ಧ್ಯಾನ : ಮೌನವಾಗಿರುವುದು ಎಂದರೆ ನಿಶ್ಶಬ್ದವಾಗಿರುವುದಷ್ಟೇ ಅಲ್ಲ….

ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ರೂಪುಗೊಂಡು ಗಂಟಲಲ್ಲಿ ಹುಟ್ಟಿ, ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ ಹೋಗಲು ದಾರಿಯಿಲ್ಲ. ಅದು ನಮ್ಮ ಹೃದಯದಲ್ಲೇ ಢಿಕ್ಕಿ ಹೊಡೆಯುತ್ತಾ, ಹೊರಹೋಗುವ ದಾರಿ ಕಾಣದೆ ನಮ್ಮ ವರ್ತನೆಯ ಮೂಲಕ ಹೊರಗೆ ಪ್ರಕಟಗೊಳ್ಳಲು ಕಾತರಿಸುತ್ತಾ ಇರುತ್ತದೆ. ಪರಿಣಾಮವಾಗಿ ನಾವು ಒಳಗೊಳಗೇ ಢಿಕ್ಕಿ ಹೊಡೆದು ಜರ್ಝರಿತವಾದ ಮಾತುಗಳ ಉದ್ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗುತ್ತೇವೆ ~ ಚಿತ್ಕಲಾ ಒತ್ತಡದಲ್ಲಿದ್ದೀರಾ? ಗೊಂದಲದಲ್ಲಿ ಮುಳುಗಿದ್ದೀರಾ? ಚಿಂತೆಗಳು ಕಾಡುತ್ತಿವೆಯೇ? […]

ಮನುಷ್ಯ ಉಳಿದೆಲ್ಲ ಚರಾಚರಗಳಿಗಿಂತ ಹೇಗೆ ಭಿನ್ನ? : ಸ್ವಾಮಿ ರಾಮತೀರ್ಥ

ಈ ಚರಾಚರ ಜಗತ್ತನ್ನು ಮುಖ್ಯವಾಗಿ ನಾಲ್ಕು ಭಾಗವನ್ನಾಗಿ ಮಾಡಬಹುದು. ಧಾತುವರ್ಗ, ಸಸ್ಯವರ್ಗ, ಪ್ರಾಣಿವರ್ಗ ಹಾಗೂ ಮನುಷ್ಯ ವರ್ಗ. ಈ ಲೋಕದಲ್ಲಿ ಮನುಷ್ಯನು ಪಶುಪ್ರಾಣಿಗಳಿಗಿಂತಲೂ ಹೆಚ್ಚು ಶಕ್ತಿಯನ್ನೂ ಉತ್ತಮ ರೀತಿಯಾದ ಚಲನೆಯನ್ನೂ ಕ್ರಿಯೆಯನ್ನೂ ತೋರಿಸುತ್ತಾನೆ. ದೈಹಿಕ ಚಲನೆಯಷ್ಟೇ, ಅಥವಾ ಅದಕ್ಕಿಂತ ಮನುಷ್ಯನ ಬೌದ್ಧಿಕ ಚಲನೆ ಅತ್ಯದ್ಭುತವಾದದ್ದು. ಆತ ತೋರ್ಪಡಿಸುವ ಬೌದ್ಧಿಕ ಶಕ್ತಿಸಾಮರ್ಥ್ಯಗಳು ಪ್ರಾಣಿಗಳಲ್ಲಿ ಇಲ್ಲ. ಆದ್ದರಿಂದ ಜೀವಶಕ್ತಿಯ ಬೆಳವಣಿಗೆಯ ನಿಚ್ಚಣಿಕೆಯಲ್ಲಿ ಪ್ರಾಣಿಗಳು ಮನುಷ್ಯನಿಗಿಂತಲೂ ಬಹಳ ಕೆಳಗಿನ ಮೆಟ್ಟಿಲಿನಲ್ಲಿವೆ ಎಂದು ವಿಜ್ಞಾನಿ ಸಂತ, ಗಣಿತಜ್ಞ, ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ. ಅವರು […]