ಮೂರ್ಖರೊಡನೆ ವಾದ ಮಾಡುವುದೆಂದರೆ

ಸಂಗ್ರಹಾನುವಾದ :  ಚಿದಂಬರ ನರೇಂದ್ರ

ಮೂರ್ಖರೊಡನೆ ವಾದ ಮಾಡುವುದೆಂದರೆ ಪಾರಿವಾಳದೊಂದಿಗೆ ಪಗಡೆ ಆಡಿದಂತೆ. ಅವು ಆಟದ ನಡುವೆಯೇ ಎಲ್ಲ ಕಾಯಿಗಳನ್ನು ಬೀಳಿಸಿ ಉರುಳಿಸಿ , ಬೋರ್ಡ್ ಮೇಲೆ ಹೊಲಸು ಮಾಡಿ, ಮತ್ತೆ ತಮ್ಮ ಜಾಗಕ್ಕೆ ಹಾರಿ ಹೋಗಿ ಗೆಲುವನ್ನ ಕ್ಲೇಮ್ ಮಾಡುತ್ತವೆ. ಇದು ಮಜಾ ಮತ್ತು ಒಳನೋಟಗಳನ್ನು ಕೊಡಬಲ್ಲದಾದರೂ, ಥಿಯಾಲೊಜಿಯನ್ Dietrich Bonhoeffer ಪ್ರಕಾರ ಬಹಳ ಆಳವಾಗಿ ಚಿಂತೆ ಮಾಡಬೇಕಾದ ಸಂಗತಿ. ಏಕೆಂದರೆ Bonhoeffer ಗೆ ಕೇಡಿಗಿಂತಲೂ (evil), ಮೂರ್ಖತನ (stupidity) ಹೆಚ್ಚು ಕಾಳಜಿ ಮಾಡಬೇಕಾದ ಸಂಗತಿ.

ಬದುಕಿನಲ್ಲಿ ಕೆಟ್ಟ ಜನ ಖಂಡಿತ ಇದ್ದಾರೆ. ಕೊಲೆಗಾರರುದ್ದಾರೆ, ಮೋಸಗಾರರಿದ್ದಾರೆ, ಸುಳ್ಳುಗಾರರಿದ್ದಾರೆ. ಆದರೆ ಇವರು ನಮಗೆ ಹೆಚ್ಚು ಅಪಾಯಕಾರಿ ಅಲ್ಲ. ಒಮ್ಮೆ ಇದು ಕೇಡು, ಇದು ಕೆಟ್ಟದ್ದು ನಮಗೆ ಗೊತ್ತಾಗಿಬಿಟ್ಟರೆ, ಬದುಕಿನ ಒಳ್ಳೆಯತನ ಅದನ್ನು ಎದುರಿಸಲು, ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಸದಾ ಸನ್ನದ್ಧರಾಗಿರುತ್ತದೆ. ಒಬ್ಬರು ಕೆಟ್ಟ ಜನ ಎನ್ನುವುದು ನಮಗೆ ಗೊತ್ತಿರುವಾಗ ಅವರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇರುತ್ತದೆ. ಆದ್ದರಿಂದ Bonhoeffer ಹೇಳುವಂತೆ, ಕೇಡು ಯಾವಾಗಲೂ ತನ್ನೊಳಗೆ ತನ್ನನ್ನು ನಾಶ ಮಾಡುವ ಹುಳುಗಳನ್ನು ಕ್ಯಾರಿ ಮಾಡುತ್ತಿರುತ್ತದೆ.

ಆದರೆ ಮೂರ್ಖತನ, ಒಂದು ವಿಭಿನ್ನವಾದ ಸಮಸ್ಯೆ. ಮತ್ತು ಈ ಎರಡು ಕಾರಣಗಳಿಂದಾಗಿ ಮೂರ್ಖತನದ ವಿರುದ್ಧದ ಹೋರಾಟ ಅಷ್ಟು ಸುಲಭವಲ್ಲ. ಮೊದಲನೇಯ ಕಾರಣ, ಸಮಾಜವಾಗಿ ನಾವು ಮೂರ್ಖ ಜನರ ಬಗ್ಗೆ ಸ್ವಲ್ಪ ಸಹನೆ ಬೆಳೆಸಿಕೊಂಡಿದ್ದೇವೆ. ನಾವು ಮೂರ್ಖತನವನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.  ನಾವು ಒಂದು ವಿಷಯ ಗೊತ್ತಿಲ್ಲದ ಕಾರಣವಾಗಿ ಆ ಜನರ ಮೇಲೆ ಆಕ್ರಮಣ ಮಾಡುವುದಿಲ್ಲ. ಮತ್ತು ಎರಡನೇಯ ಕಾರಣ ಮೂರ್ಖ ಮನುಷ್ಯ ಜಾರಿಕೆಯ ಸ್ವಭಾವದವನು, ಪಗಡೆ ಆಡುತ್ತಿರುವ ಪಾರಿವಾಳದಂತೆ. ಅವರು ತರ್ಕ ಮತ್ತು ವಾದ ಯಾವುದಕ್ಕೂ ಸಿದ್ಧರಾಗಿರುವುದಿಲ್ಲ.

ಆದ್ದರಿಂದ Bonhoeffer ಗೆ ಮೂರ್ಖತನ ಹೆಚ್ಚು ಅಪಾಯಕಾರಿ. ಏಕೆಂದರೆ ಕೆಟ್ಟ ಜನ ಇವರನ್ನು ತಮ್ಮ ಆಯುಧವಾಗಿ  ಬಳಸಬಹುದು. ಕೆಟ್ಟ ಜನರಿಗೆ ಅಧಿಕಾರವನ್ನು ತಾವು ಒಂಟಿಯಾಗಿ ಆಕ್ರಮಿಸಿಕೊಳ್ಳುವಷ್ಟು ಸಾಮರ್ಥ್ಯವಿರುವುದಿಲ್ಲ. ಅವರಿಗೆ ತಮ್ಮ ಆಯುಧವಾಗಿ ಕೆಲಸ ಮಾಡುವ ಮೂರ್ಖ ಜನ ಬೇಕೇ ಬೇಕು. ಮೂರ್ಖ ಜನರನ್ನ ನಿರ್ದೇಶನ ಮಾಡಿ, ಮ್ಯಾನ್ಯುಪ್ಯುಲೇಟ್ ಮಾಡಿ ಎಂಥ ಕೆಲಸವನ್ನಾದರೂ ಮಾಡಿಸಿಕೊಳ್ಳಬಹುದು. ಇತಿಹಾಸ ನಮಗೆ ಕಲಿಸಿಕೊಡುವುದೇನೆಂದರೆ, ಮೂರ್ಖರು ಎಂದರೆ ಅವರು ಅಸಮರ್ಥರು ಎಂದಲ್ಲ.

ಕೇಡು, ಸೂತ್ರದ ಬೊಂಬೆಯಾಟದ ಮಾಸ್ಟರ್. ಅದಕ್ಕೆ ಸಾಮರ್ಥ್ಯಶಾಲಿ ಮೂರ್ಖರೆಂದರೆ ಬಹಳ ಪ್ರೀತಿ.

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.