ಕನ್ನಡಕ್ಕೆ: ಚಿದಂಬರ ನರೇಂದ್ರ
ಬಹಳಷ್ಟು ಜನರಿಗೆ ಈ ಮಾತು ಕಹಿ ಅನಿಸಬಹುದು. ನಿಮ್ಮನ್ನು ನೀವು ಫೆಮಿನಿಸ್ಟ್ ಎಂದುಕೊಳ್ಳುತ್ತೀರಿ, ಪುರುಷಾಧಿಪತ್ಯವನ್ನು ನಾಶಮಾಡಬಯಸುತ್ತೀರಿ, ಸಮಾನ ವೇತನದ ಬಗ್ಗೆ ಮಾತನಾಡುತ್ತೀರಿ, ಮಹಿಳೆಯರ ಅಧಿಕಾರದ ಬಗ್ಗೆ ಮಾತನಾಡುತ್ತೀರಿ, ಆದರೆ ನೀವು ನಿಮ್ಮ ಜಾತಿಯಲ್ಲಿಯೇ, ನಿಮ್ಮ ಸಮುದಾಯದಲ್ಲಿಯೇ ನಿಶ್ಚಿತವಾದ ಮದುವೆಗಳನ್ನು ಒಪ್ಪಿಕೊಳ್ಳುತ್ತೀರಾದರೆ ನೀವು ಸಿಸ್ಟಂ ನ ಮುರಿಯುತ್ತಿಲ್ಲ ಬದಲಾಗಿ ನೀವು ಸಿಸ್ಟಂನ ರಕ್ಷಣೆ ಮಾಡುತ್ತಿದ್ದೀರಿ. ಆಗ ನೀವು ಜಾತಿ ಪದ್ಧತಿಯ ಸೆಕ್ಯುರಿಟಿ ಗಾರ್ಡ್ ನ ಹಾಗೆ ಕೆಲಸ ಮಾಡುತ್ತಿದ್ದೀರಿ.
ಈ ಕಹಿ ಸತ್ಯವನ್ನೇ ಬಾಬಾಸಾಹೇಬ ಅಂಬೇಡ್ಕರ್ ಮತ್ತು ಫೆಮಿನಿಸ್ಟ್ ಇತಿಹಾಸಕಾರ್ತಿ ಉಮಾ ಚಕ್ರವರ್ತಿ ಅನಾವರಣಗೊಳಿಸಿದ್ದು. ಅವರು, ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಜಾತಿಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದು ಎರಡು ಕೂಡ ಒಂದೇ ರಾಕ್ಷಸನ ಎರಡು ಮುಖಗಳು ಎಂದು ಹೇಳಿದರು. ಇದನ್ನೇ ನಮ್ಮ ಸಾಂಪ್ರದಾಯಿಕ ಮದುವೆಗಳು ಜೀವಂತವಾಗಿಟ್ಟಿರುವುದು. ಜಾತಿ ವ್ಯವಸ್ಥೆ ಒಂದೇ ಕಠಿಣ ನಿಯಮದ ಮೇಲೆ ನಿಂತಿದೆ ಎಂದು ಡಾ. ಅಂಬೇಡ್ಕರ ವಾದ ಮಾಡುತ್ತಾರೆ, ಅದೇ ಒಳಜಾತಿಯ ಮದುವೆ (Endogamy). ಹೀಗೆಂದರೆ ತಮ್ಮದೇ ಜಾತಿ ಸಮುದಾಯಗಳಲ್ಲಿ ಮದುವೆಯಾಗುವುದು.
ಆದರೆ ಸಮಾಜ, ಈ ಒಳಜಾತಿಯ ಮದುವೆಯನ್ನು ಜನ ಕಠಿಣವಾಗಿ ಪಾಲಿಸಬೇಕು ಎನ್ನುವುದನ್ನ ಹೇಗೆ ನಿಶ್ಚಿತಗೊಳಿಸುತ್ತದೆ ? ಹೇಗೆಂದರೆ ಮಹಿಳೆಯರ ಲೈಂಗಿಕತೆಯನ್ನು ಪೂರ್ತಿಯಾಗಿ ಕಂಟ್ರೋಲ್ ಮಾಡುವುದರಿಂದ. ಮಹಿಳೆಯರು ಜಾತಿ ಪದ್ಧತಿಯ ಗೇಟ್ ಕೀಪರ್ ಗಳು. ಒಮ್ಮೆ ಮಹಿಳೆಗೆ ತನ್ನ ಇಚ್ಛೆಯನುಸಾರ ಪ್ರೇಮಿಸುವ, ಮದುವೆಯಾಗುವ ಅಧಿಕಾರ ಸಿಕ್ಕಿತಾದರೆ ಆಕೆ ಯಾವ ಜಾತಿಯ ಹುಡುಗನನ್ನಾದರೂ ಪ್ರೇಮಿಸಬಹುದು. ಹೀಗೇನಾದರೂ ಆದರೆ ಜಾತಿಯ ಗೋಡೆಗಳು ಮುರಿದು ಬೀಳುತ್ತವೆ. Blood line ನ ಸೋಕಾಲ್ಡ್ ಪವಿತ್ರತೆ ನಾಶವಾಗುತ್ತದೆ. ಆದ್ದರಿಂದಲೇ ಸಮಾಜ ಕೆಲ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತಿದೆ, ಬಾಲ್ಯವಿವಾಹ, ಮರ್ಯಾದೆಹತ್ಯೆ, ಹೆಣ್ಣು ಹೊಸ್ತಿಲು ದಾಟಬಾರದು ಎನ್ನುವ ನಿಯಮ, ಮತ್ತು ಹೆಣ್ಣಿನ ಪಾವಿತ್ರ್ಯತೆಯ ಬಗ್ಗೆ ಅತಿಯಾದ obsession. ಈ ಎಲ್ಲ ನಿಯಮಗಳು ಯಾಕಿವೆ ಎಂದರೆ, ಗಂಡು ಹೆಣ್ಣನ್ನು ದ್ವೇಷಿಸುತ್ತಾನೆ ಅಂತಲ್ಲ, ಬದಲಾಗಿ ಜಾತಿವ್ಯವಸ್ಥೆಯನ್ನು ಸದಾ ಮುಂದುವರೆಯುವಂತೆ ಮಾಡುವುದಕ್ಕಾಗಿ.
ಈ ಸಂದರ್ಭದಲ್ಲಿಯೇ ಉಮಾ ಚಕ್ರವರ್ತಿ ಒಂದು ಪದಬಳಕೆ ಮಾಡುತ್ತಾರೆ Brahminical Patriarchy. ಇಲ್ಲಿ ಅವರು ಮೇಲ್ಜಾತಿಯ ಸ್ತ್ರೀವಾದಿಗಳ hypocrisy ನ ಬೆಟ್ಟು ಮಾಡಿ ತೋರಿಸುತ್ತಾರೆ. ನಿಮ್ಮ ಮೇಲೆ ಸುಶೀಲ, ಆಜ್ಞಾಕಾರಿ ಹೆಣ್ಣಾಗಿ ಬದುಕುವ ಒತ್ತಡ ಇದೆ ನಿಜ ಆದರೆ ಈ ಒತ್ತಡ ಯಾಕೆ ಇದೆ ಎನ್ನುವುದನ್ನ ನೀವು ಗಮನಿಸುವುದಿಲ್ಲ. ಈ ಒತ್ತಡ ಯಾಕೆ ಇದೆ ಎಂದರೆ ನಿಮ್ಮ ತಂದೆ ತಾಯಿ ನಿಮ್ಮ ಮದುವೆಯನ್ನ ನಿಮ್ಮ ಜಾತಿಯಲ್ಲಿಯೇ ಮಾಡಿ ಸಮಾಜದಲ್ಲಿ ತನ್ನ ಪ್ರತಿಷ್ಠೆಯನ್ನ ಉಳಿಸಿಕೊಳ್ಳಬಯಸುತ್ತಿದ್ದಾರೆ. ಉಮಾ ಚಕ್ರವರ್ತಿಯವರ ಪ್ರಕಾರ, ಮೇಲ್ಜಾತಿಯ ಪ್ರಗತಿಪರರು ಒಂದು dark bargain ಮಾಡಿಕೊಂಡಿದ್ದಾರೆ. ಅವರು ತಮ್ಮ ಲೈಂಗಿಕ ಮತ್ತು ರೋಮ್ಯಾಂಟಿಕ್ ಸ್ವಾತಂತ್ರ್ಯಕ್ಕೆ ಬದಲಾಗಿ ಜಾತಿ ಪ್ರತಿಷ್ಠೆಯನ್ನು ಅಪ್ಪಿಕೊಂಡಿದ್ದಾರೆ. ಅವರು ಜಾತಿಗಾಗಿ ಒಂದು reproductive tool ಆಗುವುದನ್ನ ಒಪ್ಪಿಕೊಂಡಿದ್ದಾರೆ. ಹಾಗೆ ಮಾಡುವುದರ ಮೂಲಕ ಕೆಳಜಾತಿಯ ಜನರಿಗಿಂತ ಉನ್ನತ ಸ್ಥಾನ ಮಾನವನ್ನು ಎಂಜಾಯ್ ಮಾಡಲು ಬಯಸಿದ್ದಾರೆ.
ಯಾವಾಗ ನೀವು dating app ನಲ್ಲಿ ಕಮ್ಯುನಿಟಿ ಫಿಲ್ಟರ್ ಹಾಕುತ್ತೀರೋ ಅಥವಾ ನಿಮ್ಮ ತಂದೆ ತಾಯಿಗೆ ಯೋಗ್ಯ ವರನನ್ನು ಹುಡುಕಲು ಹೇಳುತ್ತೀರೋ ಆಗ ನೀವು ಕೇವಲ ಪರಂಪರೆಯನ್ನು ಮಾತ್ರ ನಿಭಾಯಿಸುತ್ತಿಲ್ಲ, ನೀವು ಕ್ರಿಯಾತ್ಮಕವಾಗಿ ಜಾತಿವ್ಯವಸ್ಥೆಯನ್ನೂ ಪಾಲಿಸುತ್ತಿದ್ದೀರಿ. ಕಟು ವಾಸ್ತವ ಏನೆಂದರೆ ಜಾತಿವ್ಯವಸ್ಥೆಯನ್ನು ಅಪ್ಪಿಕೊಂಡು ಪುರುಷಾಧಿಪತ್ಯವನ್ನು ಚಾಲೇಂಜ್ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಜಾತಿವ್ಯವಸ್ಥೆಯೇ ಪುರುಷಾಧಿಪತ್ಯ. ನೀವು ಭಾರತದಲ್ಲಿ ನಿಜವಾಗಿ ಬಂಡುಖೋರರಾಗಬೇಕಾದರೆ, ನಿಜವಾದ ಫೆಮಿನಿಸ್ಟ್ ಆಗಬೇಕಾದರೆ, ನಿಜವಾದ ಬಂಡಾಯ ಬಟ್ಟೆ ಧರಿಸುವುದರಲ್ಲಿ, ಸಮಾನ ಉದ್ಯೋಗ ಪಡೆಯುವುದರಲ್ಲಿ ಇಲ್ಲ, ನಿಜವಾದ ಬಂಡಾಯದ ಎಂದರೆ ನಿಮ್ಮ ಇಚ್ಛೆಯನುಸಾರ ಪ್ರೇಮಿಸುವುದು ಮತ್ತು ಅವರು ಕಾಪಾಡಲೆತ್ನಿಸುತ್ತಿರುವ blood line ನ್ನ ನಾಶ ಮಾಡುವುದು.

