ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER

ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್ ಸಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ).  ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ […]

ದೇವರಿಂದ ಎಷ್ಟೆಲ್ಲ ಕಲಿತಿದ್ದೀನೆಂದರೆ…. : ಹಫೀಜ್ ಪದ್ಯ

ಮೂಲ: ಸೂಫಿ ಹಫೀಜ್ ಶಿರಾಜಿ | ಕನ್ನಡಕ್ಕೆ: ಚಿದಂಬರ ನರೇಂದ್ರ ಈ ದೇವರಿಂದ ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ ನಾನೊಬ್ಬ ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ ಬೌದ್ಧ ಎಂದೆಲ್ಲಾ ಹೇಳಿಕೊಳ್ಳಲೂ ನನಗೆ ನಾಚಿಕೆಯಾಗುತ್ತದೆ. ಸತ್ಯ ನನ್ನೊಂದಿಗೆ ಎಷ್ಟು ಒಂದಾಗಿದೆಯೆಂದರೆ ನನ್ನನ್ನು ಗಂಡು, ಹೆಣ್ಣು, ಪ್ರವಾದಿ ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ ಭಯವಾಗುತ್ತದೆ. ಪ್ರೀತಿ ನನ್ನನ್ನು ಎಷ್ಟು ಅಲ್ಲಾಡಿಸಿದೆಯೆಂದರೆ ತಾನೇ ಬೆಂಕಿಯಲ್ಲಿ ಹಾರಿ ನನಗೆ ಗೊತ್ತಿರುವ ಎಲ್ಲ ಸಿದ್ಧಾಂತಗಳಿಂದ, ವೇಷಗಳಿಂದ ನನ್ನನು ಮುಕ್ತಗೊಳಿಸಿದೆ.

ಅಂತರ್ ಯಾತ್ರೆಯೇ ಮಹಾ ಯಾತ್ರೆ ~ ಹಫೀಜ್ ಹೇಳಿದ್ದು : ಅರಳಿಮರ POSTER

“ಒಂದು ಅದ್ಭುತವಾದ ಯಾತ್ರೆ ಮಾಡಬೇಕು ಅನ್ನಿಸಿತು. ಮೂರು ದಿನಗಳ ಕಾಲ ಅಲ್ಲಾಡದೆ ಕುಳಿತೆ” ಅನ್ನುತ್ತಾನೆ 14ನೇ ಶತಮಾನದ ಇರಾನಿ ಕವಿ ಹಫೀಜ್ ಶಿರಾಜಿ ಮೂರು ದಿನಗಳ ನಿಶ್ಚಲ ಏಕಾಂತವನ್ನು ಹಫಿಜ್ ಇಲ್ಲಿ ಮಹಾಯಾತ್ರೆಗೆ ಸಮನಾಗಿ ಕಂಡಿದ್ದಾನೆ. ಅಥವಾ ಅಂಥಾ ನಿಶ್ಚಲ ಏಕಾಂತವೇ  ಅದ್ಭುತಯಾತ್ರೆ ಅನ್ನುವುದು ಅವನ ಆಲೋಚನೆಯಾಗಿದ್ದಿರಬಹುದು.  ಹಾಗೆ ನಿಶ್ಚಲವಾಗಿ ಕುಳಿತುಕೊಂಡು ಹಫಿಜ್ ಮಾಡಿದ್ದೇನು? ಸುಮ್ಮನೆ ಕುಳಿತುಕೊಳ್ಳುವುದು ಯಾತ್ರೆ ಹೇಗಾಗುತ್ತದೆ?  ಹೇಗೆಂದರೆ, ಅಂಥಾ ಅವಸ್ಥೆಯಲ್ಲಿ ನಮ್ಮ ಅಂತರ್ ಯಾತ್ರೆ ನಡೆಯುತ್ತದೆ. ಈ ಯಾತ್ರೆಯು ನಾವು ಗಮನಿಸದೆ ಬಿಟ್ಟು, […]