ಬಹುತೇಕ ನಾವು ಇನ್ನೊಬ್ಬರ ಅಂಥ ಸಂಗತಿಗಳನ್ವೇ ದ್ವೇಷ ಮಾಡುತ್ತೇವೆ, ಯಾವುದನ್ನ ನಾವು ನಮ್ನೊಳಗೆ ಹತ್ತಿಕ್ಕಿಕೊಂಡಿದ್ದೀವೋ ಅಂಥವನ್ನ! ~ ಚಿದಂಬರ ನರೇಂದ್ರ
ನಿಜ ಹೇಳಿ, ನಿಮ್ಮ ಬದುಕಲ್ಲಿ ಯಾರಾದರೂ ಅಂಥ ವ್ಯಕ್ತಿ ಇದ್ದಾರ, ಯಾರನ್ನ ನೋಡಿದರೆ ನಿಮಗೆ ಕೋಪ ಉಕ್ಕೇರುತ್ತದೆಯೋ ಅಂಥವರು? ಅವರು ನಿಮಗೆ ಯಾವ ತೊಂದರೆಯನ್ನೂ ಮಾಡಿಲ್ಲ, ಆದರೆ ಅವರ ವರ್ತನೆ, ಅವರ ನಗು, ಅವರ attitude ನೋಡಿ ನಿಮಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಈ ಮನುಷ್ಯ ಎಷ್ಟು ಫೇಕ್ ಇದ್ದಾನೆ ಎನ್ನುತ್ತೀರಿ ನೀವು. ಆದರೆ ಇದರಲ್ಲಿ ಆ ಮನುಷ್ಯನ ತಪ್ಪೇನೂ ಇಲ್ಲ, ಸಮಸ್ಯೆ ಇರುವುದು ನಿಮ್ಮಲ್ಲಿಯೇ. ಇದನ್ನ ಸೈಕಾಲೊಜಿ ಯಲ್ಲಿ the shadow self ಎನ್ನುತ್ತಾರೆ.
ಬಹುತೇಕ ನಾವು ಇನ್ನೊಬ್ಬರ ಅಂಥ ಸಂಗತಿಗಳನ್ವೇ ದ್ವೇಷ ಮಾಡುತ್ತೇವೆ, ಯಾವುದನ್ನ ನಾವು ನಮ್ನೊಳಗೆ ಹತ್ತಿಕ್ಕಿಕೊಂಡಿದ್ದೀವೋ ಅಂಥವನ್ನ. ನಿಮಗೆ show off ಮಾಡುವ ಜನರನ್ನು ಕಂಡರೆ ಕೋಪ ಬರುತ್ತದೆಯಾದರೆ, ನಿಮ್ಮೊಳಗಿನ ಆ ಭಾಗ, ಯಾವುದು attention ಬಯಸುತ್ತಿತ್ತೋ, ಯಾವುದನ್ನ ಚಿಕ್ಕಂದಿನಲ್ಲಿಯೇ ಹತ್ತಿಕ್ಕಲಾಗಿದೆಯೋ ಅದು ನಿಮ್ಮನ್ನು ಟ್ರಿಗರ್ ಮಾಡುತ್ತಿದೆ. ನಿಮಗೆ ಆಲಸಿ ಜನರನ್ನು ಕಂಡರೆ ಇರಿಟೇಟ್ ಆಗುತ್ತದೆಯಾದರೆ, ನೀವು ನಿಮ್ಮನ್ನು ಎಷ್ಟು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದೀರಿ ಎಂದರೆ, ಅವರ ಸ್ವಾತಂತ್ರ್ಯ, ಅವರ ವಿಶ್ರಾಂತ ಸ್ಥಿತಿಯನ್ನು ನೋಡಿ ನಿಮಗೆ ಹೊಟ್ಟೆಕಿಚ್ಚಾಗುತ್ತಿದೆ. ನಿಮಗೆ ಸ್ವಾರ್ಥಿ ಜನರನ್ನು ಕಂಡರೆ ಸಿಟ್ಟು ಬರುತ್ತದೆಯಾದರೆ, ಬಹುಶಃ ನೀವು people pleaser ಆಗಿಬಿಟ್ಟಿದ್ದೀರಿ. ನೀವು ನಿಮಗಾಗಿ ಬದುಕಲು ಬಯಸುತ್ತೀರಿ ಆದರೆ ನೀವು ನಿಮ್ಮ ಅರ್ಧ ಆಯಸ್ಸು ಇನ್ನೊಬ್ಬರಿಗಾಗಿ ಒತ್ತಾಯಪೂರ್ವಕವಾಗಿ ಬದುಕಿಬಿಟ್ಟಿದ್ದೀರಿ.
ಇವು ನಿಮ್ಮ ಎಂಥ ವರ್ತನೆಗಳೆಂದರೆ, ಸಮಾಜ ಇವಕ್ಕೆ ಕೆಟ್ಟದ್ದು ಎಂಬ ಹಣೆಪಟ್ಟಿ ಕಟ್ಟಿಬಿಟ್ಟಿದೆ. ಮತ್ತು ಈ ಕಾರಣವಾಗಿ ನೀವು ಈ ನಿಮ್ಮ ಇಷ್ಟದ ವರ್ತನೆಗಳನ್ನ ನಿಮ್ನೊಳಗೆಲ್ಲೋ ಸಪ್ರೆಸ್ ಮಾಡಿಕೊಂಡು ಬಿಟ್ಟಿದ್ದೀರಿ. ಆದರೆ ಯಾರಾದರೂ ಇದೇ ವರ್ತನೆಗಳನ್ನು ಖುಲ್ಲಂಖುಲ್ಲಾ ಪ್ರದರ್ಶನ ಮಾಡುವಾಗ ನಿಮ್ಮೊಳಗೆ ಹತ್ತಿಕ್ಕಲ್ಪಟ್ಟಿರುವ ಇದೇ ವರ್ತನೆಗಳು ಅಸಹಾಯಕತೆಯಿಂದ ಕುದಿಯುತ್ತವೆ. ಮತ್ತು ಆಗ ನೀವು ಟ್ರಿಗರ್ ಆಗಿ ಆ ಇನ್ನೊಬ್ಬರ ಮೇಲೆ ಕೆಂಡ ಕಾರುತ್ತೀರಿ.
ನೆನಪಿನಲ್ಲಿಡಿ, ಬಹುತೇಕ ನಾವು ದ್ವೇಷಿಸುವ ಜನ ನಮ್ಮ ವೈರಿಗಳಾಗಿರುವುದಿಲ್ಲ, ಅವರು ನಮ್ಮ ಕನ್ನಡಿಯಾಗಿರುತ್ತಾರೆ. ಮುಂದಿನ ಸಲ ಯಾರನ್ನಾದರೂ ನೋಡಿ ನಿಮಗೆ ಸಿಟ್ಟು ಬಂದರೆ ಅವರನ್ನು ಜಡ್ಜ್ ಮಾಡಲು ಹೋಗಬೇಡಿ, ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿ, ನಿಮ್ನೊಳಗಿನ ಯಾವ ಹತ್ತಿಕ್ಕಲ್ಪಟ್ಟಿರುವ ಭಾಗ ಹೊರಗೆ ಬರಲು ಹಾತೊರೆಯುತ್ತಿದೆಯೆಂದು. ಈ ತಿಳುವಳಿಕೆ ಮಾತ್ರವೇ ನಿಮಗೆ ಶಾಂತಿಯನ್ನ, ಸಹನೆಯನ್ನ, ಸಮಾಧಾನವನ್ನ ತಂದುಕೊಡಬಲ್ಲದು.

