ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಕೆಲವರ ಪ್ರಕಾರ
ನಾನು ಹೇಳೋದೆಲ್ಲ ವ್ಯರ್ಥ.
ಇನ್ನೂ ಕೆಲವರ ಪ್ರಕಾರ ‘ಉದಾತ್ತ’,
ಆದರೆ ಕೆಲಸಕ್ಕೆ ಬಾರದು.
ತಮ್ಮೊಳಗೆ ಇಣುಕಿ ನೋಡಿಕೊಂಡವರಿಗೆ
ಈ ವ್ಯರ್ಥ, ಒಂದು ಪರಿಪೂರ್ಣ ಅರ್ಥ;
ಕೆಲಸದಲ್ಲಿ ಬಳಸಿಕೊಂಡವರಿಗೆ ಮಾತ್ರ ಗೊತ್ತು
ಈ ಉದಾತ್ತದ ಬೇರುಗಳ ಆಳ.
ನಾನು ಹೇಳೋದು ಈ ಮೂರನ್ನು ಮಾತ್ರ
ಸರಳತೆ, ಸಮಾಧಾನ, ಅಂತಃಕರಣ.
ಈ ಮೂರೂ ನಿಮ್ಮ ಬಹು ದೊಡ್ಡ ಆಸ್ತಿ.
ಕೆಲಸ ಮತ್ತು ವಿಚಾರದಲ್ಲಿನ ಸರಳತೆ
ನಿಮ್ಮನ್ನು ಇರುವಿಕೆಯ ಮೂಲಕ್ಕೆ ಕರೆದೊಯ್ದರೆ
ಗೆಳೆಯರ ಮತ್ತು ವೈರಿಗಳ ಬಗೆಗಿನ ಸಮಾಧಾನ
ಜಗತ್ತಿನ ಆಗು ಹೋಗುಗಳ ಜೊತೆ ಒಪ್ಪಂದ ಸಾಧ್ಯವಾಗಿಸುವುದು
ನಿಮ್ಮ ಬಗ್ಗೆ ನಿಮಗೆ ಅಂತಃಕರಣ ಸಾಧ್ಯವಾದಾಗ ಮಾತ್ರ
ಜಗತ್ತಿನ ಎಲ್ಲದರ ಜೊತೆ ಹೊಂದಾಣಿಕೆ ಸಾಧ್ಯ.