Bayes theorem ನ ಪ್ರಕಾರ ನಂಬಿಕೆಗಳು probability ಗಳ ಹಾಗೆಯೇ ಹೊರತು fact ಗಳ ಹಾಗೆ ಅಲ್ಲ… | ಚಿದಂಬರ ನರೇಂದ್ರ
ನೀವು ನಿಮ್ಮ ಯಾವುದೇ ಒಂದು ನಂಬಿಕೆಯ ಬಗ್ಗೆ 100% ಶ್ಯೂರ್ ಆಗಿದ್ದೀರೆಂದರೆ ನೀವು ಏನೋ ತಪ್ಪು ಮಾಡುತ್ತಿದ್ದೀರಿ. ಜನ, ನಂಬಿಕೆಗಳನ್ನು ಲೈಟ್ ಸ್ವಿಚ್ ಗಳಂತೆ, ON / OFF ಎಂಬಂತೆ ಟ್ರೀಟ್ ಮಾಡುತ್ತಾರೆ, True / False ? ಎಂಬಂತೆ. ಆದರೆ ತಿಳುವಳಿಕೆ ಹಾಗೆ ಕೆಲಸ ಮಾಡುವುದಿಲ್ಲ, ಹಾಗೆ ಕೆಲಸ ಮಾಡೋದು ಅಹಂ.
18 ನೇ ಶತಮಾನದ ಗಣಿತದ Bayes theorem ನ ಪ್ರಕಾರ ನಂಬಿಕೆಗಳು probability ಗಳ ಹಾಗೆಯೇ ಹೊರತು fact ಗಳ ಹಾಗೆ ಅಲ್ಲ. ಹವಾಮಾನ ಮುನ್ಸೂಚನೆಯನ್ನ ಗಮನಿಸಿರಿ, ಅದು ಮಳೆ ಬಂದೇ ಬರುತ್ತದೆ ಎಂದು ಹೇಳುವುದಿಲ್ಲ, ಅದು ಮಳೆ ಬರುವ ಸಾಧ್ಯತೆ 70% ಇದೆ ಎಂದು ಹೇಳುತ್ತದೆ. ಹೊಸ ಮಾಹಿತಿ ದೊರೆತ ಹಾಗೆಲ್ಲ, ಕಪ್ಪು ಮೋಡಗಳ ಶೇಖರಣೆ, pressure dropping ಇತ್ಯಾದಿಯನ್ನು ಗಮನಿಸಿ ಅವರು, ಹವಾಮಾನ ವರದಿಯನ್ನು update ಮಾಡುತ್ತಾರೆ. ಈಗ ಮಳೆಯ ಸಾಧ್ಯತೆ 90% ಆಗಬಹುದು ಅಥವಾ ಅದು 40% ಗೆ ಇಳಿಯಬಹುದು.
ನಿಮ್ಮ ನಂಬಿಕೆಗಳು ಕೂಡ ಹೀಗೆಯೇ ಅನುಪಾತಕ್ಕನುಗುಣವಾಗಿ ಕೆಲಸ ಮಾಡಬೇಕು. ಒಂದು ಅಧ್ಯಯನ, ಒಂದು ಹೊಸ ಮಾಹಿತಿ, ಒಂದು ಹೊಸ ಸಾಕ್ಷ್ಯ, ತಕ್ಕಡಿಯ ಮುಳ್ಳು ಕೊಂಚ ಆ ಬದಿಗೆ ಹೊರಳುವಂತೆ ಮಾಡುತ್ತದೆ. ದಶಕಗಳ ಇಂಥ ಮಾಹಿತಿ ತಕ್ಕಡಿಯ ಮುಳ್ಳನ್ನು ಸಾಕಷ್ಟು ಆ ದಿಕ್ಕಿಗೆ ಹೊರಳಿಸುತ್ತದೆ. ಮತ್ತು ಇದು ಕೇವಲ ಅಂದಾಜಿನ ಸಂಗತಿಯಲ್ಲ. ಯಾವ ಡಾಕ್ಟರ್ ಕೂಡ, ತನ್ನ diagnosis ಗೆ ಸರಿ ಹೊಂದುವುದಿಲ್ಲ ಎಂದು ಹೊಸ ಟೆಸ್ಟ್ ರಿಸಲ್ಟ್ ನ ಕಡೆಗಣಿಸುವುದಿಲ್ಲ.
ನಿರ್ಲಕ್ಷ ಆತ್ಮವಿಶ್ವಾಸ ಅಲ್ಲ, ಅದು ಒಮ್ಮೊಮ್ಮೆ ಮೂರ್ಖತನ. ಆದರೆ ಇದಕ್ಕೆ ವಿರುದ್ಧವಾದದ್ದು ಕೂಡ ಅಪಾಯಕಾರಿ. ಕೆಲವು sensational ಸುದ್ದಿಗಳನ್ನು ನೋಡಿ, ಕೆಲವು ಕೆಟ್ಟ ದಿನಗಳು ಅಥವಾ ಒಬ್ಬ ವ್ಯಕ್ತಿಯ ತಪ್ಪು ನಡುವಳಿಕೆಯ ಆಧಾರದ ಮೇಲೆ, ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುವುದು. ಇದು ಕೂಡ ಮುಕ್ತ ವಿಚಾರವಾದ (open mindedness) ಅಲ್ಲ.
ಒಂದು ಹ್ಯಾಪಿ ರಿಲೇಶನ್ ಶಿಪ್ ನ ಒಂದು ಕೆಟ್ಟ ಗಳಿಗೆ ( bad patch) ನ ಮುಂದಿಟ್ಟುಕೊಂಡು ಅಳೆಯುವುದು ಸೂಕ್ತವಲ್ಲ. ನಿಮ್ಮೊಳಗೆ ಆಗಿರುವ ಬದಲಾವಣೆಯ ಪ್ರಮಾಣ, ನಿಮಗೆ ದೊರೆತಿರುವ ಸಾಕ್ಷ್ಯದ ಕ್ವಾಲಿಟಿಗೆ ಸರಿತೂಗಬೇಕು. ನಿಮ್ಮ ನಂಬಿಕೆಗಳ ಬಗ್ಗೆ ಇಲ್ಲೊಂದು ಸಣ್ಣ ಪರೀಕ್ಷೆ ಇದೆ. ಯಾವ ಬಗೆಯ ಸಾಕ್ಷ್ಯ ನಿಮ್ಮ ಮೈಂಡ್ ನ, ನಿಮ್ಮ ಕಟ್ಟಾ ನಂಬಿಕೆಗಳ ವಿರುದ್ಧ ಎತ್ತಿ ಕಟ್ಟಬಲ್ಲದು? ನಿಮ್ಮ ಉತ್ತರ nothing ಆದರೆ ಬಹುಶಃ ನಿಮಗೆ ಯಾವ ನಂಬಿಕೆಗಳೂ ಇಲ್ಲ, ನಿಮಗೆ ಇರೋದು ಕೇವಲ ನಂಬಿಕೆಯ ಬಟ್ಟೆ ಧರಿಸಿದ bias ಗಳು (ಪಕ್ಷಪಾತ) ಮಾತ್ರ.
*******************************

