ಧರ್ಮ ಸ್ಮೃತಿಗಳು ಎಷ್ಟಿವೆ? ಅವು ಯಾವುವು ? ~ ಸನಾತನ ಸಾಹಿತ್ಯ ಮೂಲ ಪಾಠಗಳು #48

ಹಿಂದೂ ಧಾರ್ಮಿಕ ಸಾಹಿತ್ಯವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಎಂದು ಎರಡು ಭಾಗವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ವೇದೋಪನಿಷತ್ತುಗಳು ಅತ್ಯಂತ ಪ್ರಾಚೀನವೂ ಅಧಿಕಾರಯುತವೂ ಆಗಿವೆ. ವೇದ, ಉಪನಿಷತ್ತು, ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು – ಇವೆಲ್ಲ ‘ಶ್ರುತಿ’ಗಳಾಗಿವೆ. ಪುರಾಣ, ಆಗಮ, ಶಾಸ್ತ್ರಗ್ರಂಥಗಳು ‘ಸ್ಮೃತಿ’ಗಳೆಂದು ಕರೆಸಿಕೊಳ್ಳುತ್ತವೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿರುವುದರಿಂದ ‘ಶ್ರುತಿ’ಯಾಗಿಯೂ, ಮಹಾಭಾರತ ಮಹಾಕಾವ್ಯದಲ್ಲಿ ವ್ಯಾಸರ ಮೂಲಕ ಬರೆಯಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ. ಸ್ಮೃತಿಗಳಲ್ಲಿ ಆಯಾ ಕಾಲಘಟ್ಟಕ್ಕೆ ಸೂಕ್ತವಾದ ರೀತಿ ನೀತಿಗಳನ್ನೂ, ನಡೆ – ನಿಯಮಾವಳಿಗಳನ್ನೂ ಸೂಚಿಸುವ ವಿಭಾಗಕ್ಕೆ ‘ಧರ್ಮ ಸ್ಮೃತಿ’ಗಳೆಂದು […]

108 ಉಪನಿಷತ್ತು… ನಿಮಗೆಷ್ಟು ಗೊತ್ತು?

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ… ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ […]

ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #38

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಮಾಹಿತಿ ಕೃಪೆ : http://www.vyasaonline.com ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ ಮತ್ತು ಕ್ರತು ಈ ಆರು ಮಹರ್ಷಿಗಳು ಬ್ರಹ್ಮನ ಮಾನಸಪುತ್ರರು. ಮರೀಚಿಯ ಪುತ್ರ ಕಶ್ಯಪ. ಕಶ್ಯಪನಿಂದ ಮಹಾಭಾಗ ದಕ್ಷನ ಹದಿಮೂರು ಕನ್ಯೆಯರಲ್ಲಿ ಎಲ್ಲ ಪ್ರಜೆಗಳೂ ಹುಟ್ಟಿದರು. ಅದಿತಿ, ದಿತಿ, ದನು, ಕಾಲಾ, ಅನಾಯು, ಸಿಂಹಿಕಾ, ಮುನಿ, ಕ್ರೋಧಾ, ಪ್ರಾವಾ, ಅರಿಷ್ಟಾ, ವಿನತಾ, ಕಪಿಲ, ಮತ್ತು ಕದ್ರು ಇವರು ದಕ್ಷಕನ್ಯೆಯರು. ಇವರಲ್ಲಿ ಅನಂತ ಸಂಖ್ಯೆಗಳಲ್ಲಿ ವೀರ್ಯಸಂಪನ್ನ […]