ಈ ಕಥೆ ಕೇವಲ ಆ ಪಂಚ್ ಮರಿಯದಲ್ಲ ನಮ್ಮ ಬಹುತೇಕರ ಕಥೆ ಕೂಡ ಆಗಿದೆ. ಸೈಕಾಲಜಿಯಲ್ಲಿ ಇದನ್ನ Attachment trauma ಎಂದೂ ಮತ್ತು ಆ ಗೊಂಬೆಯನ್ನು Transitional object ಎಂದು ಗುರುತಿಸುತ್ತಾರೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಈಗ ವೈರಲ್ ಆಗುತ್ತಿರುವ ಜಪಾನಿನ ಕ್ಯೂಟ್ ಮಂಕಿ ಪಂಚ್ ನ ವಿಡಿಯೋ ನೋಡಿದ್ದೀರಲ್ವಾ? ನೋಡಿಲ್ಲ ಅಂದ್ರೆ ಈ ಕುರಿತು ನಿಮಗಾಗಿ ಸ್ವಲ್ಪ ಹಿನ್ನೆಲೆ ಇಲ್ಲಿದೆ.
ಜಪಾನಿನ ಪ್ರಾಣಿ ಸಂಗ್ರಹಾಲಯದಲ್ಲಿ ಒಂದು ಪುಟ್ಟ ಮಂಕಿ ಇದೆ, ಅದರ ಹೆಸರು ಪಂಚ್. ಅದರ ತಾಯಿ ಅದನ್ನು ಚಿಕ್ಕಂದಿನಲ್ಲಿಯೇ ಬಿಟ್ಚು ಹೋಗಿಬಿಟ್ಟಿದ್ದಾಳೆ, ಏಕಾಂಗಿಯಾಗಿಸಿಬಿಟ್ಟಿದ್ದಾಳೆ. ಝೂ ನ ಕೇರ್ ಟೇಕರ್ ಅದನ್ನು ನೋಡಿಕೊಂಡು ಬೆಳೆಸಿದರು. ಯಾವಾಗ ಅದನ್ನು ಬಾಕಿ ಮಂಗಗಳ ಗುಂಪಿನಲ್ಲಿ ಬಿಡಲಾಯಿತೋ ಆಗ ಅದು ಉಳಿದ ಮಂಕಿಗಳೊಂದಿಗೆ ಸರಿಯಾಗಿ ಕನೆಕ್ಟ್ ಆಗಲಿಲ್ಲ. ಬಾಕಿ ಮಂಗಗಳು ಕೂಡ ಪಂಚ್ ನ ಸರಿಯಾಗಿ ಸ್ವೀಕಾರ ಮಾಡಲಿಲ್ಲ. ಆಗ ಪಂಚ್ ಒಂಟಿಯಾಗಿಬಿಟ್ಟಿತು. ಅದರ ಒಂಟಿತನ ಮತ್ತು ಕಳವಳವನ್ನೂ ದೂರವಾಗಿಸಲು ಝೂ ನ ಕೆಲಸಗಾರರು ಅದಕ್ಕೆ ತಾಯಿಯ ಬದಲಾಗಿ ಒಂದು ಗೊಂಬೆಯನ್ನು ತಂದುಕೊಟ್ಟರು. ಈಗ ಪಂಚ್ ಸದಾ ಆ ಗೊಂಬೆಯೊಂದಿಗೆ ಆಡುತ್ತಿರುತ್ತದೆ. ನೋಡಲು ಬಂದವರತ್ತ ತಿರುಗಿ ಕೂಡ ನೋಡುವುದಿಲ್ಲ. ಆ ಗೊಂಬೆಯ ಕೈ ಹಿಡಿದುಕೊಂಡು ಇಡೀ ಝೂ ಸುತ್ತಾಡುತ್ತದೆ, ಅದರ ಮಡಿಲಲ್ಲಿ ತಲೆಯಿಟ್ಟು ಆರಾಮಾಗಿ ಮಲಗಿ ಬಿಡುತ್ತದೆ. ನೋಡುವ ಜನರಿಗೆಲ್ಲ ಪಂಚ್ ನ ಈ ವರ್ತನೆ ಕ್ಯೂಟ್ ಅನಿಸುತ್ತಿದೆ.
ಆದರೆ ಸೈಕಾಲಜಿಯ ದೃಷ್ಟಿಯಲ್ಲಿ ಇದು ನಮ್ನೆಲ್ಲರ ದುರಂತ ಕೂಡ ಹೌದು. ಏಕೆಂದರೆ ಈ ಕಥೆ ಕೇವಲ ಆ ಪಂಚ್ ಮರಿಯದಲ್ಲ ನಮ್ಮ ಬಹುತೇಕರ ಕಥೆ ಕೂಡ ಆಗಿದೆ. ಸೈಕಾಲಜಿಯಲ್ಲಿ ಇದನ್ನ Attachment trauma ಎಂದೂ ಮತ್ತು ಆ ಗೊಂಬೆಯನ್ನು Transitional object ಎಂದು ಗುರುತಿಸುತ್ತಾರೆ.
