ಕೆಲವು ನಂಬಿಕೆಗಳ ಪ್ರಕಾರ, ಆಯಾ ತಿಂಗಳಲ್ಲಿ ಹುಟ್ಟಿದವರ ಗುಣ ನಡತೆಗಳನ್ನು ನಿರ್ದಿಷ್ಟವಾಗಿ ಕೆಲವು ಪ್ರಾಣಿಗಳಿಗೆ ಹೋಲಿಸಬಹುದಾಗಿದೆ. ವಿಶೇಷವಾಗಿ ಶಮನ್ ಸಮುದಾಯದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಇತ್ತೀಚೆಗೆ ಫೇಸ್’ಬುಕ್ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಫನ್ ಗೇಮ್ ಆಗಿ ಚಾಲ್ತಿಯಲ್ಲಿದೆ.
ಆಲೋಚಿಸಬಲ್ಲ ಬೌದ್ಧಿಕ ಸಾಮರ್ಥ್ಯ ಇರುವ ಮನುಷ್ಯ ಜೀವಿಗಳು, ಪ್ರಾಣಿಗಳಲ್ಲಿ ತನ್ನ ಸ್ವಭಾವಗಳ ಸಂಕೇತವನ್ನು ಹುಡುಕುತ್ತಾರೆ. ಅವುಗಳನ್ನು ಶಕುನವಾಗಿಯೂ, ಸಂವಾಹಕವಾಗಿಯೂ ಅತೀತದ ಸಂದೇಶವಾಗಿಯೂ ನೋಡುತ್ತಾರೆ. “ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು” ಅನ್ನುವುದು ನಿಜವಾದರೂ ಈ ಸಹಜೀವಿಗಳು ನಮ್ಮ ಮನೋಸಾಮ್ರಾಜ್ಯದಲ್ಲಿ ಪಡೆದಿರುವ ಸ್ಥಾನವನ್ನು ನಿವಾರಿಸುವುದು ಅಷ್ಟು ಸುಲಭವಲ್ಲ.
ಅದಕ್ಕೆ ಸರಿಯಾಗಿ, ಜಗತ್ತಿನ ಎಲ್ಲ ಜನಪದಗಳು, ನಾಗರಿಕತೆಗಳು, ಮತ – ಧರ್ಮ – ಪಂಥಗಳು ಪ್ರಾಣಿಗಳೊಡನೆ ನಂಬಿಕೆಯನ್ನು ಬೆಸೆದುಕೊಂಡಿವೆ. ಪ್ರಾಣಿಗಳನ್ನು ನಾವು ಮನುಷ್ಯರ ಬದುಕಿನ ಸಂಕೇತವಾಗಿ, ಮನೆತನಗಳ ಗುರುತಾಗಿ, ಅರಸೊತ್ತಿಗೆಗಳ ಮುದ್ರೆಯಾಗಿ, ತಿಂಗಳು – ವರ್ಷಗಳ ಪ್ರತಿನಿಧಿಗಳಾಗಿಯೂ ಕಾಣುತ್ತ ಬಂದಿದ್ದೇವೆ. ಉದಾಹರಣೆಗೆ, ಚೀನಾದಲ್ಲಿ ಪ್ರತಿ ವರ್ಷವನ್ನು ಒಂದು ಪ್ರಾಣಿ ಪ್ರತಿನಿಧಿಸುತ್ತದೆ. ಅಲ್ಲಿ ಈಗ ನಡೆಯುತ್ತಿರುವುದು ‘ಯಿಯರ್ ಆಫ್ ಡಾಗ್’. ನಾಯಿ ಈ ಬಾರಿ ಚೀನಾದ ವಾರ್ಷಿಕ ಪ್ರತಿನಿಧಿ.
ಕೆಲವು ನಂಬಿಕೆಗಳ ಪ್ರಕಾರ, ಆಯಾ ತಿಂಗಳಲ್ಲಿ ಹುಟ್ಟಿದವರ ಗುಣ ನಡತೆಗಳನ್ನು ನಿರ್ದಿಷ್ಟವಾಗಿ ಕೆಲವು ಪ್ರಾಣಿಗಳಿಗೆ ಹೋಲಿಸಬಹುದಾಗಿದೆ. ವಿಶೇಷವಾಗಿ ಶಮನ್ ಸಮುದಾಯದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಇತ್ತೀಚೆಗೆ ಫೇಸ್’ಬುಕ್ ಸಾಮಾಜಿಕ ಜಾಲತಾಣದಲ್ಲಿ ಇದು ಸಾಮಾನ್ಯವಾಗಿ ಫನ್ ಗೇಮ್ ಆಗಿ ಕಾಣಿಸಿಕೊಳ್ಳುತ್ತ ಇರುತ್ತದೆ. ನಾವು ಯಾವ ತಿಂಗಳಲ್ಲಿ ಹುಟ್ಟಿದ್ದೇವೆ ಮತ್ತು ನಮ್ಮ ಗುಣ ಯಾವ ಪ್ರಾಣಿಯನ್ನು ಹೋಲುತ್ತದೆ? ಎಂಬ ಕುತೂಹಲ ನಿಮ್ಮಲ್ಲಿ ಇರುವುದಾದರೆ, ಮುಂದೆ ಕೊಟ್ಟಿರುವ ಪಟ್ಟಿಯನ್ನು ನೋಡಿ. ನಿಜಕ್ಕೂ ಇದೊಂದು ಮೋಜು. ನಿಮ್ಮ ಸ್ವಭಾವಕ್ಕೂ, ನಿಮ್ಮ ಜನ್ಮದಿನಾಂಕ – ತಿಂಗಳುಗಳ ಅನುಸಾರವಾಗಿ ನೀಡಲಾಗಿರುವ ಪ್ರಾಣಿಗೂ ಅದೆಷ್ಟು ತಾಳೆಯಾಗುತ್ತದೆ ನೀವೇ ಲೆಕ್ಕ ಹಾಕಿ ನೋಡಿ!
ಜನವರಿ – ಮಾರ್ಚ್
ಜನವರಿ 01 – 09 ~ ನಾಯಿ | ಜನವರಿ 10 – 24 ~ ಇಲಿ | ಜನವರಿ 25 – 31 ~ ಸಿಂಹ | ಫೆಬ್ರವರಿ 01 – 05 ~ ಬೆಕ್ಕು | ಫೆಬ್ರವರಿ 06 – 14 ~ ಪಾರಿವಾಳ | ಫೆಬ್ರವರಿ 15 – 21 ~ ಆಮೆ | ಫೆಬ್ರವರಿ 22 – 28 ~ ಚಿರತೆ | ಮಾರ್ಚ್ 01 – 12 ~ ಮಂಗ | ಮಾರ್ಚ್ 13 – 15 ~ ಸಿಂಹ | ಮಾರ್ಚ್ 16 – 23 ~ ಇಲಿ | ಮಾರ್ಚ್ 24 – 31 ~ ಬೆಕ್ಕು
ಏಪ್ರಿಲ್ – ಜೂನ್
ಏಪ್ರಿಲ್ 01 – 03 ~ ನಾಯಿ | ಏಪ್ರಿಲ್ 04 – 14 ~ ಚಿರತೆ | ಏಪ್ರಿಲ್ 15 – 26 ~ ಇಲಿ | ಏಪ್ರಿಲ್ 27 – 30 ~ ಆಮೆ | ಮೇ 01 – 13 ~ ಮಂಗ | ಮೇ 14 – 21 ~ ಪಾರಿವಾಳ | ಮೇ 22 – 31 ~ ಸಿಂಹ | ಜೂನ್ 01 – 03 ~ ಇಲಿ | ಜೂನ್ 04 – 14 ~ ಆಮೆ | ಜೂನ್ 15 – 20 ~ ನಾಯಿ | ಜೂನ್ 21 – 24 ~ ಮಂಗ | ಜೂನ್ 25 – 30 ~ ಬೆಕ್ಕು
ಜುಲೈ – ಸೆಪ್ಟೆಂಬರ್
ಜುಲೈ 01 – 09 ~ ಇಲಿ | ಜುಲೈ 10 – 15 ~ ನಾಯಿ | ಜುಲೈ 16 – 26 ~ ಪಾರಿವಾಳ | ಜುಲೈ 27 – 31 ~ ಬೆಕ್ಕು | ಆಗಸ್ಟ್ 01 – 15 ~ ಮಂಗ | ಆಗಸ್ಟ್ 16 – 25 ~ ಇಲಿ | ಆಗಸ್ಟ್ 26 – 31 ~ ಆಮೆ | ಸೆಪ್ಟೆಂಬರ್ 01 – 14 ~ ಪಾರಿವಾಳ | ಸೆಪ್ಟೆಂಬರ್ 15 – 27 ~ ಬೆಕ್ಕು | ಸೆಪ್ಟೆಂಬರ್ 28 – 30 ~ ನಾಯಿ
ಅಕ್ಟೋಬರ್ – ಡಿಸೆಂಬರ್
ಅಕ್ಟೋಬರ್ 01 – 15 ~ ಮಂಗ | ಅಕ್ಟೋಬರ್ 16 – 27 ~ ಆಮೆ | ಅಕ್ಟೋಬರ್ 28 – 31 ~ ಚಿರತೆ | ನವೆಂಬರ್ 01 – 16 ~ ಸಿಂಹ | ನವೆಂಬರ್ 17 – 30 ~ ಬೆಕ್ಕು| ಡಿಸೆಂಬರ್ 01 – 16 ~ ನಾಯಿ | ಡಿಸೆಂಬರ್ 17 – 25 ~ ಮಂಗ | ಡಿಸೆಂಬರ್ 26 – 31 ~ ಪಾರಿವಾಳ
ಈಗ, ಯಾವ ಪ್ರಾಣಿ ಯಾವ ಗುಣಗಳನ್ನು ಸಂಕೇತಿಸುತ್ತವೆ ಎಂದು ನೋಡೋಣ:
ನಾಯಿ : ನಿಷ್ಠೆ ಮತ್ತು ಬದ್ಧತೆ. ನಿಯಮ ಪಾಲನೆ. ಸರಳತೆ ಮತ್ತು ಸಹಜತೆ. ಬಟ್ಟೆಗಳ ವಿಷಯದಲ್ಲಿ ವಿಶೇಷ ಆಸಕ್ತಿ. ನವೀನ ವಿನ್ಯಾಸದ ಬಟ್ಟೆಗಳ ಸಂಗ್ರಹ ಮಾಡುವ ಹವ್ಯಾಸ. ಪ್ರತಿಷ್ಠಿತ ಹಾಗೂ ಉನ್ನತ ಮಟ್ಟದ ಜನಗಳ ಸಹವಾಸ.
ಇಲಿ : ತುಂಟತನ, ಯಾವಾಗಲೂ ಏನಾದರೂ ಚೇಷ್ಟೆ ಮಾಡುತ್ತಲೇ ಇರುವ ಸ್ವಭಾವ. ಮುದ್ದು ಮತ್ತು ಮುಗ್ಧತೆ ಎರಡೂ ಮೆಳೈಸಿದ ವ್ಯಕ್ತಿತ್ವ. ಸೂಕ್ಷ್ಮ ಹಾಗೂ ಸಂವೇದನಾಶೀಲ. ನೇರವಂತಿಕೆಗೆ ಆದ್ಯತೆ. ಗೆಳೆಯರ ಬಳಗದಲ್ಲಿ ಕೇಂದ್ರ ಬಿಂದು.
ಸಿಂಹ : ಶಾಂತಿಪ್ರಿಯರು. ಬಹಿರ್ಮುಖಿ ಮತ್ತು ಚಲನಶೀಲ. ಗಮನ ಸೆಳೆಯುವ ವ್ಯಕ್ತಿತ್ವ. ಪ್ರೇಮಿಸುವ ಹಾಗೂ ಪ್ರೇಮಿಸಲ್ಪಡುವ ಉತ್ಕಟತೆ. ಘನತೆ ಮತ್ತು ಗಾಂಭೀರ್ಯ.
ಬೆಕ್ಕು : ನಿಗೂಢ ಮತ್ತು ಸೌಮ್ಯ. ಪ್ರೇಮಪೂರ್ಣ. ನಾಚಿಕೆ ಸ್ವಭಾವ, ತುಂಟತನ. ಸಮಾಧಾನ ಚಿತ್ತ. ಯಾರಾದರೂ ತಂಟೆಗೆ ಬಂದರೆ ತಿರುಗಿ ಬೀಳುವ ಗುಣ. ಉಡುಗೆ ತೊಡುಗೆಯ ಕುರಿತು ವಿಶೇಷ ಪರಿಣತಿ ಮತ್ತು ವಿಶಿಷ್ಟ ಆಯ್ಕೆ.
ಆಮೆ : ಪರಿಪೂರ್ಣತೆಯ ಹಾದಿಯಲ್ಲಿ ನಡಿಗೆ. ಹಿತಾನುಭವ ನೀಡುವ ವ್ಯಕ್ತಿತ್ವ. ತೊಂದರೆ ಕೊಟ್ಟವರನ್ನು ಕ್ಷಮಿಸುವ ಸಂಯಮ. ಘನತೆ ಮತ್ತು ಔದಾರ್ಯ ಮುಖ್ಯ ಗುಣಗಳು.
ಪಾರಿವಾಳ : ಸಂತಸ ಮತ್ತು ಲವಲವಿಕೆಯ ಪ್ರತಿನಿಧಿ. ನೇರವಂತಿಕೆ. ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಕೆಲಸ ಮಾಡುವ ಗುಣ. ಪ್ರೇಮದ ವಿಷಯಕ್ಕೆ ಬಂದಾಗ ಸುಲಭದಲ್ಲಿ ಮರುಳಾಗುವ ವ್ಯಕ್ತಿತ್ವ. ಈ ಕುರಿತು ಎಚ್ಚರಿಕೆ ಅಗತ್ಯ.
ಚಿರತೆ : ನಿಗೂಢ, ರಹಸ್ಯ ವ್ಯಕ್ತಿತ್ವ. ಒತ್ತಡವನ್ನು ಸುಲಭವಾಗಿ ನಿಭಾಯಿಸಬಲ್ಲ ತಾಳ್ಮೆ. ಸೀಮಿತ ಗೆಳೆಯರ ಬಳಗ. ನಿಮ್ಮದೇ ಆಲೋಚನೆಯಂತೆ ಎಲ್ಲವೂ ನಡೆಯಬೇಕೆಂದು ಬಯಸುವ ಚಿಕ್ಕ ದೋಷ. ಜನರಿಗೆ ತೀವ್ರ ಅಗತ್ಯ ಬಿದ್ದಾಗ, ಎಂಥದೇ ಪರಿಸ್ಥಿತಿ ಇದ್ದರೂ ಎದುರಿಸಿ ಅವರ ಸಹಾಯಕ್ಕೆ ನಿಲ್ಲುವ ಗುಣ.
ಮಂಗ : ತೀವ್ರ ಚಟುವಟಿಕೆಯ, ಚಂಚಲ ಚಿತ್ತ. ಅಂದುಕೊಂಡಿದ್ದನ್ನು ಆ ಕೂಡಲೇ ಮಾಡಿಮುಗಿಸುವ ಚಡಪಡಿಕೆ. ಅಂತರಂಗದಲ್ಲಿ ತೀರ ಸರಳ ಮತ್ತು ಪರಿಚಿತರ ನಡುವೆ ಆಕರ್ಷಣೆಯ ಕೆಂದ್ರ ಬಿಂದು. ಸಿಲುಕಿಬೀಳುವಂತ ಯಾವುದೇ ಸನ್ನಿವೇಶದ ಬಳಿಯೂ ಸುಳಿಯದ ಚಾಣಾಕ್ಷತೆ. ಆರನೇ ಇಂದ್ರಿಯ ಚುರುಕಾಗಿದ್ದು, ಯಾವುದೇ ಬಲೆಯಲ್ಲಿ ಬೀಳದ ಎಚ್ಚರದ ಸ್ವಭಾವ.
(ಚಿತ್ರ ಕೃಪೆ: Pinterest )


ಸರ್ ಮತೆ ಫೆಬ್ರವರಿಯಲ್ಲಿ29 ಇದೇ ಅದು ಏನು ಹೇಳುತ್ತೆ
LikeLike
Will check !
LikeLike
Yes we will check
LikeLike