ಸಂತ ಪರಂಪರೆಯ ರಾಮನಾಮ ಪ್ರೇಮ

ಉತ್ತರ ಭಾರತದ ಸಂತ ಪರಂಪರೆಯಂತೂ ರಾಮನಾಮಕ್ಕೆ ತನ್ನನ್ನು  ಸಂಪೂರ್ಣವಾಗಿ ಅರ್ಪಿಸಿಕೊಂಡಿತ್ತು. ಎಷ್ಟೆಂದರೆ, “ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ” ಎಂದು ಕಬೀರ ಹಾಡುವಷ್ಟು! ~ ಆನಂದಪೂರ್ಣ ರಾಮ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ನಾಮ. ದೇವರಾಗಿ ಪೂಜೆಗೊಳ್ಳುವುದಕ್ಕಿಂತ, ಕಥೆಯಾಗಿ, ಆದರ್ಶವಾಗಿ, ವಿಮರ್ಶೆಗೆ ಒಳಗಾಗಿ ಮತ್ತೆಮತ್ತೆ ಪ್ರಸ್ತುತವಾಗುತ್ತಲೇ ಇರುವ ಪುರಾಣೈತಿಹಾಸಿಕ ವ್ಯಕ್ತಿ; ಅಥವಾ ಅವತಾರಿ ಶ್ರೀ ರಾಮ. ಸೂರ್ಯ ವಂಶದ, ಇಕ್ಷ್ವಾಕು ಕುಲದ ಮಹಾರಾಜ ದಶರಥನ ಮಗನಾಗಿ ಹುಟ್ಟಿ, ಲವಕುಶರ ತಂದೆಯಾಗಿ ಅವರಿಂದ ತನ್ನ […]

ರಾಮರಾಜ್ಯದ ಪರಿಕಲ್ಪನೆ ವರ್ತಮಾನದಲ್ಲಿ ಈಡೇರಿಸಲು ಸಾಧ್ಯವೇ?

ಗಾಂಧೀಜಿ ಆಡಳಿತಕ್ಕೆ ಮಾತ್ರವಲ್ಲ, ಇಡಿಯ ರಾಷ್ಟ್ರಕ್ಕೆ ಶ್ರೀ ರಾಮನೇ ಪರಮಾದರ್ಶ ಎಂದು ಆಗಾಗ ಹೇಳುತ್ತಿದ್ದ ಉಲ್ಲೇಖಗಳಿವೆ  ~ ಆನಂದಪೂರ್ಣ ರಾಮ! ಈ ಹೆಸರಿನ ಜೊತೆಜೊತೆಗೆ ನಮ್ಮ ಮನದಲ್ಲಿ ಎರಡು ವಿಶೇಷಣಗಳು ಹಾದು ಹೋಗುತ್ತವೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮತ್ತು ಪ್ರಜಾರಂಜಕ ರಾಜಾರಾಮ ನಮ್ಮ ಕಲ್ಪನೆಯಲ್ಲಿ ತುಂಬಿಕೊಳ್ಳುತ್ತಾನೆ. ಬಹುಶಃ ಭಾರತದ ಜನಮಾನಸದಲ್ಲಿ ಅತ್ಯುತ್ತಮ ಆಡಳಿತದೊಂದಿಗೆ ನೆನಪಾಗುವ ಮೊದಲ ಹೆಸರು ರಾಮನದ್ದೇ. ಅಷ್ಟರಮಟ್ಟಿಗೆ ಭಗವಂತನೆಂಬ ಮಾನ್ಯತೆಗೆ ಪಾತ್ರನಾಗಿರುವ ಪುರಾಣೈತಿಹಾಸಿಕ ವ್ಯಕ್ತಿಯೂ ಆಗಿರುವ ರಾಮನ ಖ್ಯಾತಿ ಇದೆ. ಭಾರತದಲ್ಲಷ್ಟೇ ಅಲ್ಲ, ರಾಮನ […]