ಮರೆವು ಸಾಧ್ಯವಾಗದು ಎಲ್ಲ ಸಲವೂ…

ಕನ್ನಡಕ್ಕೆ: ಚಿದಂಬರ ನರೇಂದ್ರ

ವೋ ಅಫಸಾನಾ ಜಿಸೆ
ಅಂಜಾಮ್ ತಕ್ ಲಾನಾ ನಾ ಮುಮ್ಕೀನ್,
ಉಸೇ ಇಕ್ ಖೂಬಸೂರತ್ ಮೋಡ್  ದೇ ಕರ
ಛೋಡನಾ ಅಚ್ಛಾ

~ ಸಾಹಿರ್ ಲೂಧಿಯಾನ್ವಿ

ನಿಮಗೆ ಯಾವಾಗಲಾದರೂ ಹೀಗೆ ಅನಿಸಿದೆಯಾ? ನಿಮಗೆ ಒಬ್ಬ ವ್ಯಕ್ತಿಯನ್ನು,  ಯಾರ ಜೊತೆ ನಿಮ್ಮ ಸಂಬಂಧ ಸರಿಯಾಗಿ ಇನ್ನೂ ಶುರು ಕೂಡ ಆಗಿರಲಿಲ್ಲವೋ  ಅವರನ್ನು  ಪೂರ್ತಿಯಾಗಿ ಮರೆಯುವುದು ನಿಮಗೆ ಸಾಧ್ಯವಾಗುತ್ತಿಲ್ಲ.  ಬಯಸಿಯೂ, ಸಾವಿರಾರು ಬಾರಿ ಪ್ರಯತ್ನ ಮಾಡಿದರೂ ಆ ವ್ಯಕ್ತಿಯನ್ನು ಮರೆಯುವುದು ನಿಮಗೆ ಸಾಧ್ಯವಾಗುತ್ತಿಲ್ಲ. ಆಗ ನಿಮಗೆ, ಎಲ್ಲಿ ಇದು ನಿಮ್ಮ ನಿಜ ಪ್ರೇಮ ಇರಬಹುದಾ ಎನ್ನುವ ಸಂದೇಹ ಉಂಟಾಗಬಹುದು. ಆದರೆ ನೆನಪಿಟ್ಟುಕೊಳ್ಳಿ ಇದು ನಿಜ ಪ್ರೇಮವೇನೂ ಅಲ್ಲ. ಇದು ನಿಮ್ಮ ಮೈಂಡ್ ನ ಕಾರಸ್ಥಾನ, ಅದು ಯಾವ ಕತೆ ಇನ್ನೂ ಶುರುವೇ ಆಗಿರಲಿಲ್ಲವೋ ಅದನ್ನು ಮುಗಿಯಲು ಬಿಡಲೊಲ್ಲದು.

ಇದರ ಹಿಂದೆ ಒಂದು ಮನೋವೈಜ್ಞಾನಿಕ ಸಂಗತಿ ಕೆಲಸ ಮಾಡುತ್ತಿದೆ. ಸೈಕೊಲೊಜಿಸ್ಟ್  Bluma Zeiigarnik ರೆಸ್ಟೊರೆಂಟ್ ಗಳಲ್ಲಿ ಒಂದು ವಿಚಿತ್ರ pattern ನ ಗಮನಿಸಿದರು. ಅದೇನೆಂದರೆ ವೇಟರ್ ಗಳಿಗೆ ಯಾರೂ ಇನ್ನೂ ಪೇ ಮಾಡಿಲ್ಲವೋ ಆ ಎಲ್ಲ ಆರ್ಡರ್ ಗಳು ಪರಫೆಕ್ಟಾಗಿ ನೆನಪಿದ್ದವು.  ಕಸ್ಟಮರ್ ಗಳು ಬಿಲ್ ಪೇ ಮಾಡಿ ಹೊರಗೆ ಹೋಗುತ್ತಿದ್ದಂತೆಯೇ ವೇಟರ್ ಗಳು instant ಆಗಿ ಆ ಆರ್ಡರ್ ಗಳನ್ನು ತಮ್ಮ ಮೈಂಡ್ ನಿಂದ ತೆಗೆದುಹಾಕಿಬಿಡುತ್ತಿದ್ದರು. ಈ ವಿಷಯವನ್ನು ಪರಿಶೀಲಿಸಿದಾಗ Bluma ಅವರಿಗೆ ಗೊತ್ತಾದದ್ದು ಏನೆಂದರೆ, ನಮ್ಮ ಮೈಂಡ್ incomplete ಆದ ಮತ್ತು interrupted ಆದ  ಸಂಗತಿಗಳನ್ನ, ಪೂರ್ತಿಗೊಂಡ ಸಂಗತಿಗಳಿಗಿಂತ ಎರಡರಷ್ಟು ಹೆಚ್ಚಿನ intensity ಯಲ್ಲಿ ನೆನಪಿಟ್ಟುಕೊಳ್ಳುತ್ತದೆ.

