ಅಕ್ಕ ಕಂಡ ಚೆನ್ನಮಲ್ಲಯ್ಯನ ಕನಸು…

ಚೆನ್ನಮಲ್ಲಿಕಾರ್ಜುನನ್ನು ಕನಸಿನಲ್ಲಿ ಕಂಡ ಕುರಿತು ಅಕ್ಕ ಮಹಾದೇವಿ ರಚಿಸಿರುವ ಎರಡು ವಚನಗಳು ಇಲ್ಲಿವೆ:

ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. 
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು 
ಬಂದೆನ್ನ ನೆರೆದ ನೋಡವ್ವಾ. 
ಆತನನಪ್ಪಿಕೊಂಡು ತಳವೆಳಗಾದೆನು. 
ಚೆನ್ನಮಲ್ಲಿಕಾರ್ಜುನನ ಕಂಡು 
ಕಣ್ಣಮುಚ್ಚಿ ತೆರೆದು ತಳವೆಳಗಾದೆನು. 

~

ಅಕ್ಕ ಕೇಳೌ, ನಾನೊಂದು ಕನಸ ಕಂಡೆ. 
ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ. 
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು 
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ. 
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. 
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.