ದೇವರಿಂದ ಎಷ್ಟೆಲ್ಲ ಕಲಿತಿದ್ದೀನೆಂದರೆ…. : ಹಫೀಜ್ ಪದ್ಯ

ಮೂಲ: ಸೂಫಿ ಹಫೀಜ್ ಶಿರಾಜಿ | ಕನ್ನಡಕ್ಕೆ: ಚಿದಂಬರ ನರೇಂದ್ರ

images

ದೇವರಿಂದ
ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ
ಬೌದ್ಧ ಎಂದೆಲ್ಲಾ
ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ ಎಷ್ಟು
ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ
ಎಂದುಕೊಳ್ಳಲೂ ಭಯವಾಗುತ್ತದೆ.

ಪ್ರೀತಿ ನನ್ನನ್ನು
ಎಷ್ಟು ಅಲ್ಲಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ,
ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

Leave a Reply