ನಿಜವಾದ ಬೋಧನೆ ಯಾವುದು? : ಪರಮಹಂಸ ವಚನವೇದ

ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ. ಬೂರುಗದ ಮರದ ಬೀಜ ಅದರ ಅಡಿಯಲ್ಲಿ ಬೀಳುವುದಿಲ್ಲ. ಅವು ಗಾಳಿಯಿಂದ ದೂರಕ್ಕೆ ಒಯ್ಯಲ್ಪಟ್ಟು ಅಲ್ಲಿ ಮೊಳಕೆಯಾಗುವವು. ಇದರಂತೆಯೇ ಮಹಾಪುರುಷನ ಶಕ್ತಿಯೂ ಕೂಡ ತನ್ನಿಂದ ದೂರದಲ್ಲಿ ವ್ಯಕ್ತವಾಗುವುದು. ಅಲ್ಲಿ ಅದನ್ನು ಮೆಚ್ಚುವರು. ದೀಪ ದೂರಕ್ಕೆ ಬೆಳಕನ್ನು […]

ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು. ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು. ಈ ಎಲ್ಲ […]

ರಾಮಕೃಷ್ಣರ ಸತ್ಯ ದರ್ಶನ : ದಾರ್ಶನಿಕ ಕವಿ ಕುವೆಂಪು ಕಂಡಂತೆ

“ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದವರು. ಸರ್ವಧರ್ಮಸಮನ್ವಯಾಚಾರ್ಯರಾದವರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.” ಎಂದು ಬರೆಯುತ್ತಾರೆ ದಾರ್ಶನಿಕ ಕವಿ ಕುವೆಂಪು.  “ಎಷ್ಟು ಮತಗಳಿವೆಯೋ ಅಷ್ಟು ಪಥಗಳಿವೆ. ನೀರನ್ನು ಯಾವ ಭಾಷೆಯಲ್ಲಿ ಕರೆದರೂ ಅದು ನೀರೇ ಆಗಿರುತ್ತದೆಯಲ್ಲವೆ? ಹಾಗೆಯೇ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಆತ […]