ಸನಾತನ ಋಷಿಗಳ ಯಾದಿಯಲ್ಲಿ ಸಪ್ತರ್ಷಿಗಳಿಗೆ ವಿಶಿಷ್ಟ ಸ್ಥಾನವಿದೆ. ವಿವಿಧ ಮನ್ವಂತರಗಳಲ್ಲಿ ವಿವಿಧ ಋಷಿಗಳು ಮಂಡಲದಲ್ಲಿ ಉಲ್ಲೇಖಗೊಂಡಿದ್ದಾರೆ. ಕೆಲವು ಋಷಿಗಳು ಎಲ್ಲ ಮನ್ವಂತರದಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತಾರೆ.
ವಿವಿಧ ಸನಾತನ ಸಾಹಿತ್ಯದಲ್ಲಿ ಪ್ರಸ್ತುತ ಮನ್ವಂತರದ ಸಪ್ತರ್ಷಿಗಳ ಪಟ್ಟಿಯಲ್ಲಿ ವ್ಯತ್ಯಾಸವಿದ್ದು, ಅವು ಹೀಗಿವೆ:
ಜೈಮಿನಿ ಬ್ರಾಹ್ಮಣದಲ್ಲಿ : ಅಗಸ್ತ್ಯ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ ಮತ್ತು ವಿಶ್ವಾಮಿತ್ರ
ಬೃಹದಾರಣ್ಯಕ ಉಪನಿಷತ್ತಿನಲ್ಲಿ : ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ, ವಸಿಷ್ಠ, ಕಶ್ಯಪ, ಅತ್ರಿ ಮತ್ತು ಭೃಗು
ಗೋಪಥ ಬ್ರಾಹ್ಮಣದಲ್ಲಿ : ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ, ಗೌತಮ, ಭಾರದ್ವಾಜ, ಗುಂಗು, ಅಗಸ್ತ್ಯ, ಭೃಗು ಮತ್ತು ಕಶ್ಯಪ
ವೇದೋತ್ತರ ಸಾಹಿತ್ಯದಲ್ಲಿ : ವಸಿಷ್ಠ, ಮರೀಚಿ, ಪುಲಸ್ತ್ಯ, ಪುಲಹ, ಅತ್ರಿ, ಅಂಗೀರಸ ಮತ್ತು ಕ್ರತು
ವಿವಿಧ ಮನ್ವಂತರದಲ್ಲಿ ಸಪ್ತರ್ಷಿಗಳ ಪಟ್ಟಿ
ಸ್ವಾಯಂಭುವ ಮನ್ವಂತರದಲ್ಲಿ : ಮರೀಚಿ, ಅತ್ರಿ, ಅಂಗೀರಸ, ಪುಲಹ, ಕ್ರತು, ಪುಲಸ್ತ್ಯ ಮತ್ತು ವಸಿಷ್ಠ
ಸ್ವರೋಚಿಶ ಮನ್ವಂತರದಲ್ಲಿ : ಉರ್ಜ, ಸ್ತಂಭ, ಪ್ರಾಣ, ನಂದ, ಋಷಭ, ನಿಶಾಚರ ಮತ್ತು ಅರ್ವಾರಿವ್ರತ
ಔತ್ತಮಿ ಮನ್ವಂತರದಲ್ಲಿ : ಕುಕುಂಧಿ, ಕುರುಂದಿ, ದಲಯ, ಶಂಖ, ಪ್ರವಾಹಿತ, ಮಿತ ಮತ್ತು ಸಮ್ಮಿತ
ತಾಮಸ ಮನ್ವಂತರದಲ್ಲಿ : ಜ್ಯೋತಿರ್ಧಾಮ, ಪೃಥು, ಕವ್ಯ, ಚೈತ್ರ, ಅಗ್ನಿ, ಬಣಕ ಮತ್ತು ಪೀವರ
ರೈವತ ಮನ್ವಂತರದಲ್ಲಿ : ಹಿರಣ್ಯರೋಮ, ವೇದಶ್ರೀ, ಊರ್ಧಬಾಹು, ವೇದಬಾಹು, ಸುಧಾಮನ್, ಪರ್ಜನ್ಯ, ಮಹಾಮುನಿ
ಚಾಕ್ಷುಷ ಮನ್ವಂತರದಲ್ಲಿ : ಸುಮೇಧಸ, ವಿರಾಜಸ, ಹವಿಶ್ಮತ, ಉತ್ತಮ, ಮಧು, ಅಭಿನಮನ ಮತ್ತು ಸಹಿಷ್ಣು
ವೈವಸ್ವತ ಮನ್ವಂತರದಲ್ಲಿ : ಕಶ್ಯಪ, ಅತ್ರಿ, ವಸಿಷ್ಟ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ಭಾರದ್ವಾಜ
ಸಾವರ್ಣಿ ಮನ್ವಂತರದಲ್ಲಿ : ದೀಪ್ತಿಮತ, ಗಾಲವ, ಪರಶುರಾಮ, ಕೃಪ, ದ್ರೌಣಿ (ಅಶ್ವತ್ಥಾಮ), ವ್ಯಾಸ ಮತ್ತು ಋಷ್ಯಶೃಂಗ
ದಕ್ಷ ಸಾವರ್ಣಿ ಮನ್ವಂತರಲ್ಲಿ : ಸಾಯಣ, ದ್ಯುತಿಮತ, ವಸು, ಭವ್ಯ, ಮೇಧಾತಿಥಿ, ಜ್ಯೋತಿಷ್ಮಾನ್ ಮತ್ತು ಸತ್ಯ
ಬ್ರಹ್ಮ ಸಾವರ್ಣಿ ಮನ್ವಂತರದಲ್ಲಿ : ಹವಿಷ್ಮಾನ್, ಸುಕೃತಿ, ಸತ್ಯ, ಅಪಮ್ಮುರ್ತಿ, ನಭಗ, ಅಪ್ರತಿಮೌಜಸ ಮತ್ತು ಸತ್ಯಕೇತು
ಧರ್ಮ ಸಾವರ್ಣಿ ಮನ್ವಂತರದಲ್ಲಿ : ನಿಶ್ಚರ, ಅಗ್ನಿತೇಜಸ, ವಪುಶ್ಮಾನ್, ವಿಷ್ಣು, ಆರುಣಿ, ಹವಿಷ್ಮಾನ್ ಮತ್ತು ಅನಘ
ರುದ್ರ ಸಾವರ್ಣೀ ಮನ್ವಂತರದಲ್ಲಿ : ತಪಸ್ವಿ, ಸುತಪಸ್, ತಪೋಮೂರ್ತಿ, ತಪೋಧೃತಿ, ತಪೋದ್ಯುತಿ ಮತ್ತು ತಪೋಧನ
ರೌಚ್ಯ ಮನ್ವಂತರದಲ್ಲಿ : ನಿರ್ಮೋಹ, ತತ್ತ್ವದರ್ಶಿನ್, ನಿಶ್’ಪ್ರಕಂಪ, ನಿರುತ್ಸುಕ, ಧೃತಿಮತ್, ಅವ್ಯಯ ಮತ್ತು ಸುತಪಸ
ಭೌತ್ಯ ಮನ್ವಂತರದಲ್ಲಿ : ಅಗ್ನಿಬಾಹು, ಶುಚಿ, ಔಕ್ರ, ಮಾಗಧ, ಗೃಧ್ರ, ಯುಕ್ತ ಮತ್ತು ಅಜಿತ
ಜೈನ ಧರ್ಮದಲ್ಲಿ ಸಪ್ತರ್ಷಿಗಳು : ಸುರಮನ್ಯು, ಶ್ರೀಮನ್ಯು, ಶ್ರೀನಿಚಯ, ಸರ್ವಸುಂದರ, ಜಯವಾನ್, ವಿನಯಲಾಲ ಮತ್ತು ಜಯಮಿತ್ರ