108 ಉಪನಿಷತ್ತು… ನಿಮಗೆಷ್ಟು ಗೊತ್ತು?

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ…

ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ ಸಿದ್ಧಾಂತ” ಎಂಬ ಅರ್ಥಗಳನ್ನು ಕೊಟ್ಟಿವೆ.
ಬಹುತೇಕವಾಗಿ ಉಪನಿಷತ್ತುಗಳ ಸಂಖ್ಯೆ 108 ಎಂದು ಹೇಳಲಾಗುತ್ತದೆ. ಅವುಗಳಲ್ಲಿ; ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ – ಇವು 13 ಪ್ರಧಾನ ಉಪನಿಷತ್ತುಗಳು.

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಯಾವ ಉಪನಿಷತ್ತು ಯಾವ ವೇದದ ಭಾಗವಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ :

1. ಈಶಾವಾಸ್ಯೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
2. ಕೇನೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್
3. ಕಠೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
4. ಪ್ರಶ್ನೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್
5. ಮುಂಡಕೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್
6. ಮಾಂಡೂಕ್ಯೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್
7. ತೈತ್ತಿರೀಯೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
8. ಐತರೇಯೋಪನಿಷತ್= ಋಗ್ವೇದಃ, ಮುಖ್ಯ ಉಪನಿಷತ್
9. ಛಾಂದೋಗ್ಯೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್

10. ಬೃಹದಾರಣ್ಯಕೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
11. ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
12. ಕೈವಲ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್
13. ಜಾಬಾಲ ಉಪನಿಷತ್(ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
14. ಶ್ವೇತಾಶ್ವತರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
15. ಹಂಸ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್
16. ಆರುಣೇಯ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್
17. ಗರ್ಭ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
18. ನಾರಾಯಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

19. ಪರಮಹಂಸ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
20. ಅಮೃತ ಬಿನ್ದೂಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
21. ಅಮೃತ ನಾದೋಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
22. ಅಥರ್ವ ಶಿರೋಪನಿಷತ್= ಅಥರ್ವವೇದಃ, ಶೈವ ಉಪನಿಷತ್
23. ಅಥರ್ವ ಶಿಖೋಪನಿಷತ್=ಅಥರ್ವವೇದಃ, ಶೈವ ಉಪನಿಷತ್
24. ಮೈತ್ರಾಯಣಿ ಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್
25. ಕೌಷೀತಕಿ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್
26. ಬೃಹಜ್ಜಾಬಾಲ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್
27. ನೃಸಿಂಹತಾಪನೀ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

28. ಕಾಲಾಗ್ನಿರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್
29. ಮೈತ್ರೇಯಿ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್
30. ಸುಬಾಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
31. ಕ್ಷುರಿಕ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
32. ಮಾನ್ತ್ರಿಕ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
33. ಸರ್ವ ಸಾರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
34. ನಿರಾಲಮ್ಬ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
35. ಶುಕ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
36. ವಜ್ರಸೂಚಿ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

37. ತೇಜೋ ಬಿನ್ದು ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
38. ನಾದ ಬಿನ್ದು ಉಪನಿಷತ್= ಋಗ್ವೇದಃ, ಯೋಗ ಉಪನಿಷತ್
39. ಧ್ಯಾನಬಿನ್ದು ಉ ಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
40. ಬ್ರಹ್ಮವಿದ್ಯಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
41. ಯೋಗತತ್ತ್ವ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
42. ಆತ್ಮಬೋಧ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್
43. ಪರಿವ್ರಾತ್ ಉಪನಿಷತ್(ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್
44. ತ್ರಿಷಿಖಿ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್
45. ಸೀತಾ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

46. ಯೋಗಚೂಡಾಮಣಿ ಉಪನಿಷತ್= ಸಾಮವೇದಃ, ಯೋಗ ಉಪನಿಷತ್
47. ನಿರ್ವಾಣ ಉಪನಿಷತ್= ಋಗ್ವೇದಃ, ಸಂನ್ಯಾಸ ಉಪನಿಷತ್
48. ಮಣ್ಡಲಬ್ರಾಹ್ಮಣ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್
49. ದಕ್ಷಿಣಾಮೂರ್ತಿ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್
50. ಶರಭ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್
51. ಸ್ಕನ್ದ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
52. ಮಹಾನಾರಾಯಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
53. ಅದ್ವಯತಾರಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
54. ರಾಮರಹಸ್ಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

55. ರಾಮತಾಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
56. ವಾಸುದೇವ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್
57. ಮುದ್ಗಲ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್
58. ಶಾಣ್ಡಿಲ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್
59. ಪೈಂಗಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
60. ಭಿಕ್ಷುಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
61. ಮಹತ್ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್
62. ಶಾರೀರಕ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
63. ಯೋಗಶಿಖಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

64. ತುರೀಯಾತೀತ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
65. ಸಂನ್ಯಾಸ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್
66. ಪರಮಹಂಸ ಪರಿವ್ರಾಜಕ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್
67. ಅಕ್ಷಮಾಲಿಕ ಉಪನಿಷತ್= ಋಗ್ವೇದಃ, ಶೈವ ಉಪನಿಷತ್
68. ಅವ್ಯಕ್ತ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್
69. ಏಕಾಕ್ಷರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
70. ಅನ್ನಪೂರ್ಣ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್
71. ಸೂರ್ಯ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್
72. ಅಕ್ಷಿ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

73. ಅಧ್ಯಾತ್ಮಾ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್
74. ಕುಣ್ಡಿಕ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್
75. ಸಾವಿತ್ರೀ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್
76. ಆತ್ಮಾ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್
77. ಪಾಶುಪತ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್
78. ಪರಬ್ರಹ್ಮ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್
79. ಅವಧೂತ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
80. ತ್ರಿಪುರಾತಪನಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್
81. ದೇವಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

82. ತ್ರಿಪುರ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್
83. ಕಠರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
84. ಭಾವನ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್
85. ರುದ್ರ ಹೃದಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್
86. ಯೋಗ ಕುಣ್ಡಲಿನಿ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್
87. ಭಸ್ಮ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್
88. ರುದ್ರಾಕ್ಷ ಉಪನಿಷತ್= ಸಾಮವೇದಃ, ಶೈವ ಉಪನಿಷತ್
89. ಗಣಪತಿ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್
90. ದರ್ಶನ ಉಪನಿಷತ್= ಸಾಮವೇದಃ, ಯೋಗ ಉಪನಿಷತ್

91. ತಾರಸಾರ ಉಪನಿಷತ್= ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್
92. ಮಹಾವಾಕ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್
93. ಪಞ್ಚ ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್
94. ಪ್ರಾಣಾಗ್ನಿ ಹೋತ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
95. ಗೋಪಾಲ ತಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
96. ಕೃಷ್ಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
97. ಯಾಜ್ಞವಲ್ಕ್ಯ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
98. ವರಾಹ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
99. ಶಾತ್ಯಾಯನಿ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

100. ಹಯಗ್ರೀವ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್
101. ದತ್ತಾತ್ರೇಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
102. ಗಾರುಡ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್
103. ಕಲಿ ಸಂಚಾರಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್
104. ಜಾಬಾಲ ಉಪನಿಷತ್  = ಸಾಮವೇದಃ, ಶೈವ ಉಪನಿಷತ್
105. ಸೌಭಾಗ್ಯ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್
106. ಸರಸ್ವತೀ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್
107. ಬಹ್ವೃಚ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್
108. ಮುಕ್ತಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

Leave a Reply