ಕಾರ್ಲ್ ಮಾರ್ಕ್ಸ್, ‘ಧರ್ಮವೊಂದು ಅಫೀಮು’ ಅಂದನೆಂದು ತಪ್ಪಾಗಿ ಕೋಟ್ ಮಾಡಲಾಗುತ್ತದೆ. ಆದರೆ ಅದು ನಿಜವಲ್ಲ. ಮಾರ್ಕ್ಸ್ 1884 ರಲ್ಲಿ ಹೇಳಿದ ಮಾತಿನ ಯಥಾವತ್ ರೂಪ ಹೀಗಿದೆ. ಇದರ ಪ್ರತಿಪದವನ್ನೂಸೂಕ್ಷ್ಮವಾಗಿ ಗಮನಿಸಿರಿ. ಮಾರ್ಕ್ಸ್ ಹೇಳುತ್ತಾನೆ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ರಿಲೀಜನ್ ಜನಗಳಿಗೆ ಆಫೀಮು ಇದ್ದ ಹಾಗೆ ಎನ್ನುವ ಕಾರ್ಲ್ ಮಾರ್ಕ್ಸ್ ನ ಮಾತು, ಜನರು ಬಹಳಷ್ಟು ಬಳಸಿದ, ಬಹಳಷ್ಟು ತಪ್ಪಾಗಿ ಬಳಸಿದ ಮಾತಾಗಿದೆ. ಬಹಳಷ್ಟು ಜನರ ಪ್ರಕಾರ ಮಾರ್ಕ್ಸ್, ರಿಲೀಜನ್ ಗಳ ದ್ವೇಷಿಯಾಗಿದ್ದ, ಅವನು ಆಸ್ತಿಕರ ವಿರುದ್ಧವಾಗಿದ್ದ, ಅವನು ಜನ ನಂಬಿಕೆಯನ್ನು ನಾಶ ಮಾಡಬಯಸಿದ್ದ. ಆದರೆ ಇದು ಮಾರ್ಕ್ಸ್ ಹೇಳಿದ ಮಾತಿನ ಅರ್ಥದಲ್ಲಿ ಒಂದು ಪ್ರತಿಶತ ಕೂಡ ನಿಜ ಅಲ್ಲ.
ಮಾರ್ಕ್ಸ್ ಹೇಳಿದ್ದು – Religion is the sigh of oppressed creature, the heart of heartless world, and the soul of soulless conditions. It is the opium of the people ಎಂದು.
ಇವು ಅಪಹಾಸ್ಯದ ಮಾತುಗಳು ಅಂತ ನಿಮಗೆ ಅನಿಸುತ್ತದೆಯಾ? 19 ನೇ ಶತಮಾನದಲ್ಲಿ ಆಫೀಮನ್ನ ಜನ ಮಾದಕ ದೃವ್ಯವಾಗಿ ಬಳಸುವುದಕ್ಕಿಂತ ಹೆಚ್ಚು ಅದನ್ನು ನೋವು ನಿವಾರಕವಾಗಿ (pain killer) ಬಳಸುತ್ತಿದ್ದರು. ಹಾಗಾಗಿ ಮಾರ್ಕ್ಸ್, ಜನ ರಿಲೀಜನ್ ನ ಒಂದು ನೋವು ನಿವಾರಕವಾಗಿ ಜಗತ್ತಿನ ತಮ್ಮ ಎಲ್ಲ ಸಂಕಟಗಳಿಂದ ಪಾರಾಗಲು ಬಳಸುತ್ತಿದ್ದಾರೆ, ಎಂದು ಹೇಳುತ್ತಾನೆ. ಮೂಲಭೂತವಾಗಿ ಅವನು ಹೇಳಿದ್ದೇನೆಂದರೆ, ಜಗತ್ತಿನ ಸ್ಥಿತಿ ಬಹಳ ಕೆಟ್ಟದಾಗಿದ್ದಾಗ ಜನ ರಿಲೀಜನ್ ನ ಕಡೆ, ವಿಶ್ವಾಸದತ್ತ ತಮ್ಮ ಮುಖ ಮಾಡುತ್ತಾರೆ ಎಂದು.
ಆದರೆ ರಾಜಕಾರಣದ ಜನರು ಮಾರ್ಕ್ಸ್ ನ ಈ ಮಾತನ್ನು ತಮ್ಮ ಅವಕಾಶವಾದವನ್ನು ಬೆಳೆಸಲು ಬಳಕೆ ಮಾಡಿದರು. ಅವನು ಕೆಟ್ಟ ವ್ಯವಸ್ಥೆಯ ವಿರುದ್ಧವಾಗಿದ್ದನೇ ಹೊರತು, ರಿಲೀಜನ್ ನ, ರಿಲೀಜಿಯಸ್ ಜನರ ವಿರುದ್ಧವಾಗಿರಲಿಲ್ಲ. ಅವನು ಸಿಸ್ಟಂ ನ ಮೊದಲು ಸರಿ ಮಾಡಿ ಎಂದು ಹೇಳಿದ. ಸ್ವರ್ಗದ ಬಯಕೆಯಲ್ಲಿ ಜನ, ಈ ಜಗತ್ತಿನಿಂದ ಪಾರಾಗುವ ಕಡೆ ಹೋಗಬೇಕಿಲ್ಲ, ಅವರು ಈ ಜಗತ್ತನ್ನೇ ನರಕದ ಸ್ಥಿತಿಯಿಂದ ಸ್ವರ್ಗದ ಸ್ಥಿತಿಯೆಡೆಗೆ ಕರೆದೊಯ್ಯಬೇಕು ಎನ್ನುವುದು ಅವನ ಮಾತಾಗಿತ್ತು. ಆದರೆ ಜನ ಮಾರ್ಕ್ಸ್ ನ ಮಾತುಗಳನ್ನು ಬಹಳ ತಪ್ಪಾಗಿ ಅರ್ಥ ಮಾಡಿಕೊಂಡರು. ಸ್ವತಃ ಸೋವಿಯತ್ ರಷ್ಯಾದ ರಾಜಕಾರಣಿಗಳು ಮಾರ್ಕ್ಸ್ ನ ಈ ಮಾತು ಬಳಸಿ, ಚರ್ಚ್ ಗಳನ್ನು ನಾಶ ಮಾಡಿದರು, ಬಿಲೀವರ್ಸ್ ಗಳನ್ನು ಅಪರಾಧಿ ಸ್ಥಾನದಲ್ಲಿಟ್ಟರು.
ಬಂಡವಾಳಶಾಹಿಗಳು ಕೂಡ ಮಾರ್ಕ್ಸ್ ನ ಈ ಮಾತನ್ನು ತಪ್ಪು ಅರ್ಥದಲ್ಲಿ ನೆಚ್ಚಿಕೊಂಡು ಮಾರ್ಕ್ಸ್ ನನ್ನು ಜನರ ದಾರಿ ತಪ್ಪಿಸಿದ arrogant godless radical ಎಂದು ದೂಷಿಸಿದರು. ಮಾರ್ಕ್ಸ್ ನ ನಿಜವಾದ ಮಾತಿನ ಅರ್ಥ ಯಾರ propaganda ಕ್ಕೂ ಸಹಾಯ ಮಾಡುತ್ತಲೇ ಇರಲಿಲ್ಲ.

