ಹಲವಾರು ಯಶಸ್ವಿ ಮತ್ತು ಅಯಶಸ್ವಿ ಸಂಬಂಧಗಳನ್ನು ಅಧ್ಯಯನ ಮಾಡಿದ John Gottman ಪ್ರಕಾರ, ಯಶಸ್ವಿ ಸಂಬಂಧಗಳ ಏಕಮೇವ ಕಾರಣ Bid (ಪ್ರಯತ್ನ) ~ ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಬಹುತೇಕ ಸಂಬಂಧಗಳು (relationship) ಕೊನೆಯಾಗೋದು ಭಯಂಕರ ವಿಸ್ಫೋಟದ ಮೂಲಕ ಅಲ್ಲ. ಬಹುತೇಕ ಸಂಬಂಧಗಳಲ್ಲಿ ಅಂಥ ದೊಡ್ಡ ದ್ರೋಹ, ಸುಳ್ಳು ಇರುವುದಿಲ್ಲ. ಆದರೂ ಸಂಬಂಧಗಳು ಕೊನೆಯಾಗೋದು ಕೆಲವು rolling of eyes ಕಾರಣಗಳಿಗಾಗಿ ಮತ್ತು ಚಿಕ್ಕ ಪುಟ್ಟ ಮುನಿಸುಗಳು ಕಾರಣವಾಗಿ. ಅಮೇರಿಕನ್ ಮನಶಾಸ್ತ್ರಜ್ಞ John Gottman ನ ಪ್ರಕಾರ, ಅತ್ಯುತ್ತಮ ಸಂಬಂಧಗಳಲ್ಲಿನ ಮುಖ್ಯ ಕಾರಣ ಇಬ್ಬರೂ ಪರಸ್ಪರಿಗೆ ಗಮನ (attention) ನೀಡುವುದು, ಕಾಳಜಿ ಮಾಡುವುದು.
ಹಲವಾರು ಯಶಸ್ವಿ ಮತ್ತು ಅಯಶಸ್ವಿ ಸಂಬಂಧಗಳನ್ನು ಅಧ್ಯಯನ ಮಾಡಿದ John Gottman ಪ್ರಕಾರ, ಯಶಸ್ವಿ ಸಂಬಂಧಗಳ ಏಕಮೇವ ಕಾರಣ Bid (ಪ್ರಯತ್ನ). ಬಿಡ್ ಎಂದರೆ ಸಂಗಾತಿಯ ಗಮನ, ದೃಢೀಕರಣ ಅಥವಾ ಪ್ರೀತಿಯನ್ನು ಪಡೆಯಲು ಮಾಡುವ ಯಾವುದೇ ಪ್ರಯತ್ನ. ಅದು “ಮರದ ಮೇಲೆ ಕುಳಿತಿರುವ ಆ ಹಕ್ಕಿಯನ್ನು ನೋಡು” ಎನ್ನುವಷ್ಟು ಚಿಕ್ಕದಾಗಿರಬಹುದು ಅಥವಾ ಯಾವುದೇ ದೊಡ್ಡ ಸಹಾಯವನ್ನು ಬಯಸುವಷ್ಟು ದೊಡ್ಡ bid ಆಗಿರಬಹುದು.
ಮತ್ತು ಸಂಬಂಧಗಳಲ್ಲಿ ಯಾರಾದರೊಬ್ಬರು ಇಂಥ bid ಮಾಡಿದಾಗ, ಸಂಗಾತಿಗೆ ಎರಡು ಆಯ್ಕೆಯ ಅವಕಾಶಗಳಿರುತ್ತವೆ. ಒಂದು, ಅವರು ಆ ಮನವಿಯನ್ನು ಒಪ್ಪಿಕೊಳ್ಳಬಹುದು ಅಥವಾ ಇನ್ನೊಂದು ಅವರು bid ನ ತಿರಸ್ಕರಿಸಬಹುದು. ಯಾವಾಗ ನೀವು ಆ ಮನವಿಯನ್ನು ಪುರಸ್ಕರಿಸುತ್ತೀರೋ ಆಗ ನೀವು ನಿಮ್ಮ ಸಂಗಾತಿಯ ಮನುಷ್ಯತ್ವವನ್ನು ಧೃಡೀಕರಿಸುತ್ತೀರಿ. ಆ ವ್ಯಕ್ತಿ ನಿಮ್ಮ ಕಾಳಜಿಯ ಕೇಂದ್ರವಾಗಿರಲು ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸುತ್ತೀರಿ. “ನಿನ್ನನ್ನು ಅರ್ಥಮಾಡಿಕೊಳ್ಳುತ್ತೇನೆ”, ಮತ್ತು “ ನೀನು ಮುಖ್ಯ ನನಗೆ” ಎಂದು ಅವರಲ್ಲಿ ವಿಶ್ವಾಸ ಮೂಡಿಸುತ್ತೀರಿ.
ಆದರೆ ನೀವು ಇಂಥದೊಂದು bid ನ ಪುರಸ್ಕರಿಸದೇ ಹೋದಾಗ, ಉದಾಹರಣೆಗೆ ಅವರು ಮಾತಾಡುವಾಗ ನೀವು ಫೋನ್ ಮೇಲೆ ನಿಮ್ಮ ಗಮನ ಕೇಂದ್ರಿಕರಿಸುವುದು, ಅಥವಾ ಖಂಡತುಂಡಾಗಿ ಒಂದು ಪದದ ಉತ್ತರ ಕೊಡುವುದು ಇತ್ಯಾದಿ…. ಆಗ ನೀವು ಭಾವನಾತ್ಮಕ ತಿರಸ್ಕೃತ ಭಾವವನ್ನು ಅವರಲ್ಲಿ ಮೌನವಾಗಿ ಮೂಡಿಸುತ್ತೀರಿ. ಆಗಿನ ನಿಮ್ಮ ಇಂಥ ವರ್ತನೆ I don’t care you ಮತ್ತು you doesn’t matter to me ಎನ್ನುವ ರೀತಿಯದು. Gottman ಅವರ ಅಧ್ಯಯನದ ಪ್ರಕಾರ ಜೊತೆಯಾಗಿ ಇರುವ ಜೋಡಿಗಳ ಯಶಸ್ವಿ bid rate 80% ಮತ್ತು ಬೇರೆಯಾಗುವ ಜೋಡಿಗಳ ಯಶಸ್ವಿ bid rate 33% ಆಗಿರುತ್ತದೆ.
ಒಂದು ಸುಖೀ ಸಂಬಂಧ happily ever after ಸೂತ್ರದ ಮೇಲೆ ನಿರ್ಭರವಾಗಿರುವುದಿಲ್ಲ. ಬದಲಾಗಿ ಅದು, ನಮ್ಮ ಬದುಕಿನಿಂದ ಆಯ್ದುಕೊಂಡ ಲಕ್ಷಾಂತರ ಪುಟ್ಟ ಪುಟ್ಟ ನಿರ್ಧಾರಗಳ ಮೇಲೆ ಮತ್ತು ನಮ್ಮ ಎದುರಿನ ವ್ಯಕ್ತಿಯನ್ನು ನಾವು ಗೌರವಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
********************************

