ತಾವೇ ಕೇಂದ್ರವೆಂಬ ಭ್ರಮೆ

Main character syndrome ಅನೈತಿಕ ಅಷ್ಟೇ ಅಲ್ಲ, ಅದೊಂದು ಶಾಪ. ಏಕೆಂದರೆ ನೀವು ಸಂಗತಿಗಳನ್ನ, ಅದರಿಂದ ನಿಮಗೇನು ಲಾಭ ಎನ್ನುವ ದೃಷ್ಟಿಕೋನದಿಂದ ನೋಡುತ್ತೀರಾದರೆ, ಪ್ರೇಮವನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುವುದೇ ಇಲ್ಲ… | ಚಿದಂಬರ ನರೇಂದ್ರ

ಬದುಕಿನಲ್ಲಿ ಕೆಲವರಿಗೆ ಎಲ್ಲವೂ ತಮ್ಮ ಕುರಿತೇ ಆಗಿರಬೇಕೆಂಬ ಚಟ ಇರುತ್ತದೆ. ಅವರೊಂದಿಗೆ ನೀವು ಸಮಸ್ಯೆಯೊಂದನ್ನು ಹಂಚಿಕೊಳ್ಳುವಿರಾದರೆ, ಕೊನೆಗೆ ಅವರು, ನೀವು ಅವರ ಸಮಸ್ಯೆಯ ಬಗ್ಗೆಯೇ ಚರ್ಚಿಸುವಂತೆ ಮಾಡುತ್ತಾರೆ.  ಇವತ್ತು ನನ್ನ ದಿನ ಕಠಿಣಕರವಾದಿತ್ತು ಎಂದು ನೀವು ಹೇಳಿದರೆ, ನನ್ನ ದಿನ ಇನ್ನೂ ಹೆಚ್ಚು ಕಠಿಣವಾಗಿತ್ತು ಎನ್ನುವುದು ಅವರ ಮಾತಾಗಿರುತ್ತದೆ. ಈ ಜನರದು “Main character syndrome “ ಎನ್ನುವ ಮಾನಸಿಕ ಸ್ಥಿತಿ. ಇವರು ಎಲ್ಲ ಮಾತುಕತೆ, ಎಲ್ಲ ಆಗುಹೋಗುಗಳಿಗೆ ತಾವೇ ಕೇಂದ್ರವಾಗಿರಬೇಕೆಂದು ಬಯಸುತ್ತಾರೆ.

Anna Gotlib ತಮ್ಮ ಪ್ರಬಂಧವೊಂದರಲ್ಲಿ ಈ Main character syndrome ಎನ್ನುವುದು ಅನೈತಿಕ ಅಷ್ಟೇ ಅಲ್ಲ, ಮಾನಸಿಕವಾಗಿ ಹಾನಿ ಮಾಡುವಂಥದ್ದು ಎಂದು ವಾದ ಮಾಡುತ್ತಾರೆ. Anna Gotlib  ಅವರ ಪ್ರಕಾರ ಇದು ಅನೈತಿಕ ಯಾಕೆಂದರೆ, ನೀವು ನಿಮ್ಮ ಸಮಸ್ಯೆಗಳ ಬಗ್ಗೆಯೇ ಎಲ್ಲ ಚರ್ಚೆ ನಡೆಯಬೇಕೆಂದು ಬಯಸಿದರೆ, ನೀವು ಇನ್ನೊಬ್ಬರ ಸಮಸ್ಯೆಗಳನ್ನ ಮಿಸ್ ಮಾಡಿಕೊಳ್ಳುತ್ತೀರಿ, ಮತ್ತು ಆಗ ನೀವು ಅವರ ಸಮಸ್ಯೆಗಳ ಬಗ್ಗೆ ಕುರುಡಾಗಬೇಕಾಗುತ್ತದೆ. ಮತ್ತು ಇನ್ನೂ ಕೆಟ್ಟದ್ದು ಏನೆಂದರೆ ನೀವು ನಿಮ್ಮ ಲಾಭಕ್ಕಾಗಿ ಆಗ ಅವರನ್ನು exploit ಮಾಡಲು ಶುರು ಮಾಡುತ್ತೀರಿ.

ನಿಮ್ಮ ಈ ಸ್ಥಿತಿಯ ಕುರಿತಾದ ಇನ್ನೊಂದು ಸಮಸ್ಯೆಯೆಂದರೆ, ನೀವು ಇನ್ನೊಬ್ಬರ ಮಾತಿಗೆ ಪ್ರಾಶಸ್ತ್ಯ ನೀಡದೇ ಹೋದಾಗ ಪ್ರೇಮವನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುವುದೇ ಇಲ್ಲ. ಜಗತ್ತಿನ ಬಹುತೇಕ ಧರ್ಮಗಳು, ಬಹುತೇಕ ತತ್ವಶಾಸ್ತ್ರಗಳು , ನೀವು ನಿಮ್ಮನ್ನು ಪ್ರೀತಿಸಿಕೊಳ್ಳುವಂತೆ ಇತರರನ್ನು ಪ್ರೀತಿಸಿ ಎನ್ನುವ ಬಂಗಾರದ ನಿಯಮವನ್ನೇ ಬೇರೆ ಬೇರೆ ರೀತಿಯಲ್ಲಿ ಹೇಳುತ್ತವೆ. ಏಕೆಂದರೆ ಪ್ರೇಮ, ನಾವು ಇನ್ನೊಬ್ಬರನ್ನು ಸಮೀಪಿಸಿ, ಅವರ ಬಗ್ಗೆ ಕಾಳಜಿ ಮಾಡಬೇಕೆಂದು ಬಯಸುತ್ತದೆ.  Iris Murdoch ಮತ್ತು  Simone Weil ಹೇಳುವುದೇನೆಂದರೆ, ಪ್ರೇಮ attention ನ ಬಯಸುತ್ತದೆ, ಮತ್ತು ಆಗ ಮಾತ್ರ ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಒತ್ತಾಯಪೂರ್ವಕವಾಗಿಯಾದರೂ ನಮ್ಮ attention ನ  ಇನ್ನೊಬ್ಬರ ಬೇಕು ಬೇಡಗಳತ್ತ, ಅವರ ಸಂಕಟಗಳತ್ತ ತಿರುಗಿಸಬೇಕಾಗುತ್ತದೆ.

Main character syndrome ಅನೈತಿಕ ಅಷ್ಟೇ ಅಲ್ಲ, ಅದೊಂದು ಶಾಪ. ಏಕೆಂದರೆ ನೀವು ಸಂಗತಿಗಳನ್ನ, ಅದರಿಂದ ನಿಮಗೇನು ಲಾಭ ಎನ್ನುವ ದೃಷ್ಟಿಕೋನದಿಂದ ನೋಡುತ್ತೀರಾದರೆ, ಪ್ರೇಮವನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುವುದೇ ಇಲ್ಲ. ನಿಮಗೆ ನೈಜ ಸಂಪರ್ಕ ಮತ್ತು ಸಮುದಾಯ ಭಾವಗಳು ಅರ್ಥವೇ ಆಗುವುದಿಲ್ಲ. ಆದ್ದರಿಂದ ಎಲ್ಲವೂ ತನ್ನ ಸುತ್ತ ನಡೆಯಬೇಕು ಎನ್ನುವ ಮನುಷ್ಯ ಎದುರಾದಾಗ ಸಿಟ್ಟಿಗೇಳಬೇಡಿ, ಅವರ ಬಗ್ಗೆ ಕರುಣೆಯಿರಲಿ ಏಕೆಂದರೆ ಅವರು ಪ್ರೇಮ ಮತ್ತು ಸಾಗಂತ್ಯದಿಂದ ವಂಚಿತರಾಗಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.