ಚಿಕ್ಕಂದಿನಲ್ಲಿ ನಮಗೆ ಪ್ರೀತಿ ಮತ್ತು ಅವಶ್ಯಕ ಭಾವನಾತ್ಮಕ ಸುರಕ್ಷತೆ ದೊರೆಯದೇ ಹೋದಾಗ ನಮ್ಮ ಮೈಂಡ್ ಗೆ ಗಾಬರಿಯಾಗುತ್ತದೆ. ಮತ್ತು ದೊಡ್ಡವರಾಗಿ ಜನರ ನಡುವೆ ಹೋಗಬೇಕಾದ ಸನ್ವಿವೇಶ ಎದುರಾದಾಗ ನಿಮಗೆ ಅವರ ಜೊತೆ ಹೊಂದಿಕೊಳ್ಳುವುದು unsafe ಅನಿಸುತ್ತದೆ. ನೀವು ಎಂದಿಗೂ ಅವರೊಂದಿಗೆ ಸುರಕ್ಷತಾ ಭಾವವನ್ನು ಅನುಭವಿಸುವುದಿಲ್ಲ. ಅವರ ಮೇಲೆ ಭರವಸೆಯನ್ನಿಟ್ಟರೆ ಮುಂದೆ ಇವರೂ ನನ್ನ ಬಿಟ್ಟು ಹೋಗಬಹುದು ಎನ್ನುವ ಭಯ ನಿಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ಆಗ ಪಂಚ್ ಮರಿಯ ಥರ ನೀವೂ ಒಂದು ಗೊಂಬೆಯನ್ನು ನಿಮಗಾಗಿ ಹುಡುಕಿಕೊಳ್ಳುತ್ತೀರಿ. ಮತ್ತು ಆ ಗೊಂಬೆ , ನಿಮ್ಮ ಒಂಟಿತನ ಆಗಬಹುದು, ನಿಮ್ಮ overthinking ಆಗಬಹುದು, ನಿಮ್ಮ ಹಗಲುಗನಸಿನ ಜಗತ್ತು ಆಗಬಹುದು, ಅಥವಾ ನೀವು ನಿಮ್ಮ ಎದೆಗೆ ಒತ್ತಿಕೊಂಡಿರುವ ಯಾವುದಾದರೂ ಟಾಕ್ಸಿಕ್ ರಿಲೇಷನ್ ಶಿಪ್ ಆಗಬಹುದು. ಏಕೆಂದರೆ ನಿಮ್ಮ ಮೈಂಡ್ ಗೆ ಅಸಲಿ ರಿಜೆಕ್ಷನ್ ಗೆ ಬದಲಾಗಿ ನಕಲೀ ಕಂಫರ್ಟ್ ಒಳ್ಳೆಯದು ಅನಿಸದೊಡಗಿರುತ್ತದೆ.
ನೀವೇನಾದರೂ ಇಂಥ ವ್ಯಕ್ತಿಯಾಗಿದ್ದರೆ ನೆನಪಿನಲ್ಲಿಡಿ, ಈ ಬಗೆಯ ಗೊಂಬೆಗಳೆಲ್ಲ ನಿಮಗೆ ತಾತ್ಕಾಲಿಕ ಸಮಾಧಾನ ಕೊಡಬಹುದಾದರೂ, ನೀವು ಒಡೆದು ಚೂರಾದಾಗ ಇವು ನಿಮ್ಮನ್ನು ಅಪ್ಪಿಕೊಂಡು ಸಂತೈಸುವುದಿಲ್ಲ. ಇವು ನಿಮ್ಮ ನಕಲೀ ಜಗತ್ತು ಆಗಿಬಿಡುತ್ತವೆ. ಇವು ನಿಮ್ಮನ್ನು ವಾಸ್ತವದ ಜಗತ್ತಿನಿಂದ ದೂರ ಮಾಡುತ್ತಿವೆ. ಈ ಆಟಗೆಗಳು ನಿಮ್ಮ ಕಂಫರ್ಟ್ ಝೋನ್ ಆಗಿರಬಹುದು ಆದರೆ ನೆನಪಿನಲ್ಲಿಡಿ, ಬದುಕು ಶುರುವಾಗೋದು ಕಂಫರ್ಟ್ ಝೋನ್ ನಿಂದ ಒಂದು ಹೆಜ್ಜೆ ಆಚೆಯೇ. ಆದ್ದರಿಂದ ಗದ್ದಲದ ಗುಂಪುಗಳಿಂದ ಭಯಗ್ರಸ್ತರಾಗಬೇಡಿ, ಬದುಕಿನಲ್ಲ ಒಡೆದು ಚೂರಾಗುವುದು, ಮತ್ತೆ ಗಟ್ಟಿಯಾಗುವುದು, ಕೂಡುವುದು, ಬೇರೆಯಾಗುವುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಈ ಬದುಕನ್ನು ಮುಂದುವರೆಸುವುದು ನಿಮ್ಮ ಜವಾಬ್ದಾರಿ, ಏಕೆಂದರೆ
ಉಸೂಲೋ ಪೇ ಜಹಾಂ ಆಚ್ ಆಯೇ, ಟಕರಾನಾ ಜರೂರೀ ಹೈ
ಜೋ ಜಿಂದಾ ಹೋ ತೋ ಫಿರ್ ಜಿಂದಾ ನಜರ್ ಆನಾ ಜರೂರೀ ಹೈ.

