ಬೆಳಕಿದ್ದಲ್ಲಿ ಹುಡುಕುವುದು! ~ ಒಂದು ನಸ್ರುದ್ದೀನ್ ಕಥೆ

Mullaಮುಲ್ಲಾ ನಸ್ರುದ್ದೀನ್ ತನ್ನ ಕೈತೋಟದಲ್ಲಿ ಏನನ್ನೋ ಹುಡುಕುತ್ತಿದ್ದ.
“ಏನನ್ನು ಹುಡುಕುತ್ತಿದ್ದೀಯ ನಸ್ರುದ್ದೀನ್?” ಪಕ್ಕದ ಮನೆಯಾತ ವಿಚಾರಿಸಿದ.
“ನನ್ನ ಮನೆಯ ಬೀಗದ ಕೈ ಕಳೆದುಹೋಗಿದೆ” ಅಂದ ನಸ್ರುದ್ದೀನ್.
“ಅದನ್ನು ಎಲ್ಲಿ ಬೀಳಿಸಿದ್ದೆ ಅಂತೇನಾದರೂ ನೆನಪಿದೆಯೇ?”
“ಹೌದು. ಅದನ್ನು ಮನೆಯೊಳಗೆ ಬೀಳಿಸಿಕೊಂಡಿದ್ದೆ.”

ನಸ್ರುದ್ದೀನನ ಉತ್ತರದಿಂದ ಪಕ್ಕದ ಮನೆಯಾತ ಗಲಿಬಿಲಿಗೊಂಡ. “ಹಾಗಾದರೆ ಅದನ್ನು ಇಲ್ಯಾಕೆ ಹುಡುಕ್ತಿದ್ದೀಯ ನಸ್ರುದ್ದೀನ್!?”
“ಏಕೆಂದರೆ ಇಲ್ಲಿ ಅಲ್ಲಿಗಿಂತ ಹೆಚ್ಚು ಬೆಳಕಿದೆ” ಮುಲ್ಲಾ ತಣ್ಣಗೆ ಉತ್ತರಿಸಿದ.

Leave a Reply