ಒಬ್ಬ ಜಿಪುಣ ವ್ಯಾಪಾರಿ ತನ್ನ ನಾಯಿಯೊಡನೆ ಮರುಭೂಮಿಯಲ್ಲಿ ಸಾಗುತ್ತಿದ್ದ. ಅವನು ಬಹಳ ದೂರ ಹೋಗಬೇಕಾಗಿತ್ತು. ಹೆಗಲಲ್ಲಿ ಹೊತ್ತಿದ್ದ ಚರ್ಮದ ಚೀಲದಲ್ಲಿ ನೀರನ್ನೂ, ಬಗಲಿನ ಜೋಳಿಗೆಯಲ್ಲಿ ಆಹಾರವನ್ನೂ ಇರಿಸಿಕೊಂಡಿದ್ದ.
ಮರುಭೂಮಿಯಲ್ಲಿ ಕಾಲೆಳೆಯುತ್ತಾ ನಡೆಯುತ್ತಿದ್ದ ನಾಯಿಯೊಡನೆ ಸಾಗುತ್ತಿದ್ದ ಈ ವ್ಯಾಒಆರಿ ದುಃಖಡಿಸಿ ದುಃಖಡಿಸಿ ಅಳುತ್ತಿದ್ದ. ದಾರಿಯಲ್ಲಿ ಎದುರಾದವನೊಬ್ಬ ಅವನನ್ನು ತಡೆದು, “ಯಾಕೆ ಇಷ್ಟೊಂದು ದುಃಖಿಸುತ್ತಿದ್ದೀಯ? ಏನಾಯಿತು?” ಎಂದು ಕೇಳಿದ.
“ನನ್ನ ನಾಯಿ ವಿಪರೀತ ಬಾಯಾರಿದೆ. ಅದು ಇನ್ನೇನು ಸಾಯಲೂಬಹುದು. ಪಾಪ, ನನ್ನ ನಿಯತ್ತಿನ ನಾಯಿ ಅದು” ಅನ್ನುತ್ತಾ ಅಳು ಮುಂದುವರೆಸಿದ.
ಹೆಗಲ ಚೀಲದಲ್ಲಿ ನೀರಿದೆಯಲ್ಲ, ಅದನ್ನು ನಾಯಿಗೆ ಕುಡಿಸಬಾರದೆ?” ಕೇಳಿದ ದಾರಿಹೋಕ.
ತತ್ ಕ್ಷಣ ಆ ಜಿಪುಣ ವ್ಯಾಪಾರಿ “ಅಯ್ಯಾ! ಸ್ವಲ್ಪ ಸುಮ್ಮನಿರು. ಈ ನೀರು ನಾಯಿಗೆ ಕುಡಿಸಿದರೆ ಪೋಲಾಗುವುದಿಲ್ಲವೆ? ಮುಂದೆ ನನಗೆ ಬೇಕಾದರೆ, ಆಗ ನಾನೆಲ್ಲಿಗೆ ಹೋಗಲಿ?” ಎಂದು ಗದರಿ. ಮತ್ತೆ ಅಳಲು ಶುರು ಮಾಡಿದ!
(ಸಂಗ್ರಹ ಮತ್ತು ಅನುವಾದ : ಅಲಾವಿಕಾ)


Super story
LikeLike