ಕನ್ನಡಕ್ಕೆ: ಚಿದಂಬರ ನರೇಂದ್ರ
೧೮ ನೇ ಶತಮಾನದಲ್ಲಿ ಈ ಅರಿವಿನ ಪಕ್ಷಪಾತ (cognitive bias) ಜನರನ್ನು ಕೊಂದಷ್ಟು ಯಾವ ಕಾಯಿಲೆಯೂ ಕೊಂದಿಲ್ಲ. 1857 ರಲ್ಲಿ ವಿಯೆನ್ನಾದ ಸಾರ್ವಜನಿಕ ಆಸ್ಪತ್ರೆಯಲ್ಲಿ Ignaz Semmelweis ಎನ್ನುವ ವೈದ್ಯ ಕೆಲಸ ಮಾಡುತ್ತಿದ್ದ. ಈ ಆಸ್ಪತ್ರೆಯ ವಾರ್ಡ ೧ ರಲ್ಲಿ ಡಾಕ್ಟರ್ ಗಳು ಹೆರಿಗೆ ಮಾಡಿಸುತ್ತಿದ್ದರು ಮತ್ತು ಅಲ್ಲಿ ನವಜಾತ ಶಿಶು ಮರಣದ ದರ ಪ್ರತಿಶತ 10% ರಷ್ಟಿತ್ತು. ಮತ್ತು ಅದೇ ಆಸ್ಪತ್ರೆಯ ವಾರ್ಡ ೨ ರಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸುತ್ತಿದ್ದರು ಮತ್ತು ಆ ವಾರ್ಡ್ ನಲ್ಲಿ ಶಿಶುಮರಣದ ದರ ಕೇವಲ ಪ್ರತಿಶತ 4% ರಷ್ಟಿತ್ತು. ಅದೇ ಆಸ್ಪತ್ರೆ, ಅದೇ ವಾತಾವರಣ, ಅದೇ ಜನ ಆದರೆ ಸಾವಿನ ಪ್ರಮಾಣ ಮಾತ್ರ ಅರ್ಧದಷ್ಟು.
ಈ ವ್ಯತ್ಯಾಸವನ್ನು ಅಭ್ಯಾಸ ಮಾಡಿದ ಡಾ. ಇಗ್ನಜ್ ಗಮನಿಸಿದ್ದು ಏನೆಂದರೆ ಡಾಕ್ಟರ್ ಗಳು ನೇರ autopsy ಕೋಣೆಯಿಂದ ಕೈ ತೊಳೆದುಕೊಳ್ಳದೇ ಬಂದು ಈ ಹೆರಿಗೆಗಳನ್ನು ಮಾಡಿಸುತ್ತಿದ್ದದ್ದು. ಆದ್ದರಿಂದ ಡಾ. ಇಗ್ನಜ್ ಆ ಡಾಕ್ಟರ್ ಗಳಿಗೆಲ್ಲ ಒಂದು ಸರಳ ಪ್ರೊಟೋಕಾಲ್ ಸೂಚಿಸಿದ. ಹೆರಿಗೆ ಮಾಡಿಸುವುದಕ್ಕಿಂತ ಮೊದಲು ಅವರು ತಮ್ಮ ಕೈಗಳನ್ನ ಕ್ಲೋರಿನ್ ನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ತಿಂಗಳಿನಲ್ಲಿಯೇ ಶಿಶು ಮರಣದ ದರ 1% ನಷ್ಟು ಕಡಿಮೆಯಾಯಿತು. ಜೀವಗಳನ್ನು ಉಳಿಸಿದ್ದಕ್ಕೆ ಸಾಕ್ಷಿ ಕಣ್ಣ ಮುಂದಿತ್ತು.
ಈ ಕಾರಣವಾಗಿ ವೈದ್ಯ ಸಮುದಾಯ ಡಾ. ಇಗ್ನಜ್ ನ ಸಂಭ್ರಮಿಸಬೇಕಿತ್ತು ಅಲ್ವಾ? ಆದರೆ ಹಾಗಾಗಲೇ ಇಲ್ಲ. ಬದಲಾಗಿ ಆ ವೈದ್ಯರೆಲ್ಲ ಸೇರಿ ಡಾ. ಇಗ್ನಜ್ ನ ಬದುಕನ್ನೇ ನಾಶಮಾಡಿದರು. ಯಾಕೆ ಹೀಗಾಯಿತು, ಇದಕ್ಕೆ ಕಾರಣ ಆ ವೈದ್ಯರುಗಳ confirmation bias. ಈ ಡಾಕ್ಟರ್ ಗಳು ದಶಕಗಳಿಂದ ಶಿಶುಮರಣದ ಕಾರಣ, ಕೆಟ್ಟ ಗಾಳಿ, Imbalanced humors, (refer to the ancient Greek theory that physical and mental illnesses arise from an excess or deficiency of four bodily fluids: blood, yellow bile, black bile, and phlegm) ಮತ್ತು ದೈವಿಶಾಪ ಎಂದು ಬಲವಾಗಿ ನಂಬಿದ್ದು. ಮತ್ತು ಅವರು ತಮ್ಮ ಇಡೀ ವೈದ್ಯಕೀಯ ಬದುಕನ್ನ ಈ ಥಿಯರಿಯ ಸುತ್ತ ಕಟ್ಟಿಕೊಂಡಿದ್ದರು. ಓದು ಬರಹ ಕಲಿತ ವೈದ್ಯರುಗಳು ಸಾವನ್ನು ಹೀಗೆ ತಮ್ಮ ಕೈಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದುದು ಅವರ ಯೋಚನೆಗೆ ನಿಲುಕದ ಮತ್ತು ಮನ ನೋಯಿಸುವ ಸಂಗತಿಯಾಗಿತ್ತು.
