ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ಹಂಚಿ : ಅಥರ್ವ ವೇದ

“ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” – ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ ಅನ್ನುತ್ತದೆ ಅಥರ್ವ ವೇದ. 

samahara

ಮ್ಮಲ್ಲಿ ಎಷ್ಟು ಸಾಮರ್ಥ್ಯವಿದೆಯೋ ಅಷ್ಟನ್ನೂ ದುಡಿಮೆಯಲ್ಲಿ ವಿನಿಯೋಗಿಸಬೇಕು. ಶಕ್ತಿಯನ್ನು ಪೋಲು ಮಾಡಬಾರದು. ಹೀಗೆ ದುಡಿದು ಗಳಿಸಿದ್ದನ್ನು ಸಹಜೀವಿಗಳೊಡನೆ ಹಂಚಿಕೊಳ್ಳಬೇಕು.  ನಮ್ಮ ಬುದ್ಧಿಶಕ್ತಿ, ನಮ್ಮ ತೋಳ್ಬಲಗಳೆಲ್ಲವೂ ಹೀಗೆ ಸ್ವಹಿತ ಮತ್ತು ಜನಹಿತಕ್ಕೆ ವಿನಿಯೋಗವಾಗಬೇಕು. 

ಇದನ್ನೇ ಅಥರ್ವ ವೇದ ಹೇಳುತ್ತಿರುವುದು; “ನೂರು ಕೈಗಳಿಂದ ದುಡಿಯಿರಿ, ಸಾವಿರ ಕೈಗಳಿಂದ ಹಂಚಿರಿ” – “ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ” (3:24:5) ಎಂದು. 

“ಆದ್ದರಿಂದ, ದುಡಿಯಿರಿ. ಚೆನ್ನಾಗಿ ಕೆಲಸ ಮಾಡಿ. ದುಡಿಮೆಯ ಫಲವನ್ನು ಸಮಾಜದ ಒಳಿತಿಗಾಗಿ ಬಳಸಿ. ಯಾರಿಗೆ ದುಡಿಮೆ ಸಾಧ್ಯವಿಲ್ಲವೋ, ಯಾರಿಂದ ಹೆಚ್ಚು ದುಡಿಯಲು ಸಾಧ್ಯವಿಲ್ಲವೋ, ಯಾರು ದುಡಿಯುವ ಅವಕಾಶವಾಗಲೀ ಅರ್ಹತೆಯಾಗಲೀ ಇಲ್ಲದೆ ಬವಣೆ ಪಡುತ್ತಿದ್ದಾರೋ ಅವರೊಂದಿಗೆ ನಿಮ್ಮ ದುಡಿಮೆಯನ್ನು ಹಂಚಿಕೊಳ್ಳಿ. ಎಷ್ಟು ದುಡಿಯುತ್ತೀರೋ ಅದರ ಹತ್ತು ಪಟ್ಟು ಹಂಚುವ ಮನಸ್ಥಿತಿ ನಿಮ್ಮದಾಗಿರಲಿ. ನಿಮಗೆ ಅಂಥ ಅವಕಾಶಗಳು ಒದಗಿಬರಲಿ” – ಇದು ಅಥರ್ವ ವೇದದ ಶ್ಲೋಕದ ಆಶಯ. 

 

Leave a Reply