ಇಬ್ಬರು ಮಕ್ಕಳಿಗೆ 12 ಗೋಲಿಗಳಿದ್ದ ಒಂದು ಚೀಲ ದಾರಿಯಲ್ಲಿ ಸಿಕ್ಕಿತು. ಅವನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಆ ಮಕ್ಕಳಿಬ್ಬರು ಜಗಳಾಡತೊಡಗಿದರು.
ವಿಷಯ ತೀರ್ಮಾನವಾಗದೇ ಹೋದಾಗ, ಕೊನೆಗೆ ಮುಲ್ಲಾ ನಸ್ರುದ್ದೀನ ನನ್ನು ಜಗಳ ಬಗೆಹರಿಸುವಂತೆ ಕೇಳಿಕೊಂಡರು.
ಮುಲ್ಲಾ ನಸ್ರುದ್ದೀನ : ಈ ಸಮಸ್ಯೆಯನ್ನು ಮನುಷ್ಯರು ಬಗೆಹರಿಸಿಕೊಳ್ಳುವಂತೆ ತೀರ್ಮಾನ ನೀಡಲೋ ಅಥವಾ ಭಗವಂತ ನಿರ್ಣಯಿಸುವಂತೆ ಆದೇಶ ಕೊಡಲೋ?
ಮಕ್ಕಳು : ಭಗವಂತನ ಮಾತು ಯಾರೂ ಮೀರಲಿಕ್ಕಾಗುವುದಿಲ್ಲ. ಭಂಗವಂತ ತೀರ್ಪು ಕೊಡುವಂತೆಯೇ ತೀರ್ಮಾನ ಹೇಳು.
ಮುಲ್ಲಾ ನಸ್ರುದ್ದೀನ ಒಮ್ಮೆ ಆ ಗೋಲಿಗಳನ್ನು ಎಣಸಿ ಒಬ್ಬನಿಗೆ ಮೂರು ಗೋಲಿ ಕೊಟ್ಟ ಇನ್ನೊಬ್ಬನಿಗೆ ಒಂಭತ್ತು.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)