ಸ್ವಾತಂತ್ರ್ಯ ಬಯಸಿದ ಗಿಳಿ ಮತ್ತು ಮುಲ್ಲಾ ನಸ್ರುದ್ದೀನ್

Mulla

ಒಂದು ದಿನ ಮುಲ್ಲಾ ನಸ್ರುದ್ದೀನ್ ಶ್ರೀಮಂತನೊಬ್ಬನ ಮನೆ ಎದುರು ಹಾದುಹೋಗುತ್ತಿದ್ದ. ಅವರ ಮನೆ ಚಾವಡಿಯಲ್ಲಿ ನೇತುಹಾಕಿದ್ದ ಚಿನ್ನದ ಪಂಜರದಲ್ಲಿ ಗಿಳಿಯೊಂದಿತ್ತು. ಅದು ಒಂದೇ ಸಮನೆ “ಸ್ವಾತಂತ್ರ್ಯ…. ಸ್ವಾತಂತ್ರ್ಯ” ಎಂದು ಕಿರುಚುತ್ತಿತ್ತು.

ಇದನ್ನು ಕೇಳಿಸ ನಸ್ರುದ್ದೀನ್, ಆ ಗಿಳಿ, “ಪಾಪ ಆ ಗಿಳಿಯನ್ನು ಬಿಟ್ಟುಬಿಡುತ್ತೇನೆ. ಅದು ಸ್ವಾತಂತ್ರ್ಯ ಬಯಸುತ್ತಿದೆ” ಎಂದು ಯೋಚಿಸಿದ. ಅತ್ತಿತ್ತ ನೋಡಿ, ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ನಿಧಾನವಾಗಿ ಪಂಜರದ ಬಾಗಿಲು ತೆರೆದ. ಗಿಳಿ ತನ್ನ ಪಾಡಿಗೆ ತಾನು ಹಾರಿಹೋಗುತ್ತದೆ ಎಂದು ಕಾದುನಿಂತ.

ಆದರೆ ಆ ಗಿಳಿ ಪಂಜರದ ಸರಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು “ಸ್ವಾತಂತ್ರ್ಯ… ಸ್ವಾತಂತ್ರ್ಯ…” ಎಂದು ಕಿರುಚುವುದನ್ನು ಮುಂದುವರಿಸಿತು. ಅದನ್ನು ನೋಡಿ ನಸ್ರುದ್ದೀನ್ ಆಶ್ಚರ್ಯಚಕಿತನಾದ.  ಅವನು ಆ ಗಿಳಿಯನ್ನು ಬಲವಂತವಾಗಿ ಹೊರಕ್ಕೆ ತೆಗದು ಅದನ್ನು ಹಾರಿಬಿಟ್ಟು ಹೇಳಿದ, “ಈಗ ನೀನು ನಿಜವಾಗಿ ಸ್ವತಂತ್ರವಾಗಿರುವೆ. ನಿನಗೆ ಬೇಕಾದಲ್ಲಿಗೆ ಹೋಗು.”

ಆ ಗಿಳಿ ಹಾರಿ ಅಲ್ಲಿಯೇ ಮರದ ಕೆಳಗಿನ ಕೊಂಬೆಯ ಮೇಲೆ ಕುಳಿತಿತು. ಇನ್ನೇನು ನಸ್ರುದ್ದೀನ್ ನಿಶ್ಚಿಂತನಾಗಿ ಹತ್ತು ಹೆಜ್ಜೆ ನಡೆದಿರಬೇಕು… ಆ ಗಿಳಿ ಪಂಜರದೊಳಕ್ಕೆ ಮರಳಿ ಬಂದು “ಸ್ವಾತಂತ್ರ್ಯ… ಸ್ವಾತಂತ್ರ್ಯ…” ಎಂದು ಕಿರುಚುವುದನ್ನು ಮುಂದುವರಿಸಿತು.

Leave a Reply