನ್ನು ದಾರಿಯಲ್ಲಿ ಹೋಗುವ ಅಪರಿಚಿತ ವ್ಯಕ್ತಿ ಮಾಡಿದರೆ ನಾವು ಅಷ್ಟಾಗಿ ಗಮನಿಸುವುದಿಲ್ಲ.

ಪಥೋಸ್ (Pathos) – ಭಾವನೆ

ಇದು ಕೇಳುಗರ ಭಾವನೆಗಳನ್ನು ತಟ್ಟುವುದು. ಕೇವಲ ತರ್ಕದಿಂದ ಮನುಷ್ಯರನ್ನು ಗೆಲ್ಲಲು ಸಾಧ್ಯವಿಲ್ಲ; ಅವರ ಕರುಣೆ, ಕೋಪ, ಭಯ ಅಥವಾ ಪ್ರೀತಿಯನ್ನು ಎಚ್ಚರಿಸುವ ಮೂಲಕ ಅವರನ್ನು ಒಂದು ನಿರ್ಧಾರಕ್ಕೆ ಬರುವಂತೆ ಮಾಡುವುದು. ಉದಾಹರಣೆಗೆ, ಸೇವಾ ಸಂಸ್ಥೆಗಳು ದಾರುಣವಾದ ಫೋಟೋ ತೋರಿಸಿ ಹಣ ಸಂಗ್ರಹಿಸುವುದು. ಇಲ್ಲಿ ಅವರು ನಿಮ್ಮ ತರ್ಕಕ್ಕಿಂತ ಹೆಚ್ಚಾಗಿ ನಿಮ್ಮ ‘ಕರುಣೆ’ (Pathos) ಯನ್ನು ಬಳಸಿಕೊಳ್ಳುತ್ತಾರೆ.

ಲೋಗೋಸ್ (Logos) – ತರ್ಕ

ಇದು ದತ್ತಾಂಶ, ಅಂಕಿಅಂಶ ಮತ್ತು ವೈಜ್ಞಾನಿಕ ವಿಚಾರಗಳಿಗೆ ಸಂಬಂಧಿಸಿದ್ದು. ಮಾತಿನಲ್ಲಿ ಸ್ಪಷ್ಟತೆ ಇರಬೇಕು ಮತ್ತು ಅದು ಬುದ್ಧಿವಂತಿಕೆಗೆ ಅನ್ವಯಿಸುವಂತಿರಬೇಕು, ಸೂಕ್ತ ಸಾಕ್ಷ್ಯ ಕಣ್ಣೆದುರು ಒದಗಿಸಬೇಕು. ಉದಾಹರಣೆಗೆ, ಒಂದು ಮೊಬೈಲ್ ಫೋನ್ ಜಾಹೀರಾತಿನಲ್ಲಿ ಅದರ ಪ್ರೊಸೆಸರ್ ವೇಗ, ಬ್ಯಾಟರಿ ಸಾಮರ್ಥ್ಯ ಮತ್ತು ಬೆಲೆಯನ್ನು ಹೋಲಿಕೆ ಮಾಡಿ ತೋರಿಸುವುದು. ಇದು ‘Logos’.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.