ತಾವೋ ತಿಳಿವು #49 ~ ಊರಿನ ದೊರೆ ಐಲಾದರೆ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಹಗುರ, ಸಾಮಾನ್ಯ ಅಲ್ಲ ಬೇರು ಭಾರೀ ಗಟ್ಚಿ. ಯಾವುದು ನಿಶ್ಚಲವೋ ಅದೇ ಎಲ್ಲ ಚಲನೆಯ ಮೂಲ. ಅಂತೆಯೇ ಸಂತ ಎಲ್ಲ ಕಡೆ ಕಾಣಿಸಿಕೊಂಡರೂ ಮನೆ ಮಾತ್ರ ಬಿಟ್ಟು ಹೋಗಿರುವುದಿಲ್ಲ. ಎಷ್ಚೇ ಆಕರ್ಷಣೆಗಳಿದ್ದಾಗಲೂ ಕೊಂಚವೂ ಉದ್ವಿಗ್ನನಾಗಿರುವುದಿಲ್ಲ. ಆದರೆ, ಊರಿನ ದೊರೆ ಐಲಾದರೆ ಜನರ ಕಣ್ಣಲ್ಲಿ ಹಗುರ. ಹಗುರ ಆಗುತ್ತಿದ್ದಂತೆಯೇ ದಿಕ್ಕು ತಪ್ಪುತ್ತದೆ, ಮನೆಯ ವಿಳಾಸ ಮರೆತುಹೋಗುತ್ತದೆ.

ತಾವೋ ತಿಳಿವು #46 : ಯಾರು ಈ ಸಂಯಮಿಗಳು?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ದೇಶವನ್ನು ಮುನ್ನಡೆಸಲು ತಕ್ಕಡಿ ಎಷ್ಟು ಮುಖ್ಯವೋ ತಕ್ಕಡಿ ಹಿಡಿಯುವವನ ಸಂಯಮವೂ ಅಷ್ಟೇ ಮುಖ್ಯ. ಯಾರು ಈ ಸಂಯಮಿಗಳು? ರುಚಿಯ ಬಗ್ಗೆ ತಕರಾರು ಮಾಡದವರು, ಆಕಾಶವನ್ನು ಮೈತುಂಬ ಹೊದ್ದವರು, ಬೆಳಕಿನಂತೆ ಹಬ್ಬಿಕೊಳ್ಳುವವರು, ಪರ್ವತಗಳಂತೆ ನೆಲಕ್ಕೆ ಕಾಲೂರಿ ನಿಂತವರು, ಬದುಕು ಕಟ್ಟಿಕೊಟ್ಟ ಬುತ್ತಿಯನ್ನೆಲ್ಲ ಕಣ್ಣಿಗೊತ್ತಿಕೊಂಡು ಉಣ್ಣುವವರು. ಕಣ್ಣಳತೆಯಲ್ಲಿ ಯಾವ ಮೈಲಿಗಲ್ಲೂ ಇಲ್ಲದವರು. ಅವರು ಯಾವುದನ್ನೂ ಕಟ್ಚಿಹಾಕುವುದಿಲ್ಲ ಅಂತೆಯೇ ಅವರಿಗೆ ಯಾವುದೂ ಅಸಾಧ್ಯವಲ್ಲ. ತಾಯಿ ಮಗುವನ್ನು ಕಾಡುವಂತೆ ಅವರು […]

ತಾವೋ ತಿಳಿವು #3

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ   ಒಳ್ಳೆಯತನ ಎಷ್ಟು ಒಳ್ಳೆಯದಾಗಬಲ್ಲದು ಎಂಬುದಕ್ಕೆ ನೀರು, ಒಂದು ಉತ್ತಮ ಉದಾಹರಣೆ ~ ಜಗತ್ತಿನ ಪ್ರತೀ ಜೀವವನ್ನು ಬೆಳೆಸುತ್ತದೆಯಾದರೂ ನೀರು, ಎಂದೂ ಯಾವದನ್ನೂ ಕ್ಲೇಮ್ ಮಾಡಿಲ್ಲ. ಎತ್ತರದಲ್ಲಿ ಹುಟ್ಟಿದರೂ ಜನ ಹೆದರುವ, ಬಾಳಲು ನಾಚುವ ತಗ್ಗುಗಳಲ್ಲೂ ನಿರಾತಂಕವಾಗಿ ಮನೆ ಮಾಡುತ್ತದೆ ಇದು ಪಕ್ಕಾ ತಾವೋ ಸ್ವಭಾವ. ~ ನೀರು ಸೂಕ್ಷ್ಮದಲ್ಲಿ ನುಗ್ಗುತ್ತದೆ ಆಳದಲ್ಲಿ ಇಳಿಯುತ್ತದೆ ಒಮ್ಮೆ ಅಂತಃಕರಣ, ಒಮ್ಮೊಮ್ಮೆ ಆಗ್ರಹ ಎಲ್ಲವನ್ನೂ ಒಳಗೊಳ್ಳೋದು ಅನ್ಯಾಯದ ವಿರುದ್ಧ ಆಕ್ರೋಶ […]

ತಾವೋ ತಿಳಿವು #2

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ           ಇರುವುದು ಮತ್ತು ಇರದಿರುವುದು ಹುಟ್ಟಿಸುತ್ತವೆ ಒಂದನ್ನೊಂದು. ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು. ದೂರ – ಸಮೀಪ ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು. ಆಳ ಮತ್ತು ಎತ್ತರ ಸವಾರಿ ಮಾಡುತ್ತವೆ, ಒಂದರ ಮೇಲೊಂದು. ಭೂತ ಮತ್ತು ಭವಿಷ್ಯ ಹಿಂಬಾಲಿಸುತ್ತವೆ, ಒಂದನ್ನೊಂದು. ಆದ್ದರಿಂದಲೇ ಸಂತನ ಕೆಲಸದಲ್ಲಿ ದುಡಿಮೆ ಇಲ್ಲ, ಕಲಿಸುವಿಕೆಯಲ್ಲಿ ಮಾತಿಲ್ಲ. ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ ಹೆಣ ಹೊರುವಲ್ಲಿಯೂ; ತಾಯಿಯಾಗಲೊಲ್ಲ, […]