ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ
ತಾವೋ ಸ್ವತಃ
ಏನನ್ನೂ ಮಾಡುವುದಿಲ್ಲವಾದರೂ
ಎಲ್ಲ, ತಾವೋ ಮೂಲಕವೇ ಪೂರ್ಣವಾಗುತ್ತವೆ.
ಅಧಿಕಾರದಲ್ಲಿರುವವರು ತಾವೋ ಒಪ್ಪಿಕೊಂಡಾಗ
ಯಾರೂ ಇನ್ನೊಬ್ಬರ ಮೇಲೆ ಹೊರೆ ಹೊರೆಸುವುದಿಲ್ಲ
ತಮ್ಮ ಕೆಲಸ ತಾವೇ ಮಾಡಿ ಮುಗಿಸುತ್ತಾರೆ.
ಇನ್ನೂ ಆಸೆ ಉಳಿಸಿಕೊಂಡವರನ್ನು
ಅನಾಮಧೇಯ ತಾವೋ ಸರಳತೆ ಕಟ್ಟಿ ಹಾಕುತ್ತದೆ.
ಬಯಕೆಗಳು ನಿಂತ ಕ್ಷಣದಲ್ಲೇ
ನೆಲೆಯಾಗುತ್ತದೆ ಸಂತ ಸಮಾಧಾನ.