ತಾವೋ ತಿಳಿವು #76 ~ ತಾವೋ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ

images

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಗೋಚರ ತಾವೋ
ಕಣ್ಣಿಗೆ ಕಟ್ಚಿಕೊಂಡಾಗ
ಜಗತ್ತು ಮೊಣಕಾಲೂರುವುದು.
ಇಲ್ಲಿ ಭಯಕ್ಕೆ ಜಾಗವಿಲ್ಲ
ಅಶಾಂತಿಗೆ ನೆಲೆ ಇಲ್ಲ
ಆತಂಕಕ್ಕೆ ಕಾರಣವಿಲ್ಲ.

ಹಾಯ್ದು ಹೋಗುವ ಪ್ರವಾಸಿಗರಿಗೆ
ಏರಿಳಿತದ ಹಾಡು ಇಷ್ಟ
ರುಚಿ ರುಚಿಯಾದ ಊಟ ಪಂಚಪ್ರಾಣ.
ಆದರೆ ತಾವೋ, ಪಕ್ಕಾ ಮಂದ್ರ ಸ್ಥಾಯಿ
ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ.

ಕಣ್ಣಿಗೆ ಕಾಣಿಸದು, ಕಿವಿಗೆ ಕೇಳಿಸದು
ಬಳಸಿದರೆ ಮಾತ್ರ, ತೀರದು
ಉಕ್ಕಿ ಉಕ್ಕಿ ಹರಿಯುವುದು

Leave a Reply