ತಾವೋ ತಿಳಿವು #60 ~ ದೂರ ಹೋದಂತೆಲ್ಲ ದಾರಿ ಕುರುಡಾಗುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಗತ್ತಿನ ರಹಸ್ಯವನ್ನು
ಭೇದಿಸಲು
ಬಾಗಿಲು ತೆರೆಯಬೇಕಾಗಿಲ್ಲ.

ಕಿಟಕಿ ತೆರೆಯದೆ
ಆನಂದದ ಹಾದಿ
ಹುಡುಕಬಹುದು.

ದೂರ ಹೋದಂತೆಲ್ಲ
ದಾರಿ ಕುರುಡಾಗುವುದು.

ಅಂತೆಯೇ ಸಂತರು
ಹೋಗದೆಯೇ ಬರುತ್ತಾರೆ
ನೋಡದೇ ಕಾಣುತ್ತಾರೆ
ದುಡಿಯದೇ ಪಡೆಯುತ್ತಾರೆ.

Leave a Reply