ಜೇಡ ಹೆಣೆದ ಬಲೆಯಂತೆ ಭಗವಂತನ ಸೃಷ್ಟಿ : ಬೆಳಗಿನ ಹೊಳಹು

ಯಥೋರ್ಣ ನಾಭಿಃ ಸೃಜತೇ ಗೃಹ್ಣತೇ ಚ : ತನ್ನದೇ ಹೊಕ್ಕುಳಿಂದ ಸ್ರವಿಸಿ ಬಲೆ ಹೆಣೆದು ಜೇಡವು ಅದನ್ನು ಪ್ರವೇಶಿಸುವಂತೆ.. (ಪರಮ ಅಸ್ತಿತ್ವವು ಜಗತ್ತನ್ನು ಸೃಷ್ಟಿಸಿ ಅದರೊಳಗೆ ಒಂದಾಗಿದೆ) ~ ಮುಂಡಕ ಉಪನಿಷತ್ತು

 

spider

“ಜೇಡವು ತನ್ನೊಳಗಿನ ದ್ರವವನ್ನು ಸ್ರವಿಸಿ, ಅದರಿಂದ ಬಲೆಯನ್ನು ಸೃಷ್ಟಿಸುತ್ತದೆ. ಅನಂತರ ಆ ಬಲೆಯನ್ನು ಪ್ರವೇಶಿಸಿ, ಅದರೊಳಗೆ ನಡೆಯುವ ವಿದ್ಯಮಾನಗಳಿಗೆ ಸೂತ್ರಧಾರನಾಗಿಯೂ ಸ್ವತಃ ಪಾತ್ರಧಾರಿಯೂ ಆಗುತ್ತದೆ. ಈ ಸೃಷ್ಟಿ ಮತ್ತು ಅದರೊಳಗೆ ಭಗವಂತನ ಲೀಲೆಯನ್ನು ಅರ್ಥ ಮಾಡಿಕೊಳ್ಳಬೇಕಾದ ವಿಧಾನ ಇದು” ಅನ್ನುತ್ತದೆ ಮುಂಡಕ ಉಪನಿಷತ್ತು. 

Leave a Reply