ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER

ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್

Silhouette of Young Mother Hugging Toddler Son at Sunset

ಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ). 

ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ ವಿಸ್ತರಣೆಯೇ ಆಗಿವೆ. ಇವುಗಳಲ್ಲಿ ಒಂದನ್ನು, ಒಂದು ಕಣವನ್ನು “ಇದು ಭಗವಂತನಲ್ಲ” ಎಂದು ಹೊರಗಿಟ್ಟರೂ ಭಗವಂತ ಅಪೂರ್ಣನಾಗುತ್ತಾನೆ. 

ಈ ಕಾಣ್ಕೆಯನ್ನು ಪಡೆದ ಹಾಫಿಜ್ ಹೇಳುತ್ತಾನೆ, “ಭಗವಂತ ಹೇಳಿದ, ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ ಎಂದು”. ಹಾಫಿಜನ ಮಾತು ಎಷ್ಟು ಅರ್ಥಪೂರ್ಣವಾಗಿದೆ ನೋಡಿ! ನಮ್ಮೆಲ್ಲರ ಆತ್ಮದ ಆತ್ಯಂತಿಕ ಮೊತ್ತವೇ ಪರಮಾತ್ಮ. ಅಲ್ಲಿ ಎಲ್ಲ ಪ್ರಭೇದಗಳ ಪ್ರಾಣಿಗಳೂ ಇವೆ. ಎಲ್ಲ ಜಾತಿ – ಧರ್ಮಗಳಿಂದ ಗುರುತಿಸಿಕೊಂಡ ಮನುಷ್ಯರೂ ಇದ್ದಾರೆ. ಕುವೆಂಪು ಹೇಳುವಂತೆ, “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ”. ಆದ್ದರಿಂದ ನಾವು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನೂ ಗೌರವಿರಲು ಕಲಿಯಬೇಕು ಅನ್ನುವುದು ಹಾಫಿಜ್ ಹೇಳಿಕೆಯ ಒಟ್ಟು ಆಶಯ. 

Leave a Reply