ಆದ್ದರಿಂದ ಈ ವೈದ್ಯರುಗಳು ತಮ್ಮ ಥಿಯರಿಗೆ ಫಿಟ್ ಆಗುವ ಸಂಗತಿಗಳನ್ನ ಪಬ್ಲಿಶ್ ಮಾಡಿ ಪ್ರಚಾರ ಮಾಡಿದರು ಮತ್ತು ಡಾ. ಇಗ್ನಜ್ ನ ಸಲಹೆಯನ್ನು ಕೇವಲ ಕಾಕತಾಳೀಯ ಎಂದು ಹೇಳಿ ನಿರಾಕರಿಸಿಬಿಟ್ಟರು. ಅವರು ಡಾ. ಇಗ್ನಜ್ ನ ತಮಾಷೆ ಮಾಡಿದರು, ಒಂಟಿ ಮಾಡಿದರು, ದೂಷಣೆ ಮಾಡಿದರು, ನಾನಾ ಬಗೆಯ ಕಾಟ ಕೊಟ್ಟು ವಿಯೆನ್ನಾದಿಂದ ಹೊರಗೆ ಹಾಕಿಬಿಟ್ಟರು. ತಾನು ಸಲುಹಲು ಬಯಸಿದ ವೃತ್ತಿಯಿಂದ ದೂಷಿತನಾಗಿ ಡಾ. ಇಗ್ನಜ್ ತನ್ನ 47 ನೇ ವಯಸ್ಸಿನಲ್ಲಿ ಮಾನಸಿಕ ಆಸ್ಪತ್ರೆಯೊಂದರಲ್ಲಿ ಕೊನೆಯ ಉಸಿರೆಳೆದ.
ಇದಾದ ಇಪ್ಪತ್ತು ವರ್ಷಗಳ ನಂತರ ಲೂಯಿ ಪಾಶ್ಚರ್ ನ Germ theory ಪ್ರಸಿದ್ಧವಾಗಿ hand washing ಆಸ್ಪತ್ರೆಗಳಲ್ಲಿ ಒಂದು Standard procedure ಆಗಿ ಬಳಕೆಯಲ್ಲಿ ಬಂತು. ಇದು ಹೊಸ ವಿಷಯವೇನಾಗಿರಲಿಲ್ಲ ಆದರೆ ಮೊದಲು ಹಳೆಯ ಪರಿಪಾಲಕರು ಸತ್ತು ಹೋಗಬೇಕಿತ್ತು.
ಈಗ ನಿಮಗೆ ಒಂದು uncomfortable ಪ್ರಶ್ನೆ. ನೀವು ಯಾವ hand washing ನ ನಿರಾಕರಿಸುತ್ತಿದ್ದೀರಿ? ನಿಮ್ಮ ಟೀಂ ಮೆಂಬರ್ ಗಳು ನಿಮ್ಮ ಬಗ್ಗೆ ಕೊಡುತ್ತಿರುವ ನಿರಂತರ ಫೀಡ್ ಬ್ಯಾಕ್ ನ ?ಸಂಬಂಧದಲ್ಲಿನ ನಿಮ್ಮ ವರ್ತನೆಗಳ ಬಗ್ಗೆ ನಿಮ್ಮ ಪಾರ್ಟನರ್ ಕೊಡುತ್ತಿರುವ ಸಲಹೆಯನ್ನ? ನಿಮ್ಮ ಹಲವು ವರ್ಷಗಳ expertise ನ contradict ಮಾಡುತ್ತಿರುವ business condition ನ? ಅಥವಾ ನಿಮ್ಮ ಐಡೆಂಟಿಯನ್ನು ಚಾಲೇಂಜ್ ಮಾಡುತ್ತಿರುವ political view ನ ? ಯೋಚಿಸಿ.
********************************