ಇದೇ ಕಾರಣವಾಗಿ ಅರ್ಧದಲ್ಲಿಯೇ ಕೊನೆಗೊಂಡ ಅಥವಾ ಸರಿಯಾದ ಕೊನೆ ದೊರಕದ ಸಂಬಂಧಗಳನ್ನು ಮರೆತು ಮುಂದೆ ಹೋಗುವುದು ಬಹಳ ಕಷ್ಟಕರವಾಗಿರುತ್ತದೆ.  ನಿಮ್ಮ ಮೈಂಡ್ ಆ ವ್ಯಕ್ತಿಯನ್ನು ಇನ್ನೂ ಹಿಡಿದಿಟ್ಟುಕೊಂಡಿರುವುದು, ಆ ವ್ಯಕ್ತಿ ನಿಮಗೆ ತುಂಬ ಮ್ಯಾಚ್ ಆಗುತ್ತಿದ್ದ ಎನ್ನುವ ಕಾರಣಕ್ಕಲ್ಲ ಬದಲಾಗಿ ಆ ಕತೆ ಅರ್ಧದಲ್ಲಿಯೇ ಒಂದು ಸರಿಯಾದ closure ಸಿಗದೇ ಕೊನೆಗೊಂಡಿರುವ ಕಾರಣದಿಂದ. ಮೈಂಡ್ ಗೆ ಅಪೂರ್ಣತೆಯನ್ನು ಕಂಡರೆ ಆಗುವುದಿಲ್ಲ. ನಮ್ಮ ಮೈಂಡ್ ಯಾವೆಲ್ಲ ಸಂಗತಿಗಳು ಅರ್ಧದಲ್ಲಿಯೇ ಕೊನೆಗೊಂಡಿವೆಯೋ ಅವನ್ನು ಲೂಪ್ ಲ್ಲಿ ರೀಪ್ಲೇ ಮಾಡುತ್ತಿರುತ್ತದೆ.

ಆದ್ದರಿಂದ ನೀವು move on ಆಗಬೇಕಾದರೆ, ಅವರಿಂದ ಕ್ಷಮೆಯನ್ನ, ಅಥವಾ ವಾಪಸಾತಿಯನ್ನ ನಿರೀಕ್ಷಿಸುತ್ತ ಕುಳಿತುಕೊಂಡು ಬಿಡಬೇಡಿ. ನಿಮ್ಮ closure ನ ನೀವೇ ತೀರ್ಮಾನಿಸಿ ಆಚರಣೆಗೆ ತೆಗೆದುಕೊಂಡು ಬನ್ನಿ.  ಆ ಮಾನಸಿಕ ಲೂಪ್ ನ ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿ. ಏಕೆಂದರೆ ಅಪೂರ್ಣ ಕತೆಗಳೇ ಮೈಂಡ್ ನಲ್ಲಿ ಹೆಚ್ಚು ಕೋಲಾಹಲವನ್ನ ಉಂಟುಮಾಡುತ್ತವೆ.

***************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.