ಕನ್’ಫ್ಯೂಶಿಯಸ್ ಹೇಳಿದ್ದು …

“ಯಾವತ್ತಿಗೂ ಬೀಳದೆ ಇರುವುದೇ ನಮ್ಮ ಸಾಧನೆಯಲ್ಲ. ಬಿದ್ದಾಗಲೆಲ್ಲ ಹೇಗೆ ಎದ್ದು ನಿಂತೆವು ಅನ್ನುವುದು ನಮ್ಮ ಸಾಧನೆಯಾಗುತ್ತದೆ” ಅನ್ನುತ್ತಾನೆ ತತ್ತ್ವಜ್ಞಾನಿ ಕನ್’ಫ್ಯೂಷಿಯಸ್. 

ನಾವು ಸೋಲಲೇ ಇಲ್ಲ ಅನ್ನುವುದಕ್ಕಿಂತ, ಸೋತಾಗ ಅದನ್ನು ಮೀರಿ ಹೇಗೆ ಬೆಳೆದೆವು, ಹೇಗೆ ಗೆಲುವಿನ ಛಲ ತೊಟ್ಟು ಮುನ್ನಡೆದೆವು ಮತ್ತು ಗೆಲುವು ಸಾಧಿಸಲು ಪ್ರಯತ್ನಿಸಿದೆವು ಅನ್ನುವುದು ಮುಖ್ಯವಾಗುತ್ತದೆ. ಬದುಕಿನ ನೈಜ ಸ್ವಾರಸ್ಯ ಇರುವುದೇ ಇಲ್ಲಿ. ಆದ್ದರಿಂದ ಸೋಲು ಬಂದಾಗ ಕುಗ್ಗದೆ, ಗೆಲುವಿಗೆ ಅತಿಯಾಗಿ ಹಿಗ್ಗದೆ ಮುನ್ನಡೆಯಬೇಕು ಅನ್ನುವುದು ಈ ಮಾತಿನ ವಿಸ್ತರಣೆ. 

quote

Leave a Reply