ಆತ್ಮಹತ್ಯೆ ಮಹಾಪಾಪ

~ ಪುನೀತ್ ಅಪ್ಪು

ಭೀಕರ ಬರಗಾಲದ ಸಮಯ … ಸಂತ ಶಿಷ್ಯರೊಡನೆ ತೀರ್ಥ ಯಾತ್ರೆಗೆ ಹೊರಟಿದ್ದ. ಎಲ್ಲೆಲ್ಲೂ ಹಸಿವು ನೀರಡಿಕೆ ತಾಂಡವವಾಡುತಿತ್ತು. ಮರುಭೂಮಿಯ ಉದ್ದಗಲಕ್ಕೂ ಸತ್ತ ಮತ್ತು ಸಾಯುತ್ತಿರುವ ಪಶು ಪಕ್ಷಿಗಳ ಸಾಲು.
ಶಿಷ್ಯರು ಹಸಿವಿನಿಂದ ಕಂಗಾಲಾದರು.

ಒಂದು ಕಡೆ ತೀವ್ರ ಮೇವಿನ ಕೊರತೆಯಿಂದ ಸಾಯುತ್ತಿದ್ದ ಜಾನುವಾರಿನ ಬಳಿ ನಿಂತ ಸಂತ ತನ್ನ ಬಳಿಯಿದ್ದ ಚಾಕುವಿನಿಂದ ಆ ಪ್ರಾಣಿಯ ಕತ್ತು ಕುಯ್ದು ಮಾಂಸ ತುಂಡು ಮಾಡಿದ.

ಶಿಷ್ಯರು ಕಂಗಾಲಾದರು. ‘ಗುರುಗಳೇ ಏನು ಮಾಡಿ ಬಿಟ್ಟಿರಿ?’ 

ಸಂತ ಮೆಲ್ಲನೆ ಹೇಳಿದ “ಆತ್ಮಹತ್ಯೆ ಮಹಾಪಾಪ!”.

#ನಾಸ್ತಿಕಸಂತ ಸರಣಿ

Leave a Reply