ಧರ್ಮ ಸ್ಮೃತಿಗಳು ಎಷ್ಟಿವೆ? ಅವು ಯಾವುವು ? ~ ಸನಾತನ ಸಾಹಿತ್ಯ ಮೂಲ ಪಾಠಗಳು #48

ಹಿಂದೂ ಧಾರ್ಮಿಕ ಸಾಹಿತ್ಯವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಎಂದು ಎರಡು ಭಾಗವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ವೇದೋಪನಿಷತ್ತುಗಳು ಅತ್ಯಂತ ಪ್ರಾಚೀನವೂ ಅಧಿಕಾರಯುತವೂ ಆಗಿವೆ. ವೇದ, ಉಪನಿಷತ್ತು, ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು – ಇವೆಲ್ಲ ‘ಶ್ರುತಿ’ಗಳಾಗಿವೆ. ಪುರಾಣ, ಆಗಮ, ಶಾಸ್ತ್ರಗ್ರಂಥಗಳು ‘ಸ್ಮೃತಿ’ಗಳೆಂದು ಕರೆಸಿಕೊಳ್ಳುತ್ತವೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿರುವುದರಿಂದ ‘ಶ್ರುತಿ’ಯಾಗಿಯೂ, ಮಹಾಭಾರತ ಮಹಾಕಾವ್ಯದಲ್ಲಿ ವ್ಯಾಸರ ಮೂಲಕ ಬರೆಯಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ.

ಸ್ಮೃತಿಗಳಲ್ಲಿ ಆಯಾ ಕಾಲಘಟ್ಟಕ್ಕೆ ಸೂಕ್ತವಾದ ರೀತಿ ನೀತಿಗಳನ್ನೂ, ನಡೆ – ನಿಯಮಾವಳಿಗಳನ್ನೂ ಸೂಚಿಸುವ ವಿಭಾಗಕ್ಕೆ ‘ಧರ್ಮ ಸ್ಮೃತಿ’ಗಳೆಂದು ಕರೆಯುತ್ತಾರೆ. ಇವು ಜನರ ಹಕ್ಕು – ಕರ್ತವ್ಯಗಳು, ಅಪರಾಧ – ಶಿಕ್ಷೆಗಳೇ ಮೊದಲಾದವುಗಳ ನಿರ್ದೇಶನ ನೀಡುತ್ತವೆ. ನಮ್ಮ ಪ್ರಾಚೀನ ಕಾಲದ ಅಂತಹಾ 18 ಸ್ಮೃತಿಗಳ ಪಟ್ಟಿ ಇಲ್ಲಿದೆ: 

1. ಮನು ಸ್ಮೃತಿ,

2. ಅತ್ರಿ ಸ್ಮೃತಿ,

3. ವಿಷ್ಣು ಸ್ಮೃತಿ,

4. ಹಾರೀತ ಸ್ಮೃತಿ,

5. ಯಾಜ್ಞವಲ್ಕ್ಯ ಸ್ಮೃತಿ,

6. ಉಶನ ಸ್ಮೃತಿ,

7. ಅಂಗಿರ ಸ್ಮೃತಿ,

8. ಯಮ ಸ್ಮೃತಿ,

9. ಆಪಸ್ತಂಬ ಸ್ಮೃತಿ,

10. ವಾತ್ಸ್ಯಾಯನ ಸ್ಮೃತಿ,

11. ಬೃಹಸ್ಪತಿ ಸ್ಮೃತಿ,

12. ಪರಾಶರ ಸ್ಮೃತಿ,

13. ವ್ಯಾಸ ಸ್ಮೃತಿ,

14. ಶಂಕಲಿಖಿತ ಸ್ಮೃತಿ,

15. ದಕ್ಷ ಸ್ಮೃತಿ,

16. ಗೌತಮ ಸ್ಮೃತಿ,

17. ಶಾಂತಾತಪ ಸ್ಮೃತಿ,

18. ವಸಿಷ್ಠ ಸ್ಮೃತಿ

 

Leave a Reply