ನಾಳೆ ಬರುವುದು ನಾಳೆಯೇ, ಈ ದಿನವನ್ನು ಸಂತಸದಿಂದ ಕಳೆಯಿರಿ : ಬೆಳಗಿನ ಹನಿ

ದೂರದೃಷ್ಟಿ ಇರಬೇಕು ನಿಜ. ನಾಳೆಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು ಅನ್ನುವುದೂ ನಿಜ. ಹಾಗೆಂದು ನಾಳೆಯ ಆಲೋಚನೆಗಳಲ್ಲೇ ಇಂದು ಮಾಡಬೇಕಾದ ಕೆಲಸಗಳಿಂದ ವಿಮುಖರಾಗುವುದು ಸರಿಯಲ್ಲ. ಇಂದು ಅನುಭವಿಸಬೇಕಾದ ಆನಂದದಿಂದ ನಮ್ಮನ್ನು ವಂಚಿಸಿಕೊಳ್ಳುವುದೂ ಸರಿಯಲ್ಲ.

22

ಇಂದಿನ ದುಡಿಮೆಯನ್ನು ನಾಳೆಗಾಗಿಯೂ ಕೊಂಚ ಎತ್ತಿಡುವುದು ಜಾಣ ನಡೆ. ಇತರ ಪ್ರಾಣಿಗಳಂತಲ್ಲದೆ ಮನುಷ್ಯನ ಬದುಕಿನಲ್ಲಿ ಮನೆ, ಮಕ್ಕಳು (ಕುಟುಂಬ) ಮತ್ತು ಸ್ವಾಭಿಮಾನಗಳು ಹೆಚ್ಚುವರಿಯಾಗಿರುತ್ತವೆ. ಅವುಗಳನ್ನು ಕಾಯ್ದುಕೊಳ್ಳುವುದು ಕೂಡ ಮನುಷ್ಯನ ಕರ್ತವ್ಯಗಳ ಸಾಲಿಗೆ ಸೇರುತ್ತದೆ. ಆದ್ದರಿಂದ ಉಳಿತಾಯ ಯಾವುದೇ ಮನುಷ್ಯನ ಮೂಲಭೂತ ಕರ್ತವ್ಯವಾಗಿದೆ. 

ಆದರೆ ಉಳಿತಾಯವನ್ನು ಒಂದು ಹೊರೆಯನ್ನಾಗಿ ಮಾಡಿಕೊಳ್ಳಬಾರದು. ಅದೊಂದು ಸಹಜ ಸಂಗತಿಯಾಗಬೇಕು ಹೊರತು ಅದೇ ನಮ್ಮ ಜೀವನವಾಗಬಾರದು. ಮುಂದೇನಾಗುತ್ತದೆಯೋ ಅನ್ನುವ ಭಯ, ಮುಂದೆ ಹೀಗೇ ಆಗಬೇಕು ಅನ್ನುವ ಹಠ ಮತ್ತು ಮುಂದೆ ಹೀಗೆ ಆಗದೆ ಹೋದರೆ ಗತಿ ಏನು ಅನ್ನುವ ಆತಂಕಗಳು ನಮ್ಮ ಈ ದಿನದ – ಈ ಕ್ಷಣದ ಬದುಕನ್ನು ಹಾಳು ಮಾಡುತ್ತವೆ. ಆದ್ದರಿಂದ ನಾಳೆಗಾಗಿ ನಮ್ಮ ಆಲೋಚನೆಗಳು ಕೇವಲ ಕಾಳಜಿಗೆ ಸೀಮಿತವಾಗಿರಬೇಕೇ ಹೊರತು, ಅದೊಂದು ಗೀಳಾಗಬಾರದು. ಈ ಗೋಳಿನಲ್ಲಿ ಇಂದಿನ ಸಂತಸವನ್ನು ಕಳೆದುಕೊಳ್ಳಬಾರದು ಅನ್ನುವುದು ಸಾಫೋಕ್ಲೀಸ್ ಹೇಳಿಕೆಯ ಆಶಯ. 

ಸಾಫೋಕ್ಲೀಸ್ ಯಾರು? 
ಪ್ರಾಚೀನ ಗ್ರೀಸಿನ ಪ್ರಮುಖ ದುರಂತ ನಾಟಕಕಾರರಲ್ಲಿ ಸಾಫೋಕ್ಲೀಸ್ ಒಬ್ಬನು. ಕ್ರಿ.ಪೂ.5ನೇ ಶತಮಾನ ಈತನ ಕಾಲಮಾನ. ಸಾಫೋಕ್ಲೀಸ್ 120ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದನೆಂದು ಹೇಳಲಾಗಿದ್ದು, ಈವರೆಗೆ ಪೂರ್ಣ ಪ್ರಮಾಣದಲ್ಲಿ ದೊರಕಿರುವುದು 7 ನಾಟಕಗಳು ಮಾತ್ರ. ಈತನ ಈಡಿಪಸ್ ಮತ್ತು ಅಂತಿಗೊನೆ ನಾಟಕಗಳು ಸಾರ್ವಕಾಲಿಕ ಶ್ರೇಷ್ಠ ನಾಟಕಗಳ ಸಾಲಿಗೆ ಸೇರುತ್ತವೆ.
ಸಾಫೋಕ್ಲೀಸನ ನಾಟಕಗಳಲ್ಲಿ ತತ್ತ್ವಜ್ಞಾನದ ಹೊಳಹುಗಳು ಹೇರಳವಾಗಿವೆ. ಜೀವನದ ಗಹನ ಸತ್ಯಗಳನ್ನು ಸರಳ ಮಾತುಗಳಲ್ಲಿ ಹೇಳುವ ಸಾಫೋಕ್ಲೀಸನ ನಾಟಕದ ಸಾಲುಗಳು ಈಗಲೂ ಮಾರ್ಗದರ್ಶಿ ಹೇಳಿಕೆಗಳಾಗಿ ಜನಪ್ರಿಯವಾಗಿವೆ.

Leave a Reply