ತಾವೋ ತಿಳಿವು #35 ~ ಇಂಥದ್ದೊಂದು ದೇಶವಿದ್ದರೆ ಎಷ್ಟು ಚೆನ್ನ!

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao5

ಇಂಥದೊಂದು ದೇಶ ಇದ್ದರೆ …..

ಕೆಲವೇ ಕೆಲವು ಜನರಿರುವ
ಇಂಥದೊಂದು ದೇಶ ಇದ್ದರೆ
ಎಷ್ಟು ಚೆನ್ನ.

ಎಲ್ಲ ಐಷಾರಾಮಿ ಇದ್ದರೂ
ಜನ ಅವನ್ನು ಬಳಸುವುದಿಲ್ಲ.
ದೂರದ ಪ್ರಯಾಣ ಇಷ್ಟಪಡದ
ಸಾವಿಗಂಜುವ ಸಾಧಾರಣ ಮನುಷ್ಯರು.

ಅಲ್ಲಿ ಸಾಕಷ್ಟು ಹಡಗುಗಳು,
ಗಾಡಿಗಳು ಇದ್ದರೂ
ಹೋಗಲಿಕ್ಕೆ ಯಾವ
ಜಾಗವೂ ಇಲ್ಲ.

ಪ್ರತಿಯೊಬ್ಬರ ಕೈಯಲ್ಲೂ
ಆಯುಧಗಳು,
ಆದರೆ ಯಾರಿಗೂ ಯುದ್ಧದ ಮನಸಿಲ್ಲ.

ಜನರಿಗೆ
ಕಥೆ ಕವನ ಬರೆಯೋದಕ್ಕಿಂತ
ಭತ್ತದ ಗದ್ದೆಯಲ್ಲಿ
ಹಾಡಿ ಕುಣಿಯೋದು ಇಷ್ಟ.

ಮನೆಗಳನ್ನು ಸಿಂಗರಿಸಿ
ಗರಿ ಗರಿಯಾದ ಬಟ್ಟೆ ಧರಿಸಿ
ರುಚಿ ರುಚಿಯಾದ ಊಟ ಮಾಡಿ
ಹಬ್ಬ ಹರಿದಿನಗಳಲ್ಲಿ
ಮೈಮರೆಯೋದು ಅಂದ್ರೆ ಪಂಚಪ್ರಾಣ.

ಕೆಲವೇ ಕೆಲವು ಜನರಿರುವ
ಇಂಥದೊಂದು ದೇಶ ಇದ್ದರೆ
ಎಷ್ಟು ಚೆನ್ನ.

Leave a Reply