ತಾವೋ ತಿಳಿವು #41 ~ ಸಂತರಿಗೆ ಸ್ವಂತ ಬುದ್ಧಿ ಇರುವುದಿಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao2

ಸಂತರಿಗೆ ಸ್ವಂತ ಬುದ್ಧಿ ಇರುವುದಿಲ್ಲ.
ಸಾಮಾನ್ಯರಲ್ಲಿ ಅವರು
‘ಅಸಾಮಾನ್ಯ’ ವನ್ನು ಕಾಣುತ್ತಾರೆ.

ಅವರಿಗೆ ಒಳ್ಳೆಯವರ ಬಗ್ಗೆ ಪ್ರೀತಿ
ಕೆಟ್ಟವರ ಬಗ್ಗೆಯೂ ಪ್ರೀತಿ
ಪ್ರೀತಿ ಒಂದು ಸಹಜ ಸ್ವಭಾವ.

ಅವರಿಗೆ ನಂಬಿಕೆಯ ಬಗ್ಗೆ ನಂಬಿಕೆ
ಅಪನಂಬಿಕೆಯ ಬಗ್ಗೆಯೂ ನಂಬಿಕೆ
ನಂಬಿಕೆ ಒಂದು ಹುಟ್ಟು ಗುಣ.

ಅವರು ಭೂಮಿಗೆ ಹತ್ತಿರವಾಗಿ ಬದುಕುತ್ತಾರೆ
ನೆಲದ ವ್ಯವಹಾರದಲ್ಲಿ ತಲೆಹಾಕುತ್ತಾರೆ
ಜನ ಕಣ್ಣು, ಕಿವಿ ಅರಳಿಸಿ
ಅವರನ್ನು ಬೆರಗಿನಿಂದ ನೋಡುತ್ತಾರೆ

ಒಟ್ಟಿನಲ್ಲಿ ಸಂತರು ಮಕ್ಕಳ ಹಾಗೆ.

Leave a Reply