ಪ್ರೇಮವೆಂದರೆ ತೊಡಗುವಿಕೆ… ಅಷ್ಟೇ : ಅರಳಿಮರ POSTER

ಪ್ರೇಮವೆಂದರೆ ತಿಳಿವಳಿಕೆಯಲ್ಲ. ಪ್ರೇಮವೆಂದರೆ ಅನುಭವವೂ ಅಲ್ಲ. ಪ್ರೇಮವೆಂದರೆ, ತೊಡಗಿಕೊಳ್ಳುವಿಕೆ. ಪ್ರೇಮವೆಂದರೆ ಕೊಟ್ಟುಕೊಳ್ಳುವ ಅನುಭೂತಿ.  

attara

ಪ್ರೇಮವನ್ನು ಬಲ್ಲವರು ಅದನ್ನು ಪರೀಕ್ಷಿಸುವುದಿಲ್ಲ,
ಕಾಯುತ್ತಾ ಕೂರುವುದಿಲ್ಲ
ಪ್ರೇಮವನ್ನು ಬಲ್ಲವರು ಸುಮ್ಮನೆ ಪ್ರೇಮಿಸಲು ತೊಡಗುತ್ತಾರೆ; ಅಷ್ಟೇ.

ಇದು ಹೇಗೆಂದರೆ,
ಅತ್ತಾರ್ ಹೇಳುತ್ತಾನೆ :

ಮುಂಬತ್ತಿಯ ಮುಂದಿನ ಮೂರು ಚಿಟ್ಟೆಗಳಂತೆ.
ಮೊದಲನೆಯದು ಉರಿಯುತ್ತಿರುವ ಮುಂಬತ್ತಿ ಎದುರು ನಿಂತು,
“ನನಗೆ ಪ್ರೇಮದ ಬಗ್ಗೆ ತಿಳಿದಿದೆ” ಅನ್ನುತ್ತದೆ.
ಎರಡನೆಯದು ಮುಂಬತ್ತಿಯ ಸಮೀಪ ಹೋಗಿ, ಉರಿಗೆ ತನ್ನ ರೆಕ್ಕೆ ಸೋಕಿಸಿ,
“ನನಗೆ ಪ್ರೇಮದ ಜ್ವಾಲೆ ಹೇಗೆ ಸುಡುತ್ತದೆಂದು ತಿಳಿದಿದೆ” ಅನ್ನುತ್ತದೆ.
ಮತ್ತು ಮೂರನೆಯದು;
ಏನೂ ಮಾತನಾಡದೆ ಸುಮ್ಮನೆ ಹೋಗಿ ಉರಿಯ ಮೊಗ್ಗಿನೊಳಗೆ ತನ್ನನ್ನು ಎಸೆದುಕೊಳ್ಳುತ್ತದೆ
ಮತ್ತು ದಹಿಸಿಹೋಗುತ್ತದೆ.

ವಾಸ್ತವದಲ್ಲಿ ಪ್ರೇಮದ ಬಗ್ಗೆ ಸರಿಯಾದ ತಿಳಿವಳಿಕೆ ಇದ್ದುದು ಆ ಮೂರನೆ ಚಿಟ್ಟೆಗ ಮಾತ್ರ.

ಪ್ರೇಮವೆಂದರೆ ತಿಳಿವಳಿಕೆಯಲ್ಲ. ಪ್ರೇಮವೆಂದರೆ ಅನುಭವವೂ ಅಲ್ಲ. ಪ್ರೇಮವೆಂದರೆ, ತೊಡಗಿಕೊಳ್ಳುವಿಕೆ. ಪ್ರೇಮವೆಂದರೆ, ನಮ್ಮನ್ನು ನಾವು ಕೊಟ್ಟುಕೊಳ್ಳುವ ಅನುಭೂತಿ.  

Leave a Reply