ತಾವೋ ತಿಳಿವು #29 ~ ನಿಜವಾಗಿಯೂ ಪರಿಪೂರ್ಣ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ತಿಳಿದಿಲ್ಲ ಎನ್ನೋದು ಶಕ್ತಿ
ತಿಳಿದಿದೆ ಎಂದುಕೊಳ್ಳುವುದು ಕಾಯಿಲೆ.
ಕಾಯಿಲೆಯನ್ನು ಕಾಯಿಲೆ ಎಂದು
ಗುರುತಿಸಿದಾಗಲೇ
ತೆರೆದುಕೊಂಡ ಆರೋಗ್ಯದ ಬಾಗಿಲು.

ಸಂತ, ತನಗೆ ತಾನೇ ವೈದ್ಯ
ಎಲ್ಲ ತಿಳುವಳಿಕೆಗಳಿಂದ ತನ್ನನ್ನು ಗುಣಪಡಿಸಿಕೊಂಡಿದ್ದಾನೆ,
ಆದ್ದರಿಂದಲೇ
ನಿಜವಾಗಿಯೂ ಪರಿಪೂರ್ಣನಾಗಿದ್ದಾನೆ.

Leave a Reply