ತಾವೋ ತಿಳಿವು #2

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

taichi

 

 

 

 

 

ರುವುದು ಮತ್ತು ಇರದಿರುವುದು

ಹುಟ್ಟಿಸುತ್ತವೆ ಒಂದನ್ನೊಂದು.

ಸರಳ ಮತ್ತು ಸಂಕೀರ್ಣ,

ಆಸರೆ ಒಂದಕ್ಕೊಂದು.

ದೂರ – ಸಮೀಪ ವ್ಯಾಖ್ಯಾನ ಮಾಡುತ್ತವೆ,

ಒಂದು ಇನ್ನೊಂದನ್ನು.

ಆಳ ಮತ್ತು ಎತ್ತರ ಸವಾರಿ ಮಾಡುತ್ತವೆ,

ಒಂದರ ಮೇಲೊಂದು.

ಭೂತ ಮತ್ತು ಭವಿಷ್ಯ ಹಿಂಬಾಲಿಸುತ್ತವೆ,

ಒಂದನ್ನೊಂದು.

ಆದ್ದರಿಂದಲೇ ಸಂತನ ಕೆಲಸದಲ್ಲಿ ದುಡಿಮೆ ಇಲ್ಲ,

ಕಲಿಸುವಿಕೆಯಲ್ಲಿ ಮಾತಿಲ್ಲ.

ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ

ಹೆಣ ಹೊರುವಲ್ಲಿಯೂ;

ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,

ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ ಸುಮ್ಮನಾಗುತ್ತಾನೆ.

ಅಂತೆಯೇ ತಾವೋ ಅನನ್ಯ, ಅವಿನಾಶಿ.

 

Leave a Reply