ಕನ್ನಡಕ್ಕೆ: ಚಿದಂಬರ ನರೇಂದ್ರ
ವೈಜ್ಞಾನಿಕ ಲೋಕದಲ್ಲಿ ನಡೆದ ಅಚ್ಚರಿಯ ಮತ್ತು ಕುತೂಹಲಕಾರಿ ಘಟನೆಯೊಂದು ಹೀಗಿದೆ…..
ಮಿಶಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ Jack Hetherington ಎನ್ನುವ ಹೆಸರಿನ ಭೌತಶಾಸ್ತ್ರದ ಪ್ರಾಧ್ಯಾಪಕರಿದ್ದರು. ಅವರು 1975 ರಲ್ಲಿ Low temperature physics especially behaviour of helium 3 ವಿಷಯದ ಬಗ್ಗೆ ಅತ್ಯಂತ ಸೀರಿಯಸ್ ಆದಂಥ ರಿಸರ್ಚ್ ಪೇಪರ್ ಒಂದನ್ನ ಸಿದ್ಧಪಡಿಸಿದರು. ಪೂರ್ತಿ ಪೇಪರ್ ರೆಡಿ ಆದ ಬಳಿಕ ಜ್ಯಾಕ್ ಅದನ್ನು ಚೆಕ್ ಮಾಡಲು ಮತ್ತು ವ್ಯಾಕರಣ ದೋಷಗಳನ್ನು ಸರಿಪಡಿಸಲು ತಮ್ಮ ಸಹೋದ್ಯೋಗಿಗೆ ನೀಡಿದರು.
ಹೀಗೆ ಪೇಪರ್ ಚೆಕ್ ಮಾಡುವಾಗ ಅವರಿಗೆ ಒಂದು ಸಮಸ್ಯೆ ಎದುರಾಯಿತು. ಆದರೆ ಆ ಸಮಸ್ಯೆ ವಿಜ್ಞಾನಕ್ಕೆ ಸಂಬಂಧಿಸಿದ್ದಾಗಿರದೇ ಅದು ವ್ಯಾಕರಣಕ್ಕೆ ಸಂಬಂಧಿಸಿದ್ದಾಗಿತ್ತು. ಇಡಿ ಪೇಪರ್ ನಲ್ಲಿ ಜ್ಯಾಕ್ I ಗೆ ಬದಲಿಗೆ We ಎನ್ನುವ ಪದ ಬಳಕೆ ಮಾಡಿದ್ದರು, ಉದಾಹರಣೆಗೆ we perform the experiment, we observed the results ಮುಂತಾಗಿ. ಅದರೆ ಜ್ಯಾಕ್ ಆ ಪೇಪರ್ ನ ಸಿಂಗಲ್ ಆಥರ್ ಆಗಿದ್ದರು. ಅವರು ಪೇಪರ್ ನಲ್ಲಿ We ಬಗಲಿಗೆ I ಪದ ಉಪಯೋಗಿಸಬೇಕಿತ್ತು.
ಈ ಸಮಸ್ಯೆಯನ್ನು ಪರಿಹರಿಸಲು ಜ್ಯಾಕ್ ಅವರಿಗೆ ಎರಡು ದಾರಿಗಳಿದ್ದವು. ಒಂದು, ಇಡೀ ಪೇಪರ್ ನ ರೀ ರೈಟ್ ಮಾಡುವುದು, ಆದರೆ ಟೈಪ್ ರೈಟರ್ ನ ಕಾಲದಲ್ಲಿ ಈ ಆಯ್ಕೆ ಬಹಳ ತ್ರಾಸದಾಯಕವಾಗಿತ್ತು. ಇನ್ನೊಂದು, ಪೇಪರ್ ಗೆ ಇನ್ನೊಬ್ಬ co-author ನ ಸೇರಿಸುವುದು. ಜ್ಯಾಕ್ ಎರಡನೇಯ ಸುಲಭ option ಆಯ್ಕೆ ಮಾಡಿಕೊಂಡರು. ಜ್ಯಾಕ್ ತಮ್ಮ ಬೆಕ್ಕಿನ ಹೆಸರನ್ನ co- author ಆಗಿ ಸೇರಿಸಿದರು. ಇದು ಜನರಿಗೆ ಗೊತ್ತಾಗಬಾರದೆಂದು ಜ್ಯಾಕ್, ಬೆಕ್ಕಿನ ಸೈಂಟಿಫಿಕ್ ಹೆಸರು Felis domesticus Chester ಜೊತೆ ಬೆಕ್ಕಿನ ಅಪ್ಪ Willard ಹೆಸರು ಸೇರಿಸಿ FDC Willard ಎನ್ನುವ ಹೆಸರನ್ನ ತಮ್ಮ ಪೇಪರ್ ನ co-author ಆಗಿ ಸೇರಿಸಿದರು. ಮುಂದೆ ಜ್ಯಾಕ್ ಈ ಎರಡು ಹೆಸರಿನಡಿಯಲ್ಲಿಯೇ ಇನ್ನೊಂದು ಪೇಪರ್ ಪ್ರಕಟಿಸಿದರು.
ಈ ಪೇಪರ್ Physical Review letter ಎನ್ನುವ ಗೌರವಾನ್ವಿತ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಯಿತು. ಪೇಪರ್ ತುಂಬ ಪ್ರಸಿದ್ಧವಾದ ನಂತರ ಪತ್ರಕರ್ತರು ಪೇಪರ್ ನ ಇಬ್ಬರೂ ಲೇಖಕರ ಸಂದರ್ಶನ ಮಾಡಲು ಬಯಸಿ ಮಿಶಿಗನ್ ಸ್ಟೇಟ್ ಯುನಿವರ್ಸಿಟಿಗೆ ಬಂದರು. ಆಗ ಜ್ಯಾಕ್ ಗೆ Willard ಹೆಸರಿನ ಹಿಂದಿನ ರಹಸ್ಯ ಹೇಳಲೇಬೇಕಾಯಿತು. ಜರ್ನಲ್ ನ ಸಂಪಾದಕರಿಗೆ ಈ ವಿಷಯ ಗೊತ್ತಾಗುವ ಮುಂಚೆಯೇ ಈ ಘಟನೆ ದಂತಕಥೆಯಾಗಿ ಪ್ರಸಿದ್ಧವಾಗಿಬಿಟ್ಟಿತ್ತು.
ಇವತ್ತು FDC Willard ವೈಜ್ಞಾನಿಕ ಪಬ್ಲಿಶಿಂಗ್ ಇತಿಹಾಸದಲ್ಲಿ most famous cat ಆಗಿ ನಮೂದಾಗಿಬಿಟ್ಟಿದೆ. ಈ ಕತೆಯಿಂದ ನಮಗೆ ತಿಳಿಯುವುದೇನೆಂದರೆ ಹೇಗೆ ಹ್ಯೂಮರ್ ಮತ್ತು ಕ್ರಿಯೇಟಿವಿಟಿ, ಗಂಭೀರ ವಿಜ್ಞಾನದ ನಡುವೆ ಸಹ ಅಸ್ತಿತ್ವದಲ್ಲಿ ಇರಬಹುದು ಎನ್ನುವುದನ್ನ.

