Kiran’s Never Mind series #3

ಮನಸಿನಲ್ಲಿ ಯೋಚನೆಗಳನ್ನು ತುಂಬಿಕೊಂಡಿರುವುದು ಮತ್ತು ಅಮನವಾಗಿರುವುದು (ಯೋಚನೆಗಳನ್ನು ಮಾಡದೆ ಇರುವುದು) ಎರಡೂ ವಾಸ್ತವದಲ್ಲಿ ಒಂದೇ. ಆದ್ದರಿಂದ ನಾವು ಯೋಚನೆ ಮಾಡಿದರೂ ಒಂದೇ, ಬಿಟ್ಟರೂ ಒಂದೇ. 

ಆಲೋಚನೆಗಳು ನೀಲಾಕಾಶದಲ್ಲಿ ತೇಲುವ ಮೋಡಗಳಂತೆ. ಮೋಡಗಳು ಘಳಿಗೆಗೊಂದು ಆಕಾರ ತಾಳುತ್ತಾ ಕರಗುವ ಹಾಗೆ ಆಲೋಚನೆಗಳು ಕೂಡ ಒಂದಾದ ಮೇಲೆ ಒಂದರಂತೆ ವಿವಿಧ ಭಾವಗಳನ್ನು ಹೊತ್ತು, ಮೂಡಿ, ಮರೆಯಾಗುತ್ತವೆ. ಆದ್ದರಿಂದ ಅವನ್ನು ಸತ್ಯವೆಂದು ನಂಬಿ, ಅವುಗಳಿಗೆ ಅಂಟಿಕೊಂಡು ಕೂರಬಾರದು. ನಾವು ಕುದುರೆಯಾಕಾರದ ಮೋಡವನ್ನು ನೋಡಿ, ಅದನ್ನೇ ನೆಚ್ಚಿಕೊಂಡು ಕೂತರೆ, ಮತ್ತೊಂದು ಕ್ಷಣಕ್ಕೆ ಅದು ದೋಣಿಯಾಕಾರ ತಾಳಿ ಸಾಗತೊಡಗಿರುತ್ತದೆ. ಆಗ ನಾವು ಮೋಡದ ಕುದುರೆಗಾಗಿ ದುಃಖಿಸುತ್ತಲೇ ಮೋಹಪಡುತ್ತಲೋ ಕೂತರೆ ನಮ್ಮದೇ ಸಮಯ ಮತ್ತು ಸಮಾಧಾನಗಳು ಬಲಿಯಾಗುತ್ತವೆ. ಹಾಗೆಯೇ ಆಲೋಚನೆಗಳು ಕೂಡಾ. ಅವು ಒಂದು ನಿರ್ದಿಷ್ಟ ಸಮಯದಲ್ಲಿ ಹೊಂದುವ ಮಹತ್ವವನ್ನು ಮತ್ತೊಂದು ಸಂದರ್ಭದಲ್ಲಿ ಕಳೆದುಕೊಂಡಿರುತ್ತವೆ. ಆದ್ದರಿಂದ ಆಲೋಚನೆಗಳಿಗೆ ಅಂಟಿಕೊಂಡು ಕೂರಬೇಡಿ. ಖಾಲಿಯಾಗಿರಿ. ಅಷ್ಟೇ 🙂 

fb_img_15191234793611992953388.jpg
Concept and art by Kiran Madalu | Courtesy: Kiran’s personal collection

Leave a Reply