ಗೃಹಸ್ಥರಿಗೆ ಸಾಧನಾಸೂತ್ರ : ಶಾರದಾ ದೇವೀ ವಾತ್ಸಲ್ಯ ತೀರ್ಥ

sarada_devi4

ರಾಮಕೃಷ್ಣ ಪರಮಹಂಸರ ಸಂಪರ್ಕಕ್ಕೆ ಬಂದ ಕೆಲವು ತರುಣರು ಸನ್ಯಾಸ ಸ್ವೀಕರಿಸಿ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದರು. ಅದೇ ವೇಳೆಗೆ ಕೆಲವು ಶಿಷ್ಯರು ಅಧ್ಯಾತ್ಮ ಸಾಧನೆಗೆ ಹಂಬಲಿಸುತ್ತಿದ್ದರಾದರೂ ಸನ್ಯಾಸ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಕೆಲವರು ಅದಾಗಲೇ ಸಂಸಾರದಲ್ಲಿದ್ದರೆ, ಕೆಲವರಿಗೆ ಮದುವೆ ಅನಿವಾರ್ಯವಾಗಿತ್ತು. ಅಂಥವರು ಶಾರದಾ ದೇವಿಯ ಬಳಿ ಬಂದ ತಮ್ಮ ಬೇಸರ ತೋಡಿಕೊಳ್ಳುತ್ತಿದ್ದರು. ಆಗ ಶಾರದಾ ದೇವಿಯವರು ನೀಡುತ್ತಿದ್ದ ಉತ್ತರಗಳ ಸಂಗ್ರಹ ಇಲ್ಲಿದೆ: 

* ಕಾವಿಬಟ್ಟೆ ಹಾಕಿಕೊಂಡ ಮಾತ್ರಕ್ಕೆ ಎಲ್ಲವೂ ಆದಹಾಗೆ ಆಯಿತೇ? ಅದಿಲ್ಲದೆಯೂ ಭಗವಂತನನ್ನು ಕಾಣಬಹುದು. ಕಾವಿ ಬಟ್ಟೆಯ ಅಗತ್ಯ ತಾನೇ ಏನಿದೆ? ಭಗವಂತ ಎಲ್ಲವನ್ನೂ ಜೊತೆಜೊತೆಯಾಗಿಯೇ ಸೃಷ್ಟಿಸಿದ್ದಾನೆ. ಎರಡು ಕಣ್ಣು, ಎರಡು ಕಿವಿ, ಎರಡು ಕಾಲು –  ಹೀಗೆ ಎಲ್ಲವನ್ನೂ ಜೋಡಿಯಾಗಿ ಸೃಷ್ಟಿಸಿದ್ದಾನೆ, ಹಾಗೆಯೇ ಗಂಡು ಮತ್ತು ಹೆಣ್ಣನ್ನು ಕೂಡಾ.

** ಸಂಸಾರಸ್ಥರಿಗೆ ಸಾಧನೆ ಸುಲಭವೇ. ಅವರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನೆರವೇರಿಸಿದರೆ ಸಾಕು. ತಂದೆ ತಾಯಿಯರನ್ನು ಹರ ಗೌರಿಯರಂತೆಯೂ ಮಕ್ಕಳನ್ನು ನಾರಾಯಣರಂತೆಯೂ ಕಾಣಬೇಕು. ಅವರನ್ನು ಅದೇ ಭಾವನೆಯಿಂದ ನೋಡಿಕೊಳ್ಳಬೇಕು.

*** ಸಂಸಾರದಲ್ಲಿ ಇರುವುದು ಅಂದರೆ, ನಿನ್ನ ಪಾಲಿಗೆ ಮರದ ನೆರಳಿನಲ್ಲಿ ಇದ್ದಂತೆ. ಸಂಸಾರವೇನು ದೇವರಿಂದ ಬೇರೆಯೇ? ದೇವರು ಎಲ್ಲೆಲ್ಲಿಯೂ ಇದ್ದಾನೆ. ದೇವರು ನಿನ್ನನ್ನು ಎಲ್ಲಿಟ್ಟಿರುವನೋ ಅಲ್ಲಿ ತೃಪ್ತಿಯಿಂದಿರು. ನಂಬಿಕೆ ಇರಿಸಿಕೋ. ಯಾವ ಭಯವೂ ನಿನ್ನನ್ನು ಬಾಧಿಸದು. ಗೃಹಸ್ಥ ಕೂಡಾ ಈಶ್ವರಕೋಟಿಯಾಗಲು ಸಾಧ್ಯ ಎಂಬುದನ್ನು ನೆನಪಿಟ್ಟುಕೋ.

Leave a Reply