ತಾವೋ ತಿಳಿವು #6 : ಭರವಸೆ ಭಯದಷ್ಟೇ ಪೊಳ್ಳು!

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಗೆಲುವು ಸೋಲಿನಷ್ಟೇ ಅಪಾಯಕಾರಿ
ಭರವಸೆ, ಭಯದಷ್ಟೇ ಪೊಳ್ಳು.

ಗೆಲುವು ಸೋಲಿನಷ್ಟೇ ಅಪಾಯಕಾರಿ ಹಾಗೆಂದರೇನು?
ಒಡೆಯನಾದವನು ಇನ್ನೊಬ್ಬನ ಆಳು
ವಿಶ್ವಾಸ ಗಳಿಸುವುದು ಕಳೆದುಕೊಳ್ಳುವುದು ಎರಡೂ ಆತಂಕದ ವಿಷಯಗಳೇ
ಆದ್ದರಿಂದಲೇ, ಗೆಲುವು ಸೋಲಿನಷ್ಟೇ ಅಪಾಯಕಾರಿ.

ಭರವಸೆ, ಭಯದಷ್ಟೇ ಪೊಳ್ಳು. ಹಾಗೆಂದರೇನು?
ಭಯ-ಭರವಸೆ ‘ನಾನು’ ಹುಟ್ಟಿಸಿದ ಅತೃಪ್ತ ಅವಳಿಗಳು
‘ನಾನು’ ನಾನಾಗಿ ಉಳಿಯದ ಮೇಲೆ
ಭಯಕ್ಕೆಂಥ ಭರವಸೆ? ಭರವಸೆಗೆಲ್ಲಿ ಭಯ?

ಜಗತ್ತು ಸ್ವಂತ ಆದಾಗ ಮಾತ್ರ
ಪ್ರೀತಿಸುವುದು ಸುಲಭ ಸಾಧ್ಯ.

Leave a Reply