ಲೇಡಿ ಮ್ಯಾಕ್‌ಬೆತ್ ಪರಿಣಾಮ ಅಂದರೇನು ಗೊತ್ತಾ?

ಮತ್ತೆ ಮತ್ತೆ ಕೈತೊಳೆದುಕೊಳ್ಳುವ ಮನಸ್ಥಿತಿಯ ಹಿಂದೆ ಪಾಪಪ್ರಜ್ಞೆಯೂ ಇರುತ್ತಾ? ಷೇಕ್ಸ್‌ಫಿಯರ್ ಇದನ್ನ ಹೀಗೆ ಕಟ್ಟಿಕೊಟ್ಟಿದ್ದಾನೆ ನೋಡಿ… । ಚಿದಂಬರ ನರೇಂದ್ರ

ಮಹಾಕವಿ ಶೆಕ್ಸಪಿಯರ್ ಒಂದು ಮನೋವೈಜ್ಞಾನಿಕ ವಿದ್ಯಮಾನದ ಗುರುತಿಸುವಿಕೆಗೂ ಕಾರಣನಾಗಿದ್ದ. ಆ ಮನೋವೈಜ್ಞಾನಿಕ ವಿದ್ಯಮಾನ Lady Macbeth effect , ಶೆಕ್ಸಪಿಯರ್ ನ ಪ್ರಸಿದ್ಧ ನಾಟಕ ಮ್ಯಾಕ್ ಬೆತ್ ನ ಪ್ರಮುಖ ಪಾತ್ರವೊಂದರಿಂದ ಪ್ರೇರಿತವಾದದ್ದು.

ಈ ನಾಟಕದಲ್ಲಿ ಲೇಡಿ ಮ್ಯಾಕ್ ಬೆತ್ ತನ್ನ ಗಂಡ ಹಲವಾರು ಜನರ ಕೊಲೆ ಮಾಡಲು ಕಾರಣಳಾಗಿರುತ್ತಾಳೆ. ಆದರೆ ಯಾವಾಗ ಆಕೆಗೆ ತನ್ನ ತಪ್ಪಿನ ಅರಿವಾಗುತ್ತದೆಯೋ ಆಕೆ ತಪ್ಪಿತಸ್ಥ ಮನೋಭಾವದಲ್ಲಿ ತೊಳಲಾಡುತ್ತಾಳೆ. ತನ್ನ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಳ್ಳುತ್ತಾಳೆ. ತನ್ನ ಕೈ ತುಂಬ ರಕ್ತ ಅಂಟಿಕೊಂಡಿರುವಂತೆ ಕಲ್ಪನೆ ಮಾಡಿಕೊಳ್ಳಲು ಶುರು ಮಾಡುತ್ತಾಳೆ. ಆಗ ಆಕೆ ಮತ್ತೆ ಮತ್ತೆ ತನ್ನ ಕೈ ತೊಳೆದುಕೊಳ್ಳಲು ಶುರು ಮಾಡುತ್ತಾಳೆ. ವಾಸ್ತವದಲ್ಲಿ ಅವಳ ಕೈ ಗೆ ಯಾವ ರಕ್ತ ಅಂಟಿಕೊಂಡಿಲ್ಲವಾದರೂ ಅವಳು ಅನುಭವಿಸುತ್ತಿದ್ದ ಗಿಲ್ಟ್ ಆಕೆಗೆ ಇಂಥ ಭಾವವೊಂದನ್ನು ಅನುಭವಿಸುವಂತೆ ಮಾಡುತ್ತಿತ್ತು. ಮತ್ತು ಆಕೆ ತನ್ನ ಕೈ ಗೆ ಅಂಟಿಕೊಂಡಿದ್ದ ರಕ್ತದಿಂದ ಹೊರತಾಗಲು ಮತ್ತೆ ಮತ್ತೆ ಕೈ ತೊಳೆದುಕೊಳ್ಳುತ್ತಿದ್ದಳು. ಇದು ಒಂದು ಮಾನಸಿಕ ವಿದ್ಯಮಾನ, the lady Macbeth effect.

ಜನ, ಯಾರು ತಮ್ಮೊಳಗೆ ತಪ್ಪಿತಸ್ಥ ಭಾವವನ್ನು, ನಾಚಿಕೆಯನ್ನು ಅನುಭವಿಸುತ್ತಿದ್ದಾರೋ, ಅದನ್ನ ಅವರು ತಮ್ಮ ದೈಹಿಕ ಕೊಳೆಯ ಜೊತೆ ಗುರುತಿಸಿಕೊಳ್ಳುತ್ತಾರೆ ಮತ್ತು ಈ ಕೊಳೆಯಿಂದ ಹೊರತಾಗಿ ಒಳ್ಳೆಯ ಭಾವವನ್ನು ಅನುಭವಿಸಲು ಮತ್ತೆ ಮತ್ತೆ ತಮ್ಮ ದೇಹವನ್ನು ಸ್ವಚ್ಛ ಮಾಡಿಕೊಳ್ಳುತ್ತಿರುತ್ತಾರೆ. ಈ ಥರ ಶೆಕ್ಸಪಿಯರ್ ತನ್ನ ಪಾತ್ರಗಳ ಮೂಲಕ ತನ್ನ ಕಲ್ಪನೆಗೂ ನಿಲುಕದ ಜಾಗಗಳನ್ನು ತಲುಪಿದ್ದಾನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.