ಮೈಕೇಲ್ ಏಂಜೆಲೋ ನೀಡಿದ ಉತ್ತರ

Michelangeloಪ್ರಸಿದ್ಧ ಶಿಲ್ಪ ಕಲಾವಿದ ಮೈಕೇಲ್ ಎಂಜೆಲೋನ ಕಲಾಕೇಂದ್ರಕ್ಕೆ ಒಮ್ಮೆ ಕಲಾಪ್ರೇಮಿ ಸಂದರ್ಶಕನೊಬ್ಬ ಬಂದನಂತೆ. ಮೈಕೇಲ್ ತಾನು ಸದ್ಯ ತಯಾರಿಸುತ್ತಿದ್ದ ಮೂರ್ತಿಯನ್ನು ಕುರಿತು ವಿವರಿಸುತ್ತಿದ್ದ. ಆ ಮೂರ್ತಿಯ ನಿರ್ಮಾಣ ಕಾರ್ಯವನ್ನು ನೋಡಲು ಅದೇ ಸಂದರ್ಶಕ ಹಿಂದೆಯೂ ಒಮ್ಮೆ ಬಂದಿದ್ದ. ಅವನು ಬಂದು ಹೋದಾಗಿನಿಂದ ಏನೆಲ್ಲ ಕೆಲಸಗಳು ನಡೆದವು ಎಂಬುದನ್ನು ಮೈಕೇಲ್ ವಿವರಿಸಿದ : “ಆ ಭಾಗವನ್ನು ಸ್ವಲ್ಪ ಬದಲಿಸಿದೆ, ಕೈಗಳ ಮಾಂಸಖಂಡ ಬಲಿಷ್ಠವಾಗಿ ತೋರುವಂತೆ ಮಾಡಿದೆ, ತುಟಿಗಳಲ್ಲಿ ಕೊಂಚ ಭಾವ ಪ್ರಕಾಶವಾಗುವ ಹಾಗೆ ಮಾಡಿದೆ, ಕಾಲುಗಳು ಶಕ್ತವಾಗಿ ಕಾಣುವಂಥ ಕೆತ್ತನೆಯ ಕೆಲಸ ಅಲ್ಪಸ್ವಲ್ಪ ನಡೆಯಿತು’ ಎಂದ.

ಸಂದರ್ಶಕ ಇನ್ನೂ ಕೆಲಸ ಮುಗಿಯಲಿಲ್ಲವೆಂಬ ಭಾವನೆಯಿಂದ ಇರಬೇಕು, “ಓಹ್! ಇಷ್ಟು ದಿನವೂ ಅತಿ ಸಾಮಾನ್ಯವಾದ ಸಣ್ಣಪುಟ್ಟ ಕೆಲಸಗಳನ್ನೆ ಮಾಡಿದುದೇ?” ಎಂದು ಉದ್ಗರಿಸಿದ.

ಮೈಕೇಲ್ ಅರ್ಥಪೂರ್ಣ ನಗೆ ನಕ್ಕು ಹೇಳಿದ, “ನೆನಪಿರಲಿ; ಸಾಮಾನ್ಯವೆನಿಸುವ ಈ ಸಣ್ಣಪುಟ್ಟ ಕೆಲಸಗಳಿಂದ ಪರಿಪೂರ್ಣತೆ ಉಂಟಾಗುತ್ತದೆ. ಆದರೆ ಪರಿಪೂರ್ಣತೆ ಎನ್ನುವುದು ಸಾಮಾನ್ಯವಲ್ಲ!”

(Trifles make perfection and perfection is nit trifle – Michelangelo)

Leave a Reply