ಸತ್ಯವನ್ನು ಅರ್ಥ ಮಾಡಿಕೊಳ್ಳಲು 3 ಸಂಗತಿಗಳು

ಜನ ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎನ್ನುವುದು ಖಚಿತವಾಗಿದ್ದಾಗ ಮಾತ್ರ ತಮ್ಮ ನಿಜರೂಪವನ್ನು ಹೊರಗೆ ಹಾಕುತ್ತಾರೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮಗೆ ಒಬ್ಬ ವ್ಯಕ್ತಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅರ್ಥ ಮಾಡಿಕೊಳ್ಳಬೇಕೆಂದರೆ ಕೇವಲ ಅವರ ಮಾತು ಕೇಳಿಸಿಕೊಂಡರೆ ಸಾಕಾಗುವುದಿಲ್ಲ. ಏಕೆಂದರೆ ಜನ ನೀವು ಕೇಳ ಬಯಸುವ ಮಾತುಗಳನ್ನೇ ಆಡುತ್ತಾರೆ. ನಿಮಗೆ ಅವರ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದ್ದರೆ ನೀವು ಈ ಮೂರು ಸಂಗತಿಗಳ ಬಗ್ಗೆ ಗಮನ ಹರಿಸಬೇಕು.

  1. ಮೊದಲನೇಯದು, ಗಮನಿಸಿ ಅವರು ಯಾವ ಸಂದರ್ಭಗಳಲ್ಲಿ, ಯಾವು ಮಾತುಗಳನ್ನ ಕೇಳಿ ನಗುತ್ತಾರೆ ಎನ್ನುವುದನ್ನ. ಏಕೆಂದರೆ ನಗು ಕೇವಲ ಅವರ ಆಯ್ಕೆಯಾಗಿರುವುದಿಲ್ಲ. ಇದು ಅವರ ಸುಪ್ತ ಪ್ರಜ್ಞೆಯ instinct. ಇದು ಯಾವೆಲ್ಲ ಸಂಗತಿಗಳು ಅವರ ಮೆದುಳಿನಲ್ಲಿ ಸಾಮಾನ್ಯೀಕರಣಗೊಂಡಿವೆ (normalise) ಎನ್ನುವುದನ್ನು ಸೂಚಿಸುತ್ತದೆ. ಅವರು ಇನ್ನೊಬ್ಬರ ದುರ್ಬಲತೆ, ಅಥವಾ ಇನ್ನೊಬ್ಬರ ದುಃಖವನ್ನು ನೋಡಿ ನಗುತ್ತಾರಾದರೆ, ಇದು ಹೊರಗಿನಿಂದ ಕಾಣುವ ಅವರ ಪರಿಪೂರ್ಣ ವ್ಯಕ್ತಿತ್ವದ ಒಳಗೂ ಒಂದು dark side ಇದೆ ಎನ್ನುವುದನ್ನ ತೋರಿಸುತ್ತದೆ.
  2. ಎರಡನೇಯದು, ಗಮನಿಸಿ ಅವರು ಎಲ್ಲಕ್ಕಿಂತ ಹೆಚ್ಚು show off ಯಾವುದರ ಬಗ್ಗೆ ಮಾಡುತ್ತಾರೆ ಎನ್ನುವುದನ್ನ. ಸೈಕಾಲಜಿಯಲ್ಲಿ ಇದನ್ನ compensation ಎನ್ನುತ್ತಾರೆ. ಮನುಷ್ಯನಿಗೆ ಯಾವುದನ್ನ ಕಳೆದುಕೊಳ್ಳುವ ಭಯ ಹೆಚ್ಚಿದೆಯೋ ಅವನು ಆ ಸಂಗತಿಗಳ ಬಗ್ಗೆಯೇ ಹೆಚ್ಚು ತೋರಿಕೆ ಮಾಡುತ್ತಾನೆ. ಎಲ್ಲಿ ಅವರ ಅಸುರಕ್ಷತೆ ಅಡಗಿಕೊಂಡಿದೆಯೋ ಅಲ್ಲಿಯೇ ಅವರ ಅಹಂ ಕೂಡ ನೆಲೆಯಾಗಿರುತ್ತದೆ.
  3. ಮೂರನೇಯದು, ಗಮನಿಸಿ ಅವರು ಯಾವ ಸಂಗತಿಗಳ ಬಗ್ಗೆ ಹೆಚ್ಚು complain ಮಾಡುತ್ತಾರೆ ಎನ್ನುವುದನ್ನ. ಇದು, ಜಗತ್ತು ಯಾವ ಸಂಗತಿಗಳ ಬಗ್ಗೆ ಅವರಿಗೆ ಕೃತಜ್ಞರಾಗಿರಬೇಕೆಂದು ಅವರು ಬಯಸುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಮತ್ತೇ ಇದೇ ಕಾರಣವಾಗಿ ಅವರ ಮಾನಸಿಕತೆಯನ್ನೂ.

ಈ ಮೂರು ಸಂಗತಿಗಳೂ ಬಹಳ ಮುಖ್ಯ ಏಕೆಂದರೆ ಹತ್ತು ನಿಮಿಷದ ಮಾತುಕತೆಯಲ್ಲಿ ಯಾರು ಕೂಡ ಪರಿಪೂರ್ಣ ವ್ಯಕ್ತಿತ್ವದ ಸೋಗು ಹಾಕಿಕೊಂಡು ನಿಮ್ಮನ್ನು ಹಾದಿ ತಪ್ಪಿಸಬಹುದು. ಆದರೆ ಈ ಪಕಿಪಾಠಗಳು (patterns) ಯಾವತ್ತೂ ಸುಳ್ಳು ಹೇಳುವುದಿಲ್ಲ. ಏಕೆಂದರೆ ಜನ ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎನ್ನುವುದು ಖಚಿತವಾಗಿದ್ದಾಗ ಮಾತ್ರ ತಮ್ಮ ನಿಜರೂಪವನ್ನು ಹೊರಗೆ ಹಾಕುತ್ತಾರೆ